ಕರ್ನಾಟಕ

karnataka

ETV Bharat / state

ಕಾಂಗ್ರೆಸ್ - ಜೆಡಿಎಸ್ ನಡುವೆ ಮೂಡದ ಒಮ್ಮತ... ಫಲ ಕಾಣದ ಸಂಧಾನ ಸಭೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೈತ್ರಿ ಧರ್ಮದ ವಿರೋಧಿ ಚಟುವಟಿಕೆಗಳು ಎರಡು ಪಕ್ಷಗಳಿಂದ ನಡೆಯುತ್ತಿದೆ. ಸ್ಥಳೀಯ ಕಾಂಗ್ರೆಸ್ ಮತ್ತು ಜೆಡಿಎಸ್ ಮುಂಖಡರ ಕಿತ್ತಾಟ ಮೈತ್ರಿ ಅಭ್ಯರ್ಥಿ‌ಗೆ ತಲೆ ನೋವು ತಂದಿದೆ.

ಸಂಧಾನ ಸಭೆ

By

Published : Apr 2, 2019, 4:51 PM IST

ನೆಲಮಂಗಲ: ಕರ್ನಾಟಕ‌ದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜಂಟಿ‌ಯಾಗಿ ಲೋಕಸಭಾ ಚುನಾವಣೆ‌ಗೆ ಹೊರಟಿದ್ದು, ಲೋಕಸಮರದಲ್ಲಿ ಬಹುದೊಡ್ಡ ಗೆಲುವಿನ ಕನಸು ಹೊತ್ತುಕೊಂಡಿದೆ.

ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೈತ್ರಿ ಧರ್ಮದ ವಿರೋಧಿ ಚಟುವಟಿಕೆಗಳು ಎರಡು ಪಕ್ಷಗಳಿಂದ ನಡೆಯುತ್ತಿದೆ. ಸ್ಥಳೀಯ ಕಾಂಗ್ರೆಸ್ ಮತ್ತು ಜೆಡಿಎಸ್ ಮುಂಖಡರ ಕಿತ್ತಾಟ ಮೈತ್ರಿ ಅಭ್ಯರ್ಥಿ‌ಗೆ ತಲೆ ನೋವು ತಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜೆಡಿಎಸ್ ಮತ್ತು ಕಾಂಗ್ರೆಸ್ ಸ್ಥಳೀಯ ಮುಖಂಡರ ಜಂಟಿ ಚುನಾವಣಾ ಪ್ರಚಾರಕ್ಕೆ ಅಡೆತಡೆ‌ಗಳು ಮೊದಲಿನಿಂದಲೂ ಇತ್ತು. ವೀರಪ್ಪ ಮೊಯ್ಲಿ ನೇತೃತ್ವದ‌ದಲ್ಲಿ ಎರಡು ಪಕ್ಷಗಳ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅನಂತರ ಚುನಾವಣಾ ಪ್ರಚಾರಕ್ಕೆ ಜಂಟಿಯಾಗಿ ಹೋಗುವ ತೀರ್ಮಾನ ಮಾಡಲಾಯಿತು.

ಫಲ ಕಾಣದೆ ಮುಕ್ತಾಯವಾದ ಸಂಧಾನ ಸಭೆ

ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನೇಗೌಡ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡ ವಿರುದ್ಧ ಬಂಡಾಯ ಎದ್ದಿದ್ದ ಕಾಂಗ್ರೆಸ್​​​​ನ ಮುದ್ದಹನುಮೇಗೌಡ ನಾಮಪತ್ರ ವಾಪಸ್​ ತೆಗೆದುಕೊಳ್ಳುವವರೆಗೂ ಜಂಟಿ ಪತ್ರಿಕಾ‌ಗೋಷ್ಠಿ‌ಗೆ ಬರುವುದಿಲ್ಲ ಎಂದು ಬೇಡಿಕೆ ಇಟ್ಪಿದ್ದರು.

ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ವಿರುದ್ಧ ಎರಡು ಭಾರಿ ಸೋಲನುಭವಿಸಿದ ಅಸಮಾಧಾನ ಮುನೇಗೌಡ‌ರಿಗೆ ಇತ್ತು ಎನ್ನಲಾಗಿದೆ. ಟಿ. ವೆಂಕಟರಮಣಯ್ಯ ಸ್ವತಃ ಪೋನ್ ಮಾಡಿ ಜಂಟಿ ಪತ್ರಿಕಾಗೋಷ್ಠಿ‌ಗೆ ಬರುವಂತೆ ಆಹ್ವಾನ ಕೊಟ್ಟರೂ ಮುನೇಗೌಡರು ತಮ್ಮ ಹಳೇ ರಾಜಕೀಯ ದ್ವೇಷ ಮುಂದುವರಿಸಿದರು.

ಇಂದು ಬೆಳಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿತ್ತು. ಅದರೆ ಇದಕ್ಕೂ ಮುನ್ನ ಜೆಡಿಎಸ್ ಕಚೇರಿಯಲ್ಲಿ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಮುನೇಗೌಡ ಮತ್ತು ಟಿ. ವೆಂಕಟರಮಣಯ್ಯ ನಡುವೆ ಸಂಧಾನ ನಡೆಸಲಾಯಿತು.

ಎರಡು ತಾಸು ನಡೆದ ಸಂಧಾನ ಸಭೆಯಲ್ಲಿ ಮುನೇಗೌಡ‌ರ ಷರತ್ತುಗಳಿಗೆ ಟಿ.ವೆಂಕಟರಮಣಯ್ಯ ಮಣಿಯದ ಪರಿಣಾಮ 10 ಗಂಟೆಗೆ ಶುರುವಾಗಬೇಕಿದ್ದ ಪತ್ರಿಕಾಗೋಷ್ಠಿ 12 ಗಂಟೆಗೆ ಶುರುವಾಯಿತು. ಮೇಲ್ನೋಟಕ್ಕೆ ಎರಡೂ ಪಕ್ಷಗಳ ಮುಂಖಡರು ಮೈತ್ರಿ ಮಂತ್ರ ಹೇಳುತ್ತಿದ್ದರೂ ಅಂತಿಮವಾಗಿ ಈ ಭಿನ್ನಾಭಿಪ್ರಾಯಗಳು ಎಲ್ಲಿಗೆ ತಲುಪಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

ABOUT THE AUTHOR

...view details