ಕರ್ನಾಟಕ

karnataka

ETV Bharat / state

ಪದವಿ ಕೋರ್ಸ್ ಬದಲಾವಣೆಗೆ ಹೆಚ್ಚುವರಿ ಶುಲ್ಕ, ಬಡ ವಿದ್ಯಾರ್ಥಿಗಳು ಕಂಗಾಲು

ಪದವಿ ಕೋರ್ಸ್ ಬದಲಾವಣೆ ಮಾಡಿಕೊಂಡು ವಿದ್ಯಾರ್ಥಿಗಳು ಹೆಚ್ಚುವರಿ ಶುಲ್ಕ ಕಟ್ಟಬೇಕಾಗಿದ್ದು, ವಿಶ್ವವಿದ್ಯಾಲಯದ ಹೊಸ ನಿಯಮದಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

By

Published : Oct 21, 2022, 10:00 AM IST

kn_bng
ಕಾಲೇಜು ವಿದ್ಯಾರ್ಥಿಗಳು

ದೊಡ್ಡಬಳ್ಳಾಪುರ: ಪದವಿ ಕೋರ್ಸ್ ಬದಲಾವಣೆಗೆ ವಿದ್ಯಾರ್ಥಿಗಳು ಎರಡೆರಡು ಬಾರಿ ಶುಲ್ಕ ಕಟ್ಟ ಬೇಕಾಗಿದ್ದು, ಹೆಚ್ಚುವರಿ ಶುಲ್ಕ ಕಟ್ಟಲಾಗದ ಬಡ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ಪದವಿ ಹಂತದಲ್ಲಿ ವಿದ್ಯಾರ್ಥಿಗಳು ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಸಂಯೋಜನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಪ್ರಥಮ ವರ್ಷದ ಪದವಿ ಸೇರಿದಾಗ ಕೋರ್ಸ್ ಆಯ್ಕೆಯಲ್ಲಿ ವಿದ್ಯಾರ್ಥಿಗಳಿಗೆ ಗೊಂದಲ ಇರುವುದು ಸಾಮಾನ್ಯ. ತರಗತಿ ಪ್ರಾರಂಭವಾದ ಶುರುವಿನಲ್ಲೇ ತಮ್ಮ ಕೋರ್ಸ್​ಗಳ ಬದಲಾವಣೆ ಮಾಡಿಕೊಂಡು ತಮ್ಮ ಆಸಕ್ತಿಯ ವಿಷಯಗಳಲ್ಲಿ ಪದವಿ ಪಡೆಯುತ್ತಾರೆ. ಆದರೇ, ಈ ವರ್ಷ ಕೋರ್ಸ್ ಬದಲಾವಣೆ ಮಾಡಿಕೊಂಡು ವಿದ್ಯಾರ್ಥಿಗಳು ಹೆಚ್ಚುವರಿ ಶುಲ್ಕ ಕಟ್ಟಬೇಕಾದ ಸ್ಥಿತಿ ಉಂಟಾಗಿದ್ದು ಇದರಿಂದ ಬಡ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ದೊಡ್ಡಬಳ್ಳಾಪುರ ನಗರದ ಸರ್ಕಾರಿ ಪದವಿ ಕಾಲೇಜ್​ನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಲಾ ವಿಭಾಗಕ್ಕೆ ಸೇರಿಕೊಂಡಿದ್ದಾರೆ. ಈಗಾಗಲೇ ವಾಣಿಜ್ಯ ವಿಭಾಗಕ್ಕೆ ಸೇರುವಾಗ ಆನ್​ಲೈನ್​ನಲ್ಲಿ 3,900 ರೂಪಾಯಿ ಕಾಲೇಜ್ ಶುಲ್ಕ ಪಾವತಿಸಿದ್ದಾರೆ. ಈಗ ಕಲಾ ವಿಭಾಗಕ್ಕೆ ಸೇರ ಬೇಕಾದರೆ ಒಂದು ಸಾವಿರ ದಂಡದೊಂದಿಗೆ ಐದು ಸಾವಿರ ಶುಲ್ಕ ಕಟ್ಟಬೇಕಾಗಿದೆ. ಈಗಾಗಲೇ ವಾಣಿಜ್ಯ ವಿಭಾಗಕ್ಕೆ ಕಟ್ಟಿರುವ 3,900 ರೂಪಾಯಿ ಶುಲ್ಕವನ್ನೇ ಕಲಾ ವಿಭಾಗಕ್ಕೆ ಪರಿಗಣಿಸಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ನೇರವಾಗ ಬೇಕೆಂಬುದು ಪದವಿ ವಿದ್ಯಾರ್ಥಿಗಳ ಬೇಡಿಕೆಯಾಗಿದೆ.

ವಿಶ್ವವಿದ್ಯಾಲಯಗಳು ವಿದ್ಯಾ ಕೇಂದ್ರಗಳಾಗ ಬೇಕೆ ಹೊರತು ಬಡ ವಿದ್ಯಾರ್ಥಿಗಳ ಪಾಲಿಗೆ ವಸೂಲಿ ಕೇಂದ್ರಗಳಾಗ ಬಾರದು, ಒಂದೇ ಕಾಲೇಜ್, ಒಂದೇ ವರ್ಷ, ಕೋರ್ಸ್ ಬದಲಾವಣೆಯಷ್ಟೇ ಇದಕ್ಕಾಗಿ ದಂಡದ ಜೊತೆಗೆ ಎರೆಡೆರೆಡು ಬಾರಿ ಶುಲ್ಕ ಕಟ್ಟಬೇಕಾದದ್ದು ಯಾವ ನ್ಯಾಯವೆಂಬುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.

ಇದನ್ನೂ ಓದಿ:ತಮ್ಮದಲ್ಲದ ತಪ್ಪಿಗೆ ಎಂಡೋಸಲ್ಫಾನ್ ಪೀಡಿತರ ಪರದಾಟ: ಸೌಲಭ್ಯಕ್ಕಾಗಿ ಮರು ಸಮೀಕ್ಷೆಗೆ ಆಗ್ರಹ

ABOUT THE AUTHOR

...view details