ಕರ್ನಾಟಕ

karnataka

ETV Bharat / state

ವಿಮಾನದಲ್ಲಿ ಸೀಟಿನ ಕೆಳಗಡೆ ಬಚ್ಚಿಟ್ಟು ಕಳ್ಳಸಾಗಣೆ: 1.37 ಕೋಟಿ ಮೌಲ್ಯದ 24 ಚಿನ್ನದ ಬಿಸ್ಕತ್ ವಶಕ್ಕೆ

ವಿಮಾನದ ಸೀಟಿನ ಕೆಳಗೆ ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ 24 ಚಿನ್ನದ ಬಿಸ್ಕತ್​ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

By

Published : Jan 6, 2022, 8:18 AM IST

24 gold-biscuits-seized-in bengaluru kempegowda airport
ಚಿನ್ನದ ಬಿಸ್ಕತ್ ಕಳ್ಳಸಾಗಾಣಿಕೆ

ದೇವನಹಳ್ಳಿ:ವಿಮಾನದಲ್ಲಿ ಪ್ರಯಾಣಿಕನ ಸೀಟಿನ ಕೆಳಗೆ ಬಚ್ಚಿಟ್ಟು ಕಳ್ಳಸಾಗಾಣಿಕೆ ಮಾಡುತ್ತಿದ್ದ 24 ಚಿನ್ನದ ಬಿಸ್ಕತ್​ಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಚಿನ್ನ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ.

ದುಬೈನಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಂಡಿಗೋ 6 ಇ 096 ವಿಮಾನದ ಸೀಟಿನ ಕೆಳಗೆ ಚಿನ್ನ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು, 1.37 ಕೋಟಿ ರೂಪಾಯಿ ಮೌಲ್ಯದ 24 ಚಿನ್ನದ ಬಿಸ್ಕತ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಚಿನ್ನದ ಬಿಸ್ಕತ್​​ಗಳನ್ನು ಅಕ್ರಮವಾಗಿ ತಂದ ಪ್ರಯಾಣಿಕ ಯಾರೆಂಬುದು ತಿಳಿದು ಬಂದಿಲ್ಲ. ಸುಮಾರು 2.80 ಕೆಜಿ ಬಂಗಾರ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು ಆರೋಪಿ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.

ವಿಮಾನದ ಮುಂದಿನ ಪಯಣದ ಅವಧಿಯಲ್ಲಿ ಮತ್ತೊಬ್ಬ ಕಳ್ಳಸಾಗಣೆದಾರರು ಬಂದು, ಸೀಟಿನ ಕೆಳಗೆ ಬಚ್ಚಿಟ್ಟ ಚಿನ್ನ ತೆಗೆದುಕೊಂಡು ಹೋಗುವ ಬಗ್ಗೆ ಯೋಜನೆ ರೂಪಿಸಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿಯೇ ಚಿನ್ನವನ್ನು ಸೀಟಿನಡಿಯೇ ಬಿಟ್ಟಿರುವ ಸಾಧ್ಯತೆಯಿದೆ. ಬೂದು ಬಣ್ಣದ ಡಕ್ಟ್ ಟೇಪ್​ನಲ್ಲಿ ಚಿನ್ನದ ಬಿಸ್ಕತ್​ಗಳನ್ನು ಸುತ್ತಿ ಪ್ರಯಾಣಿಕನ ಸೀಟಿನ ಕೆಳಭಾಗದಲ್ಲಿ ಅಂಟಿಸಿಡಲಾಗಿತ್ತು.

ಇದನ್ನೂ ಓದಿ:ಕೂಲ್​ಡ್ರಿಂಕ್ಸ್​ ಎಂದು ಮದ್ಯ ಕುಡಿಸಿ ಬುದ್ಧಿಮಾಂದ್ಯೆ ಮೇಲೆ ಇಬ್ಬರಿಂದ ಅತ್ಯಾಚಾರ

For All Latest Updates

ABOUT THE AUTHOR

...view details