ಬಾಗಲಕೋಟೆ:ಜಾಗೃತ ದೇವಾಲಯ ಎಂದು ಪ್ರಸಿದ್ಧಿಯಾಗಿರುವ ತುಳಸಿಗೇರಿ ಆಂಜನೇಯ ದೇವಸ್ಥಾನದಲ್ಲಿ, ಬೇರೆಯವರ ಮೊಬೈಲ್ ತಮ್ಮದು ಎಂದು ಇಬ್ಬರು ಯುವತಿಯರು ಕಸಿದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಬೇರೆಯವರ ಮೊಬೈಲ್ ತಮ್ಮದೆಂದು ಕಸಿದೊಯ್ದ ಯುವತಿಯರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ತುಳಸಿಗೇರಿ ಆಂಜನೇಯ ದೇವಸ್ಥಾನದಲ್ಲಿ, ಬೇರೆಯವರ ಮೊಬೈಲ್ ತಮ್ಮದು ಎಂದು ಇಬ್ಬರು ಯುವತಿಯರು ಕಸಿದುಕೊಂಡು ಹೋಗಿರುವ ಘಟನೆ ನಡೆದಿದೆ. ದೇವಸ್ಥಾನದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.
ಕಳೆದ ರಾತ್ರಿ ಶನಿವಾರ ಹುಣ್ಣಿಮೆ ನಿಮಿತ್ತ ಪಕ್ಕದ ದೇವನಾಳ ಗ್ರಾಮ ಗಿರೀಶ ಪೂಜಾರ ಎಂಬುವರು ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಈ ಸಂದರ್ಭ ಅವರ ಮಗನ ಕೈಯಲ್ಲಿ ಮೊಬೈಲ್ ಕೊಟ್ಟು ಹೋಗಿದ್ದಾರೆ. ಆಗ ಆಕಸ್ಮಿಕವಾಗಿ ಅದೇ ಜಾಗದಲ್ಲಿ ಮೆರೆತು ಹೋಗಿದ್ದಾರೆ. ಬೇರೆ ಹುಡುಗ ಸ್ಥಳದಲ್ಲಿದ್ದ ಮೊಬೈಲ್ ತೆಗೆದುಕೊಂಡಾಗ, ಈ ಇಬ್ಬರು ಯುವತಿಯರು ಮೊಬೈಲ್ ತಮ್ಮದು ಎಂದು ಸುಳ್ಳು ಹೇಳಿ ಕಸಿದುಕೊಂಡು ಹೋಗಿದ್ದಾರೆ ಎನ್ನಲಾಗ್ತಿದೆ.
ಈ ಬಗ್ಗೆ ದೇವಸ್ಥಾನದ ಸಿಸಿಟಿವಿ ಪರಿಶೀಲಿಸಿದ್ದಾಗ ಯುವತಿಯರು ಸುಳ್ಳು ಹೇಳಿ 20 ಸಾವಿರ ರೂ. ಮೌಲ್ಯದ ಮೊಬೈಲ್ ತೆಗೆದುಕೊಂಡು ಹೋಗಿರುವ ದೃಶ್ಯ ಸೆರೆಯಾಗಿದೆ. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈವರೆಗೆ ಯುವತಿಯರ ವಿರುದ್ಧ ದೂರು ದಾಖಲಾಗಿಲ್ಲ. ಮೊಬೈಲ್ ಕಳೆದುಕೊಂಡ ವ್ಯಕ್ತಿ ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.