ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಕ್ರಿಕೆಟ್​​​ನಲ್ಲಿ ಮಿಂಚುತ್ತಿರುವ ಬಾಗಲಕೋಟೆ ಮೂಲದ ಗ್ರಾಮೀಣ ಪ್ರತಿಭೆ!

ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಭಾಗದಿಂದ ಬಂದಂತಹ  ತೇಜಸ್ವಿನಿ, ಗೋವಾ ರಾಜ್ಯದ ಕ್ರಿಕೆಟ್ ತಂಡದ ನಾಯಕಿ ಆಗಿ ಹಲವು ಸಾಧನೆ ಮಾಡುವ  ಮೂಲಕ ಬಾಗಲಕೋಟೆ ಜಿಲ್ಲೆಯ ಹೆಸರು ಇಡೀ ದೇಶಾದ್ಯಂತ ಪಸರಿಸುವಂತೆ ಮಾಡಿದ್ದಾರೆ.

By

Published : Jun 11, 2019, 7:29 PM IST

ಗ್ರಾಮೀಣ ಭಾಗದ ಕ್ರಿಕೆಟ್ ಬೆಡಗಿ ತೇಜಸ್ವಿನಿ

ಬಾಗಲಕೋಟೆ:ಹೆಣ್ಣೆಂದರೆ ಕೇವಲ ಮನೆಗೆಲಸಕ್ಕೆ ಮಾತ್ರ ಸೀಮಿತವಲ್ಲ. ಅವಳಿಗೆ ಒಂದು ಅವಕಾಶ ಕೊಟ್ಟರೆ ಸಾಕು ಅವಳ ಶಕ್ತಿ ಏನೆಂದು ಪ್ರಪಂಚಕ್ಕೆ ತೋರಿಸುತ್ತಾಳೆ. ಸದ್ಯ ಹೆಣ್ಣಿನಲ್ಲಿರುವ ಕ್ರೀಡಾಸಕ್ತಿಯನ್ನು ಇಡೀ ದೇಶಕ್ಕೆ ತೋರಿಸುತ್ತಿರುವುದು ಗ್ರಾಮೀಣ ಭಾಗದ ಬೆಡಗಿ ತೇಜಸ್ವಿನಿ.

ಗ್ರಾಮೀಣ ಭಾಗದ ಕ್ರಿಕೆಟ್ ಬೆಡಗಿ ತೇಜಸ್ವಿನಿ

ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಭಾಗದಿಂದ ಬಂದಂತಹ ತೇಜಸ್ವಿನಿ, ಗೋವಾ ರಾಜ್ಯದ ಕ್ರಿಕೆಟ್ ತಂಡದ ನಾಯಕಿ ಆಗಿ ಹಲವು ಸಾಧನೆ ಮಾಡುವ ಮೂಲಕ ಬಾಗಲಕೋಟೆ ಜಿಲ್ಲೆಯ ಹೆಸರು ಇಡೀ ದೇಶಾದ್ಯಂತ ಪಸರಿಸುವಂತೆ ಮಾಡಿದ್ದಾರೆ. ತೇಜಸ್ವಿನಿ ದುರ್ಗ ಎಂಬ ಕುಗ್ರಾಮದಲ್ಲಿ ಹುಟ್ಟಿ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾಳೆ. ಎಲ್ಲರನ್ನು ಬೆರಗುಗೊಳಿಸುವ ಸಾಧನೆ ಮಾಡುತ್ತಿರುವ ಈ ಯುವ ಪ್ರತಿಭೆ, ಭರವಸೆಯ ಕ್ರೀಡಾಪಟುವಾಗಿ ಬೆಳೆಯುತ್ತಿದ್ದಾಳೆ.

ತೇಜಸ್ವಿನಿ ಕುರಿತ ಸಮಗ್ರ ಮಾಹಿತಿ...
ತೇಜಸ್ವಿನಿ ದುರ್ಗದ ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಾನಾಪೂರ ಗ್ರಾಮವಾಗಿದ್ದರೂ ಬೆಳೆದಿದ್ದು ನೆರೆ ರಾಜ್ಯ ಗೋವಾದಲ್ಲಿ. ಇದೀಗ ಗೋವಾ ಮಹಿಳಾ ಕ್ರಿಕೆಟ್​ನಲ್ಲಿ ಮಿಂಚುತ್ತಿರುವ ಭರವಸೆಯ ಕ್ರಿಕೆಟ್ ಕ್ರೀಡಾಪಟು. ತೇಜಸ್ವಿನಿ ತನ್ನ 11ನೇ ವಯಸ್ಸಿಗೆ ಕ್ರಿಕೆಟ್ ಆಡಲು ಪ್ರಾರಂಭಿಸಿದಳು. 14ನೇ ವಯಸ್ಸಿಗೆ 16 ವರ್ಷದೊಳಗಿನ ಟೀಂನ ಸದಸ್ಯಳಾದಳು. ಗೋವಾ ತಂಡದಿಂದ ಒಂದು ಬಾರಿ 16 ವಯಸ್ಸಿನೊಳಗಿನ ತಂಡದ ನಾಯಕಿಯಾಗಿ, ಮೂರು ಬಾರಿ 19 ವರ್ಷದೊಳಗಿನ ತಂಡದ ನಾಯಕಿಯಾಗಿ ಸಾಧನೆ ಮಾಡಿದ್ದಾಳೆ. 2015ರಲ್ಲಿ 16 ವರ್ಷದೊಳಗಿನ ಗೋವಾ ತಂಡದ ನಾಯಕಿಯಾಗಿ ತಮಿಳುನಾಡಿನ ವಿರುದ್ಧ 49 ರನ್​​ ಹೊಡೆದು ಮತ್ತು ಎರಡು ವಿಕೆಟ್ ಪಡೆದಿದ್ದರು ಹಾಗೂ ದಕ್ಷಿಣ ವಿಭಾಗದ ಮಹಿಳಾ ತಂಡದ ಸದಸ್ಯರಾಗಿ ಮತ್ತು ಮಹಿಳಾ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದು ವಿಶೇಷ. ಪ್ರಸ್ತುತ ಗೋವಾದ ಗವರ್ನಮೆಂಟ್​​ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ ಬೋರ್ಡ್​ನಲ್ಲಿ ತೇಜಸ್ವಿನಿ ಬಿಕಾಂ ಅಧ್ಯಯನ ಮಾಡುತ್ತಿದ್ದಾರೆ.

'ರನ್' ತೇಜಸ್ವಿನಿ:
ಇನ್ನು 2017-18ರಲ್ಲಿ ದಕ್ಷಿಣ ವಿಭಾಗದ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆಯಾಗಿದ್ದು, ಬಲಗೈನಿಂದ ಬ್ಯಾಟ್​ ಬೀಸುತ್ತಾರೆ. ಹಾಗೇ ಲೆಗ್ ಸ್ಪಿನ್ನರ್ ಆಗಿರೋ ತೇಜಸ್ವಿನಿ, 2017-18ರಲ್ಲಿ ನಡೆದ 19 ವರ್ಷದ ಒಳಗಿನ ಟೂರ್ನಮೆಂಟ್​​ನಲ್ಲಿ ಬೌಲಿಂಗ್ ವಿಭಾಗದಲ್ಲಿ 6 ಮ್ಯಾಚಿನಲ್ಲಿ 14 ವಿಕೆಟ್ ತೆಗೆದುಕೊಂಡು ಬಿಸಿಸಿಐ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ರು. ಬ್ಯಾಟಿಂಗ್ ವಿಭಾಗದಲ್ಲಿ 168 ರನ್ ಗಳಿಸಿರೋ ತೇಜಸ್ವಿನಿ 12ನೇ ಸ್ಥಾನದಲ್ಲಿದ್ರು. ಇನ್ನು ಉತ್ತರಾಖಂಡ್​ ವಿರುದ್ಧ 62 ಬಾಲ್​ಗಳಲ್ಲಿ 81 ರನ್ ಹೊಡೆದು ಅಜೇಯರಾಗಿ ಉಳಿದಿದ್ದು ಅವರ ಸರ್ವೋತ್ತಮ ಸ್ಕೋರ್ ಆಗಿದೆ. ಇನ್ನು ಗೋವಾದ ಅನುರಾಧ ರೇಡ್ಕರ್ ಕೋಚಿಂಗ್​ನಲ್ಲಿ ತೇಜಸ್ವಿನಿ ಭರವಸೆಯ ಮಹಿಳಾ ಕ್ರಿಕೆಟ್ ಪಟುವಾಗಿ ಹೊರಹೊಮ್ಮುತ್ತಿದ್ದಾರೆ. ಜೂನ್ 24ರಿಂದ ಜುಲೈ 23ವರೆಗೆ ಬೆಂಗಳೂರಿನಲ್ಲಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಆಯೋಜಿಸಿರೋ ಸಮ್ಮರ್ ಕ್ಯಾಂಪಿಗೆ ದೇಶದ 25 ಕ್ರೀಡಾಪಟುಗಳ ಪೈಕಿ ತೇಜಸ್ವಿನಿ ದುರ್ಗದ ಕೂಡಾ ಆಯ್ಕೆ ಆಗಿದ್ದಾರೆ.

19 ವರ್ಷದ ಒಳಗಿನ ಚಾಲೆಂಜರ್ ಟ್ರೋಫಿ ಟಿ-20ಯಲ್ಲಿ ತೇಜಸ್ವಿನಿಗೆ ಸ್ಥಾನ ಸಿಕ್ಕಿತ್ತು. ಈ ವೇಳೆ ಇಂಡಿಯಾ ರೆಡ್ ಟೀಂ ಚಾಂಪಿಯನ್ ಆಗಲು ತೇಜಸ್ವಿನಿ ದುರ್ಗದ ಅಮೂಲ್ಯ ಕೊಡುಗೆಯಿದೆ. 4 ಓವರ್​ಗಳಲ್ಲಿ ಎರಡು ಮುಖ್ಯವಾದ ವಿಕೆಟ್ ತೆಗೆದುಕೊಂಡಿದ್ದರಿಂದ ಇಂಡಿಯಾ ರೆಡ್ ಚಾಂಪಿಯನ್ ಆಗಲು ಸಾದ್ಯವಾಯಿತು ಮತ್ತು ಗೋವಾ ಸೀನಿಯರ್ ಮಹಿಳಾ ಕ್ರಿಕೆಟ್ ತಂಡದಲ್ಲಿದ್ದ ತೇಜಸ್ವಿನಿ, ಮಹಾರಾಷ್ಟ್ರದ ವಿರುದ್ಧ ಎರಡು ಉತ್ತಮ ವಿಕೆಟ್ ಪಡೆದು ಗೆಲುವಿಗೆ ಕಾರಣರಾದರು. 2019ರಲ್ಲಿ ಕೇರಳದಲ್ಲಿ ನಡೆದ ಅಂಡರ್ 23 ಟಿ-20ಯಲ್ಲಿ ಮಣಿಪುರದ ವಿರುದ್ಧ ತಮ್ಮ ಬೌಲಿಂಗ್​ನಿಂದ 3 ವಿಕೆಟ್ ತೆಗೆದುಕೊಂಡು, ಬ್ಯಾಟಿಂಗ್​ನಲ್ಲಿ ಅಜೇಯ 25 ರನ್ ಹೊಡೆದು ಟೀಂ ಗೆಲುವಿಗೆ ಕಾರಣರಾಗಿದರು.

ಇನ್ನು ತೇಜಸ್ವಿನಿ ದುರ್ಗದಗೆ ಫಿಟ್ನೆಸ್ ಹಾಗೂ ಕ್ರಿಕೆಟ್ ಸಲಕರಣೆ ಕೊರತೆಯಿದೆ. ಈ ಎಲ್ಲಾ ಕೊರತೆ ಮಧ್ಯೆಯೂ ತಮ್ಮ ಆಟವನ್ನು ನಿಲ್ಲಿಸಿಲ್ಲ. ಗೋವಾ ಕ್ರಿಕೆಟ್ ಅಸೋಸಿಯೇಷನ್ ಸೆಕ್ರೆಟರಿ ದಯಾ ಪಾಗಿ ಬ್ಯಾಟ್ ಕೊಡಿಸಿದ್ದಾರೆ. ಮಡಗಾವ್ ಕನ್ನಡ ಸಂಘದವರು ಕೆಲ ಕ್ರಿಕೆಟ್ ಸಂಬಂಧಿ ಸಲಕರಣೆಗಳ ಸಹಾಯ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲಾಡಳಿತ ತೇಜಸ್ವಿನಿ ದುರ್ಗದ ತಂದೆ-ತಾಯಿಯನ್ನು ಸತ್ಕರಿಸಿ, ಧನಸಹಾಯ ಮಾಡಿದೆ.

ABOUT THE AUTHOR

...view details