ಕರ್ನಾಟಕ

karnataka

By

Published : Aug 8, 2019, 5:18 AM IST

ETV Bharat / state

ಬಾಗಲಕೋಟೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯಿಂದ ನೆರೆ ಸಂತ್ರಸ್ಥರಿಗೆ ಜೀವ ರಕ್ಷಕ ಜಾಕೆಟ್‍!

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಭಾಗದಲ್ಲಿ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಯಿಂದ ಸಂತ್ರಸ್ತರಾಗಿರುವ ಜನರಿಗೆ ಜೀವ ರಕ್ಷಕ ಜಾಕೆಟ್‍ಗಳು ಅತ್ಯಂತ ಅವಶ್ಯಕವಾಗಿದ್ದು, 35 ಜಾಕೇಟ್‍ಗಳನ್ನು ಮತ್ತು ಪ್ರಥಮ ಚಿಕಿತ್ಸಾ ಕಿಟ್‍ಗಳನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ನೀಡಲಾಯಿತು.

ರೆಡ್ ಕ್ರಾಸ್ ಸಂಸ್ಥೆಯಿಂದ ನೆರೆ ಸಂತ್ರಸ್ಥರಿಗೆ ಜೀವ ರಕ್ಷಕ ಜಾಕೆಟ್‍

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಭಾಗದಲ್ಲಿ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಯಿಂದ ಸಂತ್ರಸ್ತರಾಗಿರುವ ಜನರಿಗಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಜಿಲ್ಲಾ ಶಾಖೆಯಿಂದ ಜೀವ ರಕ್ಷಕ ಜಾಕೆಟ್‍ಗಳು ಮತ್ತು ಪರಿಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.

ನಡುಗಡ್ಡೆಯಾಗುತ್ತಿರುವ ಕೆಲ ಹಳ್ಳಿಗಳ ಪ್ರದೇಶಗಳ ಜನರನ್ನು ಸ್ಥಳಾಂತರಿಸಲು ಜೀವ ರಕ್ಷಕ ಜಾಕೆಟ್‍ಗಳು ಅತ್ಯಂತ ಅವಶ್ಯಕವಾಗಿದ್ದು, 35 ಜಾಕೆಟ್‍ಗಳನ್ನು ಪ್ರಥಮ ಚಿಕಿತ್ಸಾ ಕಿಟ್‍ಗಳನ್ನು ರೆಡ್ ಕ್ರಾಸ್ ಸಂಸ್ಥೆಯಿಂದ ನೀಡಲಾಯಿತು. ಆಲಗೂರಿನಲ್ಲಿ ಸಂತ್ರಸ್ತರಿಗಾಗಿ ತೆರೆದಿರುವ ಗಂಜಿ ಕೇಂದ್ರದಲ್ಲಿ ಹೊದಿಕೆ (ಬ್ಲಾಂಕೆಟ್) ಅಡಿಗೆ ಮಾಡಲು ಬೇಕಾಗವ ಪಾತ್ರೆಗಳನ್ನು ದಿನ ನಿತ್ಯದ ಉಪಯೋಗಕ್ಕಾಗಿ ಟೂತ್​ ಪೇಸ್ಟ, ಬ್ರಶ್​, ಸಾಬೂನು, ಮೇಣದಬತ್ತಿ ಸ್ಯಾನಿಟರಿ ನ್ಯಾಪ್ಕಿನ್ಸ್​ ಮತ್ತಿತರ ವಸ್ತುಗಳನ್ನು ನೀಡಲಾಯಿತು.

ನೆರೆ ಹಾವಳಿಯ ಉಸ್ತುವಾರಿ ವಹಿಸಿರುವ ಉಪವಿಭಾಗಧಿಕಾರಿ ಇಕ್ರಿಮ್ ಮತ್ತು ತಹಸಿಲ್ದಾರ್​ ಚನಗೊಂಡ ಹಾಗೂ ಸಿ.ಪಿ.ಆಯ್. ಮಹಾತೇಶ ಹೊಸಪೇಟೆ ಅವರ ಸಮ್ಮುಖದಲ್ಲಿ ಹತ್ತು ಜನರ ರೆಡ್ ಕ್ರಾಸ್ ತಂಡ ನಿನ್ನೆ ಜಮಖಂಡಿಗೆ ಭೇಟಿ ನೀಡಿ ಅಲ್ಲಿನ ತಾಲೂಕು ಘಟಕದ ಅಧ್ಯಕ್ಷ ತಾತಾ ಸಾಹೇಬ ಬಾಂಗಿ ಹಾಗೂ ಪದಾಧಿಕಾರಿಗಳೊಂದಿಗೆ ಬಾದಿತ ಸ್ಥಳಗಳಿಗೆ ಭೇಟೆ ನೀಡಿದರು.

ರೆಡ್ ಕ್ರಾಸ್ ಸಂಸ್ಥೆಯ ಕಾರ್ಯವನ್ನು ಸಂಸ್ಥೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ರಾಮಚಂದ್ರ ಶ್ಲಾಘಿಸಿದ್ದು, ಅವಶ್ಯಕೆ ಬಿದ್ದರೆ ಇನ್ನೂ ಹೆಚ್ಚಿನ ನೆರವನ್ನು ಪಡೆಯುಲು ಸೂಚಿಸಿದರು. ಪ್ರವಾಹದಿಂದ ಮುಂದಿನ ದಿನಗಳಲ್ಲಿ ಬರುವ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಭಯವಿದೆ. ಹಾಗಾಗಿ ಇನ್ನೊಂದು ವಾದರಲ್ಲಿ ರೆಡ್ ಕ್ರಾಸ್ ಸಂಸ್ಥೆಯು ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಲಾಯನ್ಸ್ ಸಂಸ್ಥೆಯ ಕಾರ್ಯಕರ್ತರು ವೈದ್ಯರೊಂದಿಗೆ ಈ ಭಾಗದಲ್ಲಿ ಆರೋಗ್ಯ ಸೇವೆಗೆ ಸಿದ್ದರಿದ್ದು ಅದಕ್ಕಾಗಿ ಔಷಧಿಗಳು ಸಂಗ್ರಹಣೆ ಕೂಡ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚೇರ್ಮ​ನ್ ಆನಂದ ಎಸ್. ಜಿಗಜಿನ್ನಿ ತಿಳಿಸಿದ್ದಾರೆ.

ABOUT THE AUTHOR

...view details