ಕರ್ನಾಟಕ

karnataka

ಅಧಿಕಾರಿ, ಸಿಬ್ಬಂದಿ ‘ಆರೋಗ್ಯ ಸೇತು’ ಆ್ಯಪ್ ಬಳಕೆ ಕಡ್ಡಾಯ: ಕ್ಯಾಪ್ಟನ್ ಡಾ.ಕೆ.ರಾಜೇಂದ್ರ

By

Published : Jun 10, 2020, 11:53 PM IST

ಕೋವಿಡ್-19 ವಿರುದ್ದದ ನಮ್ಮ ಸಂಯೋಜಿತ ಹೋರಾಟದಲ್ಲಿ ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ‘ಆರೋಗ್ಯ ಸೇತು’ ಆ್ಯಪ್ ಸಹಾಯಕಾರಿಯಾಗಿದೆ. ಆದ್ದರಿಂದ ಎಲ್ಲ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಆರೋಗ್ಯ ಸೇತು ಡೌನ್‍ಲೋಡ್ ಮಾಡಿಕೊಳ್ಳತಕ್ಕದ್ದು ಎಂದು ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

Officers & Staff compulsary use arogya setu app
ಅಧಿಕಾರಿ, ಸಿಬ್ಬಂದಿಗೆ ‘ಆರೋಗ್ಯ ಸೇತು’ ಆ್ಯಪ್ ಬಳಕೆ ಕಡ್ಡಾಯ: ಕ್ಯಾಪ್ಟನ್ ಡಾ.ಕೆ.ರಾಜೇಂದ್ರ

ಬಾಗಲಕೋಟೆ:‘ಆರೋಗ್ಯ ಸೇತು’ ಆ್ಯಪ್ ಬಳಕೆ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಕಡ್ಡಾವಾಗಿದೆ ಎಂದು ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಅಧಿಕಾರಿ, ಸಿಬ್ಬಂದಿಗೆ ‘ಆರೋಗ್ಯ ಸೇತು’ ಆ್ಯಪ್ ಬಳಕೆ ಕಡ್ಡಾಯ: ಕ್ಯಾಪ್ಟನ್ ಡಾ.ಕೆ.ರಾಜೇಂದ್ರ

ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಆರೋಗ್ಯ ಸೇತು ಆ್ಯಪ್ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ವಿರುದ್ದದ ನಮ್ಮ ಸಂಯೋಜಿತ ಹೋರಾಟದಲ್ಲಿ ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಈ ಆ್ಯಪ್ ಸಹಾಯಕಾರಿಯಾಗಿದೆ. ಆದ್ದರಿಂದ ಎಲ್ಲ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಆರೋಗ್ಯ ಸೇತು ಡೌನ್‍ಲೋಡ್ ಮಾಡಿಕೊಳ್ಳತಕ್ಕದ್ದು ಎಂದು ತಿಳಿಸಿದರು.

ಸೋಂಕಿನ ಅಪಾಯ, ವೈದ್ಯಕೀಯ ಸಲಹೆಗಳು ಮತ್ತು ಸೋಂಕಿತ ವ್ಯಕ್ತಿ ಹತ್ತಿರ ಬಂದರೆ ಎಚ್ಚರಿಕೆಯ ಸೂಚನೆಯನ್ನು ನೀಡುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಎನ್.ಐ.ಸಿಯ ಗಿರಿಯಾಚಾರ ಅವರು ಆರೋಗ್ಯ ಸೇತು ಕಾರ್ಯವೈಖರಿ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.

ABOUT THE AUTHOR

...view details