ಬಾಗಲಕೋಟೆ:ಮದುವೆ ಸಂಭ್ರಮವಿದ್ದರೂ ಕೋತಿಯ ಕಾಟದಿಂದ ಬೇಸತ್ತ ಜನರು ಕಂಗಾಲಾಗಿರುವ ಘಟನೆ ನಗರದ ಎಪಿಎಂಸಿ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಮದುವೆಗೆ ಆಹ್ವಾನವಿಲ್ಲದಿದ್ದರೂ ಹಾಜರು ಈ ಅತಿಥಿ: ಇವನ 'ಕೋತಿ'ಯಾಟಕ್ಕೆ ಜನರ ಸ್ಥಿತಿ ಅಧೋಗತಿ - Band set
ಬಾಗಲಕೋಟೆ ನಗರದ ಎಪಿಎಂಸಿ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ಸಂಭ್ರಮವಿದ್ದಾಗ ಬ್ಯಾಂಡ್ ಸೌಂಡ್ ಕೇಳುತ್ತಿದ್ದಂತೆ ಕಪಿರಾಯ ಅಲ್ಲಿ ಪ್ರತ್ಯಕ್ಷನಾಗುತ್ತಾನಂತೆ. ಅಷ್ಟೇ ಅಲ್ಲದೆ, ಕುರ್ಚಿಯಿಂದ ಕುರ್ಚಿಗೆ ಜಿಗಿಯುತ್ತಾ ತುಂಟಾಟ ಮಾಡುತ್ತಿರುತ್ತಾನೆ. ಈತನ ತುಂಟಾಟಕ್ಕೆ ಜನರು ಕಂಗಾಲಾಗಿದ್ದಾರೆ.
'ಕೋತಿ'ಯಾಟಕ್ಕೆ ಜನರ ಸ್ಥಿತಿ ಅಧೋಗತಿ
ಕಲ್ಯಾಣ ಮಂಟಪದಲ್ಲಿ ಬ್ಯಾಂಡ್ ಸೌಂಡ್ ಕೇಳುತ್ತಿದ್ದಂತೆ ಕಪಿರಾಯ ಅಲ್ಲಿ ಪ್ರತ್ಯಕ್ಷನಾಗುತ್ತಾನಂತೆ. ಅಷ್ಟೇ ಅಲ್ಲದೆ, ಕುರ್ಚಿಯಿಂದ ಕುರ್ಚಿಗೆ ಜಿಗಿಯುತ್ತಾ ತುಂಟಾಟ ಮಾಡುತ್ತಾನೆ. ಇದರಿಂದಾಗಿ ಮದುವೆ ಕಾರ್ಯಕ್ರಮಕ್ಕೆ ಬಂದಿರುವ ಜನರು ಭಯಭೀತರಾಗಿದ್ದಾರೆ.
ಕಲ್ಯಾಣ ಮಂಟಪದ ಹೊರಗೆ ವಿಶಾಲವಾದ ಬೇವಿನ ಮರ ಇದೆ. ಆ ಮರದಲ್ಲಿ ವಾಸ ಇರುವ ಈ ಕಪಿರಾಯ ಮದುವೆ ಗದ್ದಲ ಕೇಳಿದಾಕ್ಷಣ ಮಂಟಪದೊಳಗೆ ನುಗ್ಗಿ ಮದುವೆಯ ಸಂಭ್ರಮ ಸವಿಯುತ್ತದೆಂತೆ. ಆದರೆ ಇದುವರೆಗೂ ಈ ಕೋತಿ ಯಾವುದೇ ರೀತಿಯ ಹಾನಿ ಮಾಡಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.