ಬಾಗಲಕೋಟೆ:ವಿದ್ಯುತ್ ಕಂಬಗಳಿಗೆ ತಂತಿ ಜೋಡಣೆ ಮಾಡುತ್ತಿರುವ ಸಮಯದಲ್ಲಿ ಜಾರಿ ಬಿದ್ದು ವಿದ್ಯುತ್ ಗುತ್ತಿಗೆದಾರ ಮೃತಪಟ್ಟಿರುವ ಘಟನೆ ಜಿಲ್ಲೆಯ ಕಮತಗಿ ಗ್ರಾಮದಲ್ಲಿ ಜರುಗಿದೆ.
ವಿದ್ಯುತ್ ಕಂಬಗಳ ದುರಸ್ತಿ ವೇಳೆ ಜಾರಿ ನದಿಗೆ ಬಿದ್ದು ವ್ಯಕ್ತಿ ಸಾವು
ಬಾಗಲಕೋಟೆಯ ರಾಮಥಾಳ ಸೇತುವೆ ಬಳಿ ಇತ್ತೀಚಿಗೆ ಪ್ರವಾಹ ಬಂದು ಹಾಳಾದ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯದಲ್ಲಿದ್ದ ವಿದ್ಯುತ್ ಗುತ್ತಿಗೆದಾರ ಜಾರಿ ನದಿಗೆ ಬಿದ್ದು ಸಾವನಪ್ಪಿದ್ದಾನೆ.
ನೀಲಕಂಠ ಬಂಡಿ ( 36) ಮೃತ ದುರ್ದೈವಿ. ಈತ ಕಮತಗಿ ಗ್ರಾಮದ ನಿವಾಸಿಯಾಗಿದ್ದು, ವಿದ್ಯುತ್ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚಿಗೆ ಪ್ರವಾಹ ಬಂದು ಹಾಳಾಗಿದ್ದ ಮಲ್ಲಪ್ರಭಾ ನದಿಯ ವಿದ್ಯುತ್ ಕಂಬಗಳ ಪುನರ್ ನಿರ್ಮಾಣದ ಕೆಲಸ ಮಾಡುತ್ತಿದ್ದ, ಆಕಸ್ಮಿಕವಾಗಿ ಕಾಲು ಜಾರಿ ಮಲ್ಲಪ್ರಭಾ ನದಿಯ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ.
ರಾಮಥಾಳ ಸೇತುವೆ ಬಳಿ ಇತ್ತೀಚಿಗೆ ಪ್ರವಾಹ ಬಂದು ಇಡೀ ಪ್ರದೇಶದಲ್ಲಿ ವಿದ್ಯುತ್ ಕಂಬಗಳು ಹಾಳಾಗಿದ್ದವು. ಇದರ ದುರಸ್ತಿ ಮಾಡುವ ಸಮಯದಲ್ಲಿ ಈ ಘಟನೆ ನಡೆದಿದೆ. ಮೃತ ದೇಹವನ್ನು ವಿದ್ಯುತ್ ಲೈನ್ ಮನ್ಗಳು ಹಾಗೂ ರಾಥತಾಳ ಗ್ರಾಮಸ್ಥರು ನೀರಿನಿಂದ ಹೂರ ತೆಗೆದಿದ್ದಾರೆ. ಈ ಬಗ್ಗೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಸಲಾಗಿದೆ.