ಕರ್ನಾಟಕ

karnataka

ಮುಂಗಾರು ಮಳೆ ಆರಂಭಕ್ಕೂ ಮುನ್ನ ಭೂತಾಯಿಗೆ ನೇಗಿಲಯೋಗಿಯ ನಮನ

ಮುಂಗಾರು ಮಳೆ ಆರಂಭಕ್ಕೂ ಮುನ್ನ ಕೃಷಿ ಸಾಮಗ್ರಿಗಳು ಹಾಗು ಭೂತಾಯಿಗೆ ಪೂಜೆ ಸಲ್ಲಿಸುವುದು ಉತ್ತರ ಕರ್ನಾಟಕ ರೈತರ ವಾಡಿಕೆ.

By

Published : May 26, 2021, 7:05 AM IST

Published : May 26, 2021, 7:05 AM IST

bagalkot
ಮುಂಗಾರು ಮಳೆ ಆರಂಭಕ್ಕೂ ಮುನ್ನ ಭೂ ತಾಯಿಗೆ ಪೂಜೆ ಸಲ್ಲಿಸಿದ ರೈತರು

ಬಾಗಲಕೋಟೆ: ಜಿಲ್ಲೆಯ ಬಾದಾಮಿ, ಹುನಗುಂದ, ಗುಳೇದಗುಡ್ಡ ಸೇರಿದಂತೆ ವಿವಿಧ ತಾಲೂಕಿನ ರೈತರು ಜೂನ್‌ನಲ್ಲಿ ಶುರುವಾಗುವ ಮುಂಗಾರು ಮಳೆಗೂ ಮೊದಲು ಮಳೆರಾಯನನ್ನು ಓಲೈಸಲು ಸಾಂಪ್ರದಾಯಿಕ ಪೂಜೆ ನಡೆಸಿದರು.

ಮುಂಗಾರು ಮಳೆ ಆರಂಭಕ್ಕೂ ಮುನ್ನ ಭೂ ತಾಯಿಗೆ ಪೂಜೆ ಸಲ್ಲಿಸಿದ ರೈತರು

ಪದ್ಧತಿ ಹೀಗಿದೆ..

ಕುಟುಂಬ ಸಮೇತ ಎತ್ತಿನ ಬಂಡಿಯಲ್ಲಿ ಹೊಲಕ್ಕೆ ಆಗಮಿಸಿ, ಮೂರು ಕಟ್ಟಿಗೆಗಳನ್ನು ತಾಳು ಕೆತ್ತುವ ಮೂಲಕ ಹೊಸ ಕೂರಿಗೆ ಹಾಸು ಕಾರ್ಯ ಪ್ರಾರಂಭಿಸುತ್ತಾರೆ. ಉತ್ತರ ಕರ್ನಾಟಕದ ಪದ್ಧತಿ ಪ್ರಕಾರ, ಕುರುಬ ಮನೆತನದವರು ಪೂಜೆ ಮಾಡಿದ ನಂತರ ಊರಿನ ಎಲ್ಲ ರೈತರು ತಮ್ಮ ಕೂರಿಗೆಗೆ ಬಣ್ಣ ಹಚ್ಚಿ, ಸೀರೆ ಉಡಿಸಿ, ಹೂವಿನ ಹಾರ, ಮೂಗಿನ ನತ್ತು ಸೇರಿದಂತೆ ಇತರೆ ವಸ್ತುಗಳಿಂದ ಮದುಮಗಳಂತೆ ಶೃಂಗರಿಸುತ್ತಾರೆ. ನಂತರ ಖಡಕ್ ರೊಟ್ಟಿ, ಚಟ್ನಿ, ಕಾಳು, ಹುಗ್ಗಿ, ಹೋಳಿಗೆ ನೈವೇದ್ಯ ಮಾಡಿ, ಐದು ಮಂದಿ ಮುತ್ತೈದೆಯರಿಗೆ ಉಡಿ ತುಂಬುತ್ತಾರೆ. ಬಳಿಕ ಮನೆ ಮಂದಿಯೆಲ್ಲಾ ಹೊಲದಲ್ಲೇ ಕುಳಿತು ಊಟ ಮಾಡುತ್ತಾರೆ.

ಇದಾದ ಬಳಿಕ ಕೂರಿಗೆಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ಮನೆಗೆ ತೆಗೆದುಕೊಂಡು ಬರುತ್ತಾರೆ. ಹೀಗೆ ಮಾಡುವುದರಿಂದ ಮುಂಗಾರು ಮಳೆ‌ ಚೆನ್ನಾಗಿ ಆಗುತ್ತೆ ಅನ್ನೋದು ರೈತರ ನಂಬಿಕೆ.

ಇದನ್ನೂ ಓದಿ:ಆಕ್ಸಿಜನ್​ ಸಂಪರ್ಕ ಕಿತ್ತು ಇನ್ನೋರ್ವ ರೋಗಿಗೆ ನೀಡಿದ ಆರೋಪ: ಸೋಂಕಿತ ಸಾವು

ABOUT THE AUTHOR

...view details