ಬಾಗಲಕೋಟೆ:ವಿಜಯಪುರದ ಮಸೀದಿಯಲ್ಲಿ ಪ್ರಾರ್ಥನೆಮುಗಿಸಿ ಹಿಂತಿರುಗಿ ಬರುತ್ತಿದ್ದಾಗ ಜಿಲ್ಲೆಯ ಇಳಕಲ್ ಸಮೀಪದ ಎಂಕೆ ಡಾಬಾ ಬಳಿ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದಾರೆ. ಕಳೆದ ರಾತ್ರಿ ಘಟನೆ ನಡೆದಿದೆ.
ತಾವರಗೇರಿಯ ಶಾಮಿದಾಸಾಬ್ ಕಿಡ್ದೂರ್ ನಾಯಕ್, ಮೌಲಾಸಾಬ್ ಕಿಡ್ದೂರ್ ನಾಯಕ್ ಹಾಗೂ ಹಿಮಾಂಬಿ ಮೌಲಾಸಾಬ್ ಕಿಡ್ದೂರ್ ನಾಯಕ್ ಮೃತರು. ವಿಜಯಪುರದಲ್ಲಿನ ಪ್ರಾರ್ಥನಾ ಮಂದಿರಕ್ಕೆ ಹೋಗಿ ವಾಪಸ್ ಊರಿಗೆ ಬರುತ್ತಿದ್ದಾಗ ಅಪಘಾತವಾಗಿದೆ.
ಭಾನುವಾರ ರಾತ್ರಿ ಬೊಲೆರೋ ವಾಹನದಲ್ಲಿದ್ದ 7 ಮಂದಿ ವಿಜಯಪುರದಿಂದ ತಾವರಗೇರಿಗೆ ಹೊರಟಿದ್ದರು. ವಾಹನ ಇಳಕಲ್ನ ಎಂಕೆ ಡಾಬಾ ಬಳಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ಬ್ರಿಡ್ಜ್ಗೆ ಡಿಕ್ಕಿಯಾಗಿದೆ. ಅವಘಡಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.