ಕರ್ನಾಟಕ

karnataka

ETV Bharat / state

ಒಬ್ಬರಿಗೊಬ್ಬರು ಪೈಪೋಟಿ ನಡೆಸುತ್ತಿರುವುದು ಕಾಂಗ್ರೆಸ್ ಪಕ್ಷದ ವಿನಾಶದ ಮುನ್ಸೂಚನೆ : ಡಿಸಿಎಂ ಕಾರಜೋಳ

ಕಾಂಗ್ರೆಸ್ ಪಕ್ಷದ ಚುನಾವಣೆ ಮೊದಲೇ ಮುಖ್ಯಮಂತ್ರಿ ಪೈಪೋಟಿ ನಡೆಯುತ್ತಿರುವುದು ಮದುವೆ ಆಗುವ ಮುಂಚೆ ಮಕ್ಕಳ ಮಾಡುವ ಸ್ಥಿತಿ ಆಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ..

By

Published : Jul 5, 2021, 7:30 PM IST

govinda-karajola
ಗೋವಿಂದ ಕಾರಜೋಳ

ಬಾಗಲಕೋಟೆ :ಚುನಾವಣೆ ಇನ್ನೂ ಎರಡು ವರ್ಷ ಇದ್ದಾಗಲೇ, ಕಾಂಗ್ರೆಸ್ ಪಕ್ಷದಲ್ಲಿ ಐದು ಗುಂಪುಗಳಾಗಿ ಒಬ್ಬರಿಗೆ ಒಬ್ಬರೂ ಪೈಪೋಟಿ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ವಿನಾಶದ ಮುನ್ಸೂಚನೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.

ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಚುನಾವಣೆ ಮೊದಲೇ ಮುಖ್ಯಮಂತ್ರಿ ಪೈಪೋಟಿ ನಡೆಯುತ್ತಿರುವುದು ಮದುವೆ ಆಗುವ ಮುಂಚೆ ಮಕ್ಕಳ ಮಾಡುವ ಸ್ಥಿತಿ ಆಗಿದೆ ಎಂದು ವ್ಯಂಗ್ಯವಾಡಿದ ಅವರು, ಬಿಜೆಪಿ ಬಂದ ಶಾಸಕರು,ಯಾರೂ ಮರಳಿ ಹೋಗುವುದಿಲ್ಲ. ಯಡಿಯೂರಪ್ಪ ಅವರು ಹಾಗೂ ಪ್ರಧಾನಿ ಮಂತ್ರಿ ಮೋದಿ ಅವರ ನಾಯಕತ್ವ ಬೆಂಬಲಿಸಿ ಬಂದಿದ್ದು, ಮರಳಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ಸಮಯದಲ್ಲಿ ಜಿಲ್ಲಾ ಪಂಚಾಯತ್ ಚುನಾವಣಾ ಮೀಸಲಾತಿ ಪಟ್ಟಿ ಜಾರಿ ಹಿನ್ನೆಲೆ, ಮೀಸಲಾತಿ ಕ್ಷೇತ್ರ ಬದಲಾವಣೆಗೆ ಒತ್ತಾಯಿಸಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮುಧೋಳ ಕ್ಷೇತ್ರದ ಜನರ ನಿಯೋಗ ಭೇಟಿ ಮಾಡಿ, ಬದಲಾವಣೆ ಮಾಡಿಸುವಂತೆ ಮನವಿ ಮಾಡಿಕೊಂಡ ಅವರು, ಮುಧೋಳ ತಾಲೂಕಿನ ಹೆಬ್ಬಾಳ, ಲೋಕಾಪೂರ ಜಿ‌ಪಂ ಕ್ಷೇತ್ರದ ಮೀಸಲಾತಿ ಬದಲಾವಣೆ ಮಾಡಿಸುವಂತೆ ಒತ್ತಾಯಿಸಿದರು.

ಇದರಿಂದ ಕ್ಷೇತ್ರದಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಗಮನಕ್ಕೆ ತೆಗೆದುಕೊಂಡು ಬದಲಾವಣೆ ಮಾಡಿಸಬೇಕು ಎಂದು ಆಗ್ರಹಿಸಿದ ಅವರು, ಈ ಸಮಯದಲ್ಲಿ ಮೀಸಲಾತಿ ಪಟ್ಟಿ ತಯಾರು ಮಾಡೋದು ಸರ್ಕಾರ ಅಲ್ಲ, ಚುನಾವಣಾ ಆಯೋಗ ಎಂದು ತಿಳಿಸಿದರು.

ನಾವು ಏನೂ ಮಾಡಲಿಕ್ಕೆ ಬರಲ್ಲ : ಇಡೀ ರಾಜ್ಯಾದ್ಯಂತ ಜಿಲ್ಲಾ ಪಂಚಾಯತ್ ಕ್ಷೇತ್ರದ ಮೀಸಲಾತಿ ಬದಲಾವಣೆ ಆಗಿದ್ದು, ಅವೈಜ್ಞಾನಿಕ ಎಂಬ ಆರೋಪ ಕೇಳಿ ಬಂದಿದೆ. ನನ್ನ ಮತಕ್ಷೇತ್ರವಾದ ಮುಧೋಳದಲ್ಲಿ ಐದು ಜಿಲ್ಲಾ ಪಂಚಾಯತ್ ಕ್ಷೇತ್ರ ಇದ್ದು, ಇದರಲ್ಲಿ ನಾಲ್ಕು ಮಹಿಳೆಯರಿಗೆ ಮೀಸಲಾದ ಒಂದು ಪುರುಷ ಬಂದಿದೆ.

ಹೀಗಾಗಿ, ಹಿಂದೆ ಇದ್ದ ಜಿಲ್ಲಾ ಪಂಚಾಯತ್ ಸದಸ್ಯರು ಮೀಸಲಾತಿ ಸರಿಯಾದ ಕ್ರಮವಾಗಿಲ್ಲ. ಬದಲಾವಣೆ ಮಾಡಿಸುವಂತೆ ಒತ್ತಾಯಿಸಿದ್ದಾರೆ. ಆದರೆ, ನಾವು ಏನೂ ಮಾಡಲಿಕ್ಕೆ ಬರಲ್ಲ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಬೇಕು ಎಂದರು.

ಓದಿ:ನನ್ನ ಹೇಳಿಕೆಯಿಂದ ಅನುಕಂಪ ಗಿಟ್ಟಿಸಿಕೊಳ್ಳಲು ಸುಮಲತಾ ಹೊರಟಿದ್ದಾರೆ: ಹೆಚ್​ಡಿಕೆ

ABOUT THE AUTHOR

...view details