ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಚುನಾವಣೆ ವೇಳೆ ಗಲಾಟೆ ನಡೆದ ಸಂದರ್ಭದಲ್ಲಿ ಮಹಿಳೆಯನ್ನು ಶಾಸಕ ಸಿದ್ದು ಸವದಿ ತಳ್ಳಿದ್ದಾರೆ ಎಂದು ಆರೋಪಿಸಲಾಗಿದ್ದು, ನನ್ನದೇನೂ ತಪ್ಪಿಲ್ಲ ಎಂದು ಶಾಸಕ ಸಿದ್ದು ಸವದಿ ಸ್ಪಷ್ಟನೆ ನೀಡಿದ್ದಾರೆ.
ಸದಸ್ಯರ ನೂಕಾಟ - ತಳ್ಳಾಟದಲ್ಲಿ ನಾನು ಪಾಲ್ಗೊಂಡಿರಲಿಲ್ಲ. ಮಹಿಳೆಯರ ಬಗ್ಗೆ ನನಗೆ ಅಪಾರ ಗೌರವ ಇದ್ದು, ಈ ಕೆಲಸವನ್ನು ಕಾಂಗ್ರೆಸ್ ಮಾಡಿರುವುದು. ನಮ್ಮ ಪಕ್ಷದ ಮಹಿಳಾ ಸದಸ್ಯರು ಕಾಂಗ್ರೆಸ್ ಅವರ ಆಮಿಷಕ್ಕೆ ಒಳಗಾಗಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು.
ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಎಲೆಕ್ಷನ್ನಲ್ಲಿ ಹೈಡ್ರಾಮಾ
ಪೊಲೀಸರು ಬಿಜೆಪಿಯವರನ್ನು ಟಾರ್ಗೆಟ್ ಮಾಡಿ ನನ್ನ ಮೇಲೂ ಲಾಠಿ ಬೀಸಿದ್ದಾರೆ. ಮಹಿಳೆಯರ ಮೇಲೆ ನಡೆದ ದೌರ್ಜನ್ಯಕ್ಕೆ ಮಾಜಿ ಸಚಿವೆ ಉಮಾಶ್ರೀ ನೇರ ಕಾರಣ ಎಂದು ಸಿದ್ದು ಸವದಿ ಆರೋಪಿಸಿದ್ದಾರೆ. ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಹಚ್ಚಿದ ಹಾಗೆ ನನ್ನ ಪರಿಸ್ಥಿತಿಯಾಗಿದೆ. ಹಾಗಾಗಿ ನಾನೇ ತನಿಖೆಗೆ ಆದೇಶ ಮಾಡಿದ್ದೇನೆ ಎಂದು ತಿಳಿಸಿದರು.
ಮಹಾಲಿಂಗಪುರ ಪುರಸಭೆ ಚುನಾವಣೆ ವೇಳೆ ಗಲಾಟೆ: ಸದಸ್ಯೆಯನ್ನು ತಳ್ಳಿದ ಶಾಸಕ ಸವದಿ!
ಈ ಹಿಂದೆ ಕಾಂಗ್ರೆಸ್ ಪಕ್ಷದ ಅಧಿಕಾರ ಇದ್ದಾಗ ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಇತರ ಬೆಂಬಲಿಗರು ಸಾಕಷ್ಟು ಗುಂಡಾಗಿರಿ, ದೌರ್ಜನ್ಯ ಎಸೆಗಿದ್ದಾರೆ. ಸದ್ಯ ಬಿಜೆಪಿ ಬಹುಮತ ಇದ್ದರೂ, ಅಧಿಕಾರ ಪಡೆಯುವ ಹಂಬಲದಿಂದ ಬಿಜೆಪಿ ಸದಸ್ಯರನ್ನು ಅಪಹರಣ ಮಾಡಲು ಮುಂದಾಗಿರುವ ಹಿನ್ನೆಲೆ ಗಲಾಟೆಗೆ ಕಾರಣವಾಗಿದೆ ಎಂದು ಆರೋಪಿದರು.