ಬಾಗಲಕೋಟೆ:ತಾಲೂಕಿನ ಗೋವಿಂದಕೊಪ್ಪ ಗ್ರಾಮದ ಬೀರಲಿಂಗೇಶ್ವರ ದೇವಾಲಯದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆ ದಿನದಂದು ನಡೆಯುವ ಈ ಜಾತ್ರೆಯಲ್ಲಿ ಪಲ್ಲಕ್ಕಿ ಮೆರವಣಿಗೆ ಹಾಗೂ ಸುಡುವ ಪ್ರಸಾದದಲ್ಲಿ ಕೈ ಹಾಕಿ ಪೂಜಾರಿಗಳು ನೈವೇದ್ಯ ಮಾಡುವುದು ವಿಶೇಷವಾಗಿದೆ.
ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ, ಅಕ್ಕಪಕ್ಕದ ಗ್ರಾಮಗಳಿಗೆ ಎಲೆ ಅಡಕೆ ಮೂಲಕ ಆಹ್ವಾನ ನೀಡುತ್ತಾರೆ. ಈ ಹಿನ್ನೆಲೆ ಅಕ್ಕಪಕ್ಕದ ಗ್ರಾಮಸ್ಥರು, ತಮ್ಮ ಗ್ರಾಮದ ಪಲ್ಲಕ್ಕಿಯನ್ನು ತೆಗೆದುಕೊಂಡು ಬರುತ್ತಾರೆ. ಇಡೀ ಗ್ರಾಮದಲ್ಲಿ 20 ಪಲ್ಲಕ್ಕಿಗಳ ಮೂಲಕ ದೇವರುಗಳ ಮೆರವಣಿಗೆ ನಡೆಸುತ್ತಾರೆ. ಈ ಸಮಯದಲ್ಲಿ ಡೊಳ್ಳು ಬಾರಿಸುತ್ತಾ, ಭಂಡಾರ ಎಸೆಯುತ್ತಾ, ದೇವರ ನಾಮಸ್ಮರಣೆ ಮಾಡುತ್ತಾ ಮೆರವಣಿಗೆ ನಡೆಸುತ್ತಾರೆ.