ಕರ್ನಾಟಕ

karnataka

ETV Bharat / state

ಧರ್ಮ ಗುರುಗಳು ಯಾವತ್ತೂ ಕಮಿಷನ್‌ ಕೊಡಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ - ಬಾಗಲಕೋಟೆಯಲ್ಲಿ ಕಮಿಷನ್ ಆರೋಪದ ಕುರಿತು ಬಸವ ಜಯಮೃತ್ಯಂಜಯ ಶ್ರೀ ಪ್ರತಿಕ್ರಿಯೆ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಮತ್ತೆ ಧರಣಿ ಸತ್ಯಾಗ್ರಹ ಪ್ರಾರಂಭಿಸಿ, ಸರ್ಕಾರದ ಗಮನ ಸೆಳೆಯಲು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮುಂದಾಗಿದ್ದಾರೆ.

ಬಸವ ಜಯಮೃತ್ಯುಂಜಯ ಸ್ವಾಮೀಜಿ
ಬಸವ ಜಯಮೃತ್ಯುಂಜಯ ಸ್ವಾಮೀಜಿ

By

Published : Apr 21, 2022, 4:14 PM IST

ಬಾಗಲಕೋಟೆ: ಬಸವಣ್ಣನವರ ಐಕ್ಯಸ್ಥಳ ಹಾಗೂ ಧಾರ್ಮಿಕ ಕೇಂದ್ರ ಕೂಡಲಸಂಗಮದಲ್ಲಿ ಇಂದಿನಿಂದ ಮತ್ತೆ ಪಂಚಮಸಾಲಿ ಮೀಸಲಾತಿ ಹೋರಾಟ ಪ್ರಾರಂಭವಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಮತ್ತೆ ಧರಣಿ ಸತ್ಯಾಗ್ರಹ ಪ್ರಾರಂಭಿಸಿ ಸರ್ಕಾರದ ಗಮನ ಸೆಳೆಯಲು ಪಂಚಮಸಾಲಿ ಶ್ರೀ ಮುಂದಾಗಿದ್ದಾರೆ. ಇದೇ ವೇಳೆ ಕಮಿಷನ್‌ ವಿಚಾರದ ಬಗೆಗೂ ಅವರು ಪ್ರತಿಕ್ರಿಯಿಸಿದರು.

ಸ್ವಾಮೀಜಿಗಳಿಂದ ಮಠಮಾನ್ಯಗಳ ಅನುದಾನದಲ್ಲಿ ಪರ್ಸೆಂಟೇಜ್ ಆರೋಪ ಮಾಡುತ್ತಿರುವ ವಿಚಾರವಾಗಿ ಮಾತನಾಡಿ, ನಮ್ಮ ಮಠಕ್ಕೆ ಯಡಿಯೂರಪ್ಪ ಅವರು ಆರ್ಥಿಕ ಸಹಕಾರ ಕೊಟ್ಟರು. ಪ್ರಾಧಿಕಾರಕ್ಕೆ ಟ್ರಾನ್ಸ್​ಫರ್​ ಮಾಡಿದ್ದರು. ನಾನು ಎಲ್ಲಿಯೂ ಒಂದು ರೂಪಾಯಿ ಕಮಿಷನ್ ಕೊಟ್ಟಿಲ್ಲ. ಸದಾನಂದಗೌಡರು ಅನುದಾನ ಕೊಟ್ಟಾಗಲೂ ಕಮಿಷನ್ ಕೊಟ್ಟಿಲ್ಲ. ಧರ್ಮ ಗುರುಗಳು ಯಾವತ್ತೂ ಕಮಿಷನ್ ಕೊಡಲ್ಲ ಎಂದರು.


ಕೆಲಸ ಮಾಡಿದ ಅಧಿಕಾರಿಗಳನ್ನು ಮಠಕ್ಕೆ ಕರೆಯಿಸಿ ಶಾಲು ಹಾಕಿ ಸನ್ಮಾನ ಮಾಡಿ, ಕಲ್ಲು ಸಕ್ಕರೆ ಕೊಟ್ಟು ಪ್ರಸಾದ ಮಾಡಿಸುತ್ತೇವೆ. ಕಮಿಷನ್ ಕೊಟ್ಟ ಬಗ್ಗೆ ಇವತ್ತೇ ನಾನು ಕೇಳ್ತಿರೋದು. ಅವರು ಯಾಕೆ ಹೇಳಿದ್ರೋ ನನಗೆ ಗೊತ್ತಿಲ್ಲ. ಮೇಲಾಗಿ ಸಿಎಂ ಸಹ ಈ ಬಗ್ಗೆ ಉತ್ತರ ಕೊಟ್ಟಿದ್ದಾರೆ. ಈಗ ನಮಗೆ 2ಎ ಮೀಸಲಾತಿ ಸಿಗೋವರೆಗೆ ಅನುದಾನ ಬೇಡ ಅಂತ ಬಿಟ್ಟಿದ್ದೇನೆ ಎಂದರು.

ಇದನ್ನೂಓದಿ:ಕಲ್ಲು ತೂರಾಟ ನಡೆಸುವ ಮುಸ್ಲಿಮರ ಮನಸ್ಥಿತಿ ಬದಲಾಗಬೇಕು: ಪ್ರತಾಪ್ ಸಿಂಹ್

For All Latest Updates

TAGGED:

ABOUT THE AUTHOR

...view details