ಕರ್ನಾಟಕ

karnataka

ETV Bharat / state

ಹಣವಿಲ್ಲದೆ ಪರದಾಡುತ್ತಿದ್ದ ನಟಿ.. ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಕಿಚ್ಚ ಸುದೀಪ್ ನೆರವು

ನ್ಯೂಮೊನಿಯಾದಿಂದ ಬಳಲುತ್ತಿದ್ದ ನಟಿ ಸೋನು ಪಾಟೀಲ್​ ಅವರ ತಾಯಿಯ ಎಲ್ಲ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ನಟ ಸುದೀಪ್​ ಭರಿಸುವ ಮೂಲಕ ನೆರವಾಗಿದ್ದಾರೆ.

By

Published : May 9, 2021, 1:59 PM IST

Actor sudeep helps
ತಾಯಿಯ ಚಿಕಿತ್ಸೆಗೆ ಕಿಚ್ಚ ಸುದೀಪ ನೆರವು: ಕಣ್ಣೀರಿಟ್ಟು ಧನ್ಯವಾದ ಅರ್ಪಿಸಿದ ನಟಿ

ಬಾಗಲಕೋಟೆ: ಬಿಗ್ ಬಾಸ್ ಸೀಸನ್ 6ರ ಸ್ಪಧಿ೯ ಹಾಗೂ ಕಿರುತೆರೆ ನಟಿ ಸೋನು ಪಾಟೀಲ್​ ಅವರ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ನಟ ಕಿಚ್ಚ ಸುದೀಪ್​ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತಾಯಿಯ ಚಿಕಿತ್ಸೆಗೆ ಕಿಚ್ಚ ಸುದೀಪ ನೆರವು: ಕಣ್ಣೀರಿಟ್ಟು ಧನ್ಯವಾದ ಅರ್ಪಿಸಿದ ನಟಿ

ನಟಿ ಸೋನು ಪಾಟೀಲ್​ ಅವರ ತಾಯಿ ಮಹಾದೇವಿ ನ್ಯೂಮೊನಿಯಾದಿಂದ ತೊಂದರೆಗೆ ಒಳಗಾಗಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ನಟ ಸುದೀಪ ಅವರ ಗಮನಕ್ಕೆ ಬಂದಾಗ ಕಿಚ್ಚ ಚಾರಿಟೇಬಲ್ ಟ್ರಸ್ಟ್ ಮೂಲಕ ಹಣದ ಸಹಾಯ ಮಾಡಿದ್ದಾರೆ. ಆಸ್ಪತ್ರೆಯ ಎಲ್ಲ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ನಟ ಸುದೀಪ್​ ಭರಿಸಿದ್ದಾರೆ. ಸಕಾಲದಲ್ಲಿ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ನೆರವಾದ ನಟ ಸುದೀಪ್​ ಅವರಿಗೆ ನಟಿ ಸೋನು ಪಾಟೀಲ್​ ಕೃತಜ್ಞತೆ ಸಲ್ಲಿಸಿದ್ದಾರೆ.

ನಟಿ ಸೋನು ಪಾಟೀಲ್​ ಅವರ ತಾಯಿ ಮಹಾದೇವಿ

ಆಸ್ಪತ್ರೆಯ ಬಿಲ್​ ಸೇರಿದಂತೆ ಇತರ ವೆಚ್ಚಕ್ಕಾಗಿ ಸುದೀಪ​ ಅಂದಾಜು 5 ಲಕ್ಷ ರೂ. ರೆರವು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಓದಿ:ಕೊರೊನಾದಿಂದ ಅರ್ಧಕ್ಕೆ ಆಟ ನಿಲ್ಲಿಸಿದ 'ಬಿಗ್​ಬಾಸ್'​.. ನಾಳೆಯಿಂದ ಪ್ರಸಾರವಾಗಲ್ಲ 'ರಿಯಾಲಿಟಿ ಶೋ'

ABOUT THE AUTHOR

...view details