ಕರ್ನಾಟಕ

karnataka

ಸಿದ್ದರಾಮಯ್ಯ ಕ್ಷೇತ್ರದಲ್ಲಿ 32 ವರ್ಷವಾದ್ರೂ ಕಾಮಗಾರಿ ಕಾಣದ 'ಕಂದಗಲ್ಲ ರಂಗ ಮಹಲ್​'

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಬಾದಾಮಿ ಗುಳೇದಗುಡ್ಡದಲ್ಲಿ 'ಕಂದಗಲ್ಲ ಹನಮಂತರಾಯ ರಂಗಮಂದಿರ' ನಿರ್ಮಾಣಕ್ಕೆ ಮುಂದಾಗಿ ಇಲ್ಲಿಗೆ 32 ವರ್ಷಗಳು ಗತಿಸಿದರೂ ಕೂಡಾ ಕಾಮಗಾರಿ ಅಪೂರ್ಣಗೊಂಡಿದೆ. ಸಿದ್ದರಾಮಯ್ಯ ಶಾಸಕರಾದ ಹಿನ್ನೆಲೆ ಕಾಮಗಾರಿ ಪೂರ್ಣಗೊಳ್ಳುತ್ತೆ ಎನ್ನುವ ಜನರ ನಂಬಿಕೆಯೂ ಹುಸಿಯಾಗುತ್ತಿದೆ. ಅಲ್ಲದೇ ಇಷ್ಟು ದಿನ ಬಿಡುಗಡೆಯಾದ ಅನುದಾನ ಎಲ್ಲಿ ಮಾಯವಾಯಿತು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

By

Published : Dec 14, 2020, 7:57 PM IST

Published : Dec 14, 2020, 7:57 PM IST

32-year-old-kandagalla-hanumantharaya-theater-work-not-yet-finished
ಕಂದಗಲ್ಲ ಹನಮಂತರಾಯ ರಂಗಮಂದಿರ

ಬಾಗಲಕೋಟೆ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ ಕ್ಷೇತ್ರದಲ್ಲಿ ಕಳೆದ 32 ವರ್ಷಗಳಿಂದ ರಂಗ ಕಲಾ ಮಂದಿರವೊಂದರ ಕಾಮಗಾರಿ ಪೂರ್ಣಗೊಳ್ಳದೇ ಅನೈತಿಕ ಚಟುವಟಿಕೆಗಳ ಗೂಡಾಗುತ್ತಿದ್ದು, ಬಹುದಿನಗಳ ಜನರ ಆಸೆ ಕನಸಾಗಿಯೇ ಉಳಿದಿದೆ.

ಅಂದು ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ಪಟ್ಟಣದಲ್ಲಿ ನಾಟಕ ಕಂಪನಿಗಳು, ಆಲೆ ಮನೆ ನಾಟಕ ಕಲಾವಿದರು, ಹವ್ಯಾಸಿ ಕಲಾವಿದರು ಸಾಕಷ್ಟು ಸಂಖ್ಯೆಯಲ್ಲಿದ್ದು, ಕಾರಣ ಅಂದಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರು 'ಕಂದಗಲ್ಲ ಹನಮಂತರಾಯ ರಂಗಮಂದಿರ' ನಿರ್ಮಾಣಕ್ಕೆ ಮುಂದಾಗಿ ಕಾಮಗಾರಿ ಪ್ರಾರಂಭಿಸಿದ್ದರು.

ಸಿದ್ದರಾಮಯ್ಯ ಕ್ಷೇತ್ರದಲ್ಲಿ 32ವರ್ಷವಾದ್ರೂ ಕಾಮಗಾರಿ ಕಾಣದ 'ಕಂದಗಲ್ಲ ರಂಗ ಮಹಲ್​'

ಆದರೆ, ಅಂದಿನಿಂದ ಇಲ್ಲಿಯವರೆಗೂ ಸರ್ಕಾರ ದಿಂದ ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಈಗಿನ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರವರು ಹಿಂದೆ ಕನ್ನಡ ಸಂಸ್ಕೃತ ಇಲಾಖೆ‌ ಸಚಿವರಾಗಿದ್ದ ಸಮಯದಲ್ಲಿ 30 ಲಕ್ಷ, ನಟಿ ಹಾಗೂ ಕಲಾವಿದೆ, ಮಾಜಿ ಸಚಿವೆ ಉಮಾಶ್ರೀ ಅವರು ಕನ್ನಡ ಸಂಸ್ಕೃತ ಇಲಾಖೆ ಸಚಿವೆಯಾಗಿದ್ದ ಸಮಯದಲ್ಲಿ 40 ಲಕ್ಷ ಅನುದಾನ ನೀಡಿದ್ದಾರೆ.

ಓದಿ-ಸರ್ಕಾರಿ ಜಾಗದಲ್ಲಿ ನಿರ್ಮಾಣಗೊಂಡಿದ್ದ 5 ಮಳಿಗೆಗಳ ತೆರವು ಕಾರ್ಯಾಚರಣೆ

ಹೀಗಿದ್ದರೂ ಸಹ ಅಭಿವೃದ್ಧಿ ಗಾಳಿ ರಂಗಮಂಟಪಕ್ಕೆ ಬೀಸಿಲ್ಲ. ಮುಳ್ಳಿನ ಕಂಟಿ, ಕಸ ಬೆಳೆದು ಮಂದಿರ ಶಿಥಿಲಾವ್ಯಸ್ಥೆಗೆ ತಿರುಗಿದ್ದು, ಬೀಳುವ ಸ್ಥಿತಿಗೆ ಬಂದಿದೆ. ಅಲ್ಲದೇ ಕುಡುಕರ ತಾಣವಾಗಿದ್ದು, ಅನೈತಿಕ ಚಟುವಟಿಕೆಗಳ ಬೀಡಾಗಿದೆ.

ರಾಮಕೃಷ್ಣ ಹೆಗಡೆಯವರ ಆಡಳಿತದಿಂದ ಹಿಡಿದು ಇಂದು ವಿರೋಧ ಪಕ್ಷದ ನಾಯಕರಾಗಿ, ಮಾಜಿ ಮುಖ್ಯಮಂತ್ರಿಗಳಾಗಿ ಬಾದಾಮಿ ಕ್ಷೇತ್ರ ಶಾಸಕರಾಗಿರುವ ಸಿದ್ದರಾಮಯ್ಯನವರು ರಂಗಮಂದಿರ ಕಟ್ಟಿಸುತ್ತಾರೆ ಎನ್ನುವ ಜನರ ಕನಸು ನನಸಾಗುವಂತೆ ಕಾಣುತ್ತಿಲ್ಲ. ಅಲ್ಲದೇ ಇಷ್ಟು ದಿನ ಸರ್ಕಾರದಿಂದ ಬಂದ ಅನುದಾನ ಎಲ್ಲಿ ಮಾಯವಾಯಿತು ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.

ABOUT THE AUTHOR

...view details