ಬಾಗಲಕೋಟೆ:ಜಿಲ್ಲೆಯಲ್ಲಿಂದು 13 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬಾಗಲಕೋಟೆಯಲ್ಲಿ 13 ಮಂದಿ ಸಂಪೂರ್ಣ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ - bagalkot news
ಬಾಗಲಕೋಟೆ ಜಿಲ್ಲೆಯಲ್ಲಿಂದು 13 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ರೋಗಿಗಳಿಗೆ ಬೀಳ್ಕೊಟ್ಟರು.
ಈ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ. ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದ 26 ವರ್ಷದ ಯುವಕ, ರಾಗಾಪುರ ಗ್ರಾಮದ 55 ವರ್ಷದ ಮಹಿಳೆ, 2 ವರ್ಷದ ಮಗು, ಹುನಗುಂದ ತಾಲೂಕಿನ ಗುಡೂರಿನ 50 ವರ್ಷದ ಮಹಿಳೆ, ಬಾಗಲಕೋಟೆ ತಾಲೂಕಿನ ನವನಗರದ ಸೆಕ್ಟರ್ ನಂ. 2ರ 47 ವರ್ಷ ಪುರುಷ, 16 ವರ್ಷದ ಬಾಲಕಿ, ಮುಧೋಳದ 14 ವರ್ಷದ ಬಾಲಕ, 45 ವರ್ಷದ ಮಹಿಳೆ, 56 ವರ್ಷದ ಪುರುಷ, 55 ವರ್ಷದ ಮಹಿಳೆ, 5 ವರ್ಷದ ಗಂಡು ಮಗು, 11 ವರ್ಷದ ಬಾಲಕಿ ಹಾಗೂ ಜಮಖಂಡಿಯ 36 ವರ್ಷದ ಪುರುಷ ಕೋವಿಡ್‍ದಿಂದ ಗುಣಮುಖರಾಗಿದ್ದಾರೆ.
ಗುಣಮುಖರಾದವರಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪ್ರಕಾಶ್ ಬಿರಾದಾರ ಪ್ರಮಾಣಪತ್ರ ವಿತರಿಸಿದರು. ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ರೋಗಿಗಳಿಗೆ ಬೀಳ್ಕೊಟ್ಟರು.