ಟೋಕಿಯೊ (ಜಪಾನ್):ಟೋಕಿಯೊ ಒಲಿಂಪಿಕ್ಸ್ 5ನೇ ದಿನವಾದ ಇಂದು ಶೂಟರ್ ಸೌರಭ್ ಚೌಧರಿ ಮತ್ತು ಮನು ಭಾಕರ್ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದರು. 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಮೊದಲ ಹಂತದ ಅರ್ಹತಾ ಪಂದ್ಯದಲ್ಲಿ ಮೊದಲ ಸ್ಥಾನಗಳಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದರು. ಆದರೆ ಅರ್ಹತಾ ಸುತ್ತಿನಾ 2ನೇ ಹಂತದಲ್ಲಿ ಹೊರಬಿದ್ದಿದ್ದಾರೆ. ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕಿಳಿದು ಡಬಲ್ಸ್ನಲ್ಲಿ ಪದಕ ಪಡೆಯುವ ಕನಸು ಹುಸಿಯಾಗಿದೆ.
Tokyo Olympics: 10 ಮೀ ಏರ್ ರೈಫಲ್ ಮಿಶ್ರ ಆವೃತ್ತಿಯಿಂದ ಹೊರಬಿದ್ದ ಚೌಧರಿ-ಭಾಕರ್ - ಬ್ಯಾಡ್ಮಿಂಟನ್, ಕುಸ್ತಿ, ಬಾಕ್ಸಿಂಗ್
10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಮೊದಲ ಹಂತದ ಅರ್ಹತಾ ಪಂದ್ಯದಲ್ಲಿ ಮೊದಲ ಸ್ಥಾನಗಳಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದರು. ಆದರೆ ಮುಂದಿನ ಸುತ್ತಿನಲ್ಲಿ ಹೊರಬಿದ್ದಿದ್ದಾರೆ.
ಚೌಧರಿ, ಭಾಕರ್
ಇತ್ತ ಮಿಶ್ರ ತಂಡದ ಈವೆಂಟ್ನಲ್ಲಿ ಅಭಿಷೇಕ್ ವರ್ಮಾ ಮತ್ತು ಯಶಸ್ವಿನಿ ದೇಸ್ವಾಲ್ ಹೊರಬಿದ್ದಿದ್ದಾರೆ. 10 ಮೀಟರ್ ಏರ್ ರೈಫಲ್ ವಿಭಾಗದ ಮಿಶ್ರ ತಂಡ ವಿಭಾಗದಲ್ಲಿ ಆಡಿದ್ದ ಜೋಡಿ ಅಂಕ ಪಟ್ಟಿಯಲ್ಲಿ 17ನೇ ಸ್ಥಾನ ಪಡೆದು ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದಾರೆ.
4ನೇ ದಿನವಾದ ನಿನ್ನೆ ಭಾರತ ಹಲವು ವಿಭಾಗಗಳಲ್ಲಿ ಸ್ಪರ್ಧಿಸಿದ್ದರೂ ಪದಕ ಗೆಲ್ಲುವಲ್ಲಿ ವಿಫಲವಾಗಿತ್ತು. ಬ್ಯಾಡ್ಮಿಂಟನ್, ಕುಸ್ತಿ, ಬಾಕ್ಸಿಂಗ್ ಹಾಗೂ ಹಾಕಿಗಳಲ್ಲಿ ಮಾತ್ರ ಪದಕ ಗೆಲ್ಲುವ ಗುರಿ ಇಟ್ಟುಕೊಂಡಿದೆ.
Last Updated : Jul 27, 2021, 7:24 AM IST