ಟೋಕಿಯೋ: ಒಲಿಂಪಿಕ್ಸ್ನಲ್ಲಿ ಭಾರತ 13 ದಿನಗಳನ್ನು ಪೂರೈಸಿದೆ. ಇಷ್ಟು ದಿನಗಳಲ್ಲಿ ಸಿಹಿಗಿಂತ ಕಹಿಯನ್ನೇ ಹೆಚ್ಚು ಅನುಭವಿಸಿದೆ. ಆದರೆ, ಒಲಿಂಪಿಕ್ಸ್ನ 14 ದಿನ ಭಾರತಕ್ಕೆ ಬಹಳ ಮಹತ್ವವಾಗಿದೆ. ಏಕೆಂದರೆ ಚಿನ್ನದ ಪದಕ ಭರವಸೆ ಮೂಡಿಸಿದರುವ ರವಿ ಕುಮಾರ್ ದಹಿಯಾ ಮತ್ತು ಮಹಿಳಾ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಗುರುವಾರ ಅಖಾಡಕ್ಕೆ ಇಳಿಯುತ್ತಿದ್ದಾರೆ.
ಬುಧವಾರ ರವಿ ಕುಮಾರ್ ದಹಿಯಾ ಆಡಿದ ಮೂರು ಪಂದ್ಯಗಳಲ್ಲೂ ಪ್ರಾಬಲ್ಯ ಸಾಧಿಸಿ 57ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಇವರ ಜೊತೆಗೆ ಭಾರತದ ಹಾಕಿ ತಂಡ ಮತ್ತು ದೀಪಕ್ ಪೂನಿಯಾ ಕಂಚಿಗಾಗಿ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
ರವಿ ಕುಮಾರ್ ದಹಿಯಾ: ಕುಸ್ತಿ
ದಹಿಯಾ ಈಗಾಗಲೇ ಫೈನಲ್ ಪ್ರವೇಶಿಸಿ ಬೆಳ್ಳಿ ಪದಕ ಖಚಿತಪಡಿಸಿರುವುದರಿಂದ ಭಾರತದಾದ್ಯಂತ ಹಬ್ಬವನ್ನಾಚರಿಸುತ್ತಿದೆ. ರವಿಕುಮಾರ್ ಅವರ ಸ್ವಗ್ರಾಮದಲ್ಲಿ ಈಗಾಗಲೇ ಸಂಭ್ರಮ ಮನೆ ಮಾಡಿದೆ. ರವಿ ಕುಮಾರ್ ಭಾರತಕ್ಕೆ ಒಲಿಂಪಿಕ್ಸ್ನಲ್ಲಿ 5ನೇ ಪದಕ ಮತ್ತು 2020ರಲ್ಲಿ 4ನೇ ಪದಕವನ್ನು ಖಚಿಪಡಿಸಿದ್ದಾರೆ.
ಒಲಿಂಪಿಕ್ಸ್ನಲ್ಲಿ ಫೈನಲ್ಗೆ ಅರ್ಹತೆ ಪಡೆದ ಭಾರತದ ಎರಡನೇ ಕುಸ್ತಿಪಟು ಎನಿಸಿಕೊಂಡಿರುವ ರವಿ ಕುಮಾರ್ ದಹಿಯಾ ಗುರುವಾರ ನಡೆಯುವ ಫೈನಲ್ನಲ್ಲಿ ರಷ್ಯನ್ ಒಲಿಂಪಿಕ್ ಸಮಿತಿಯ ಜೌರ್ ಉಗುವ್ ಅವರ ಸವಾಲನ್ನು ಎದುರಿಸಲಿದ್ದಾರೆ.