ಕರ್ನಾಟಕ

karnataka

ETV Bharat / sports

ಚೊಚ್ಚಲ ಆಸ್ಟ್ರೇಲಿಯಾ ಓಪನ್​ ಮುಡಿಗೇರಿಸಿಕೊಂಡ 21 ವರ್ಷದ ಸೋಫಿಯಾ ಕೆನಿನ್

ಮೊದಲ ಸುತ್ತಿನ ಪಂದ್ಯದಿಂದಲೂ ಆತ್ಯಾಕರ್ಷ ಪ್ರದರ್ಶನ ತೋರುತ್ತಿರುವ 21 ವರ್ಷದ ಕೆನಿನ್​ ಶನಿವಾರ ನಡೆದ ಫೈನಲ್​ನಲ್ಲಿ ಸ್ಪೇನಿನ ಗಾರ್ಬಿನಿಯಾ ಮುಗುರುಜ ಅವರನ್ನು 4-6,6-2, 6-2 ರಲ್ಲಿ ಮಣಿಸಿ ತಮ್ಮ ವೃತ್ತಿ ಜೀವನದ ಚೊಚ್ಚಲ ಗ್ರ್ಯಾಂಡ್​ ಸ್ಲಾಮ್​ ಕಿರೀಟಕ್ಕೆ ಮುತ್ತಿಕ್ಕಿದ್ದರು.

By

Published : Feb 2, 2020, 5:23 AM IST

Sofia Kenin
Sofia Kenin

ಮೆಲ್ಬೋರ್ನ್​: ಸೆಮಿಫೈನಲ್​ನಲ್ಲಿ ನಂಬರ್​ ಒನ್​ ಆಟಗಾರ್ತಿಗೆ ಸೋಲುಣಿಸಿದ್ದ ಅಮೆರಿಕಾದ ಸೋಫಿಯಾ ಕೆನಿನ್​ ಚೊಚ್ಚಲ ಆಸ್ಟ್ರೇಲಿಯಾ ಓಪನ್​ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ಸುತ್ತಿನ ಪಂದ್ಯದಿಂದಲೂ ಆತ್ಯಾಕರ್ಷ ಪ್ರದರ್ಶನ ತೋರುತ್ತಿರುವ 21 ವರ್ಷದ ಕೆನಿನ್​ ಶನಿವಾರ ನಡೆದ ಫೈನಲ್​ನಲ್ಲಿ ಸ್ಪೇನಿನ ಗಾರ್ಬಿನಿಯಾ ಮುಗುರುಜ ಅವರನ್ನು 4-6,6-2, 6-2 ರಲ್ಲಿ ಮಣಿಸಿ ತಮ್ಮ ವೃತ್ತಿ ಜೀವನದ ಚೊಚ್ಚಲ ಗ್ರ್ಯಾಂಡ್​ ಸ್ಲಾಮ್​ ಕಿರೀಟಕ್ಕೆ ಮುತ್ತಿಕ್ಕಿದರು.

ಅಮೆರಿಕದ ಈ ಯುವ ಪ್ರತಿಭೆ ಇದಕ್ಕೂ ಮುನ್ನ 2019ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದೇ ಅವರ ಶ್ರೇಷ್ಠ ಪ್ರದರ್ಶನವಾಗಿತ್ತು. ಇದೀಗ ಚೊಚ್ಚಲ ಗ್ರ್ಯಾನ್ ಸ್ಲ್ಯಾಮ್ ಮುಡಿಗೇರಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ನಾಲ್ಕನೇ ಸುತ್ತಿನಲ್ಲಿ ಜಪಾನ್​ನ ಒಸಾಕರನ್ನು, ಸೆಮಿಫೈನಲ್ಲಿ ವಿಶ್ವದ ಹಾಲಿ ನಂ.1 ಆಟಗಾರ್ತಿ ಆಷ್ಲೇ ಬಾರ್ಟಿ ಅವರನ್ನು ಮಣಿಸಿದ್ದರು. ಕೇವಲ 21 ವರ್ಷಕ್ಕೆ ಆಸ್ಟ್ರೇಲಿಯಾ ಓಪನ್​ ಪ್ರಶಸ್ತಿ ಗೆದ್ದ ವಿಶ್ವದ ಎರಡನೇ ಕಿರಿಯ ಆಟಗಾರ್ತಿ ಎನಿಸಿಕೊಂಡರು. ಇವರಿಗೂ ಮೊದಲು ರಷ್ಯಾದ ಮರಿಯಾ ಶರಫೋವಾ 2008ರಲ್ಲಿ 20 ವರ್ಷಕ್ಕೆ ಆಸ್ಟ್ರೇಲಿಯಾ ಓಪನ್​ ಗೆದ್ದಿದ್ದರು.

ABOUT THE AUTHOR

...view details