ನ್ಯೂಯಾರ್ಕ್: ಫೇಸ್ಬುಕ್ನಲ್ಲಿ ಜನರನ್ನು ಮನರಂಜಿಸಲು ಮತ್ತು ಪರಿಣಾಮಕಾರಿ ಸ್ಪರ್ಧೆಗಾಗಿ ಆಯೋಜಿಸಲಾಗಿರುವ 'ವರ್ಚ್ಯುಯಲ್ ಚಾರಿಟಿ ಟೆನಿಸ್ ಪಂದ್ಯಾವಳಿ'ಯಲ್ಲಿ ಸೆರೆನಾ ವಿಲಿಯಮ್ಸ್, ಮಾರಿಯಾ ಶರಪೋವಾ, ನವೋಮಿ ಒಸಾಕಾ, ಕಿ ನಿಶಿಕೋರಿ ಸೇರಿದಂತೆ ಟೆನ್ನಿಸ್ ತಾರೆಗಳು ಪಾಲ್ಗೊಳ್ಳಲಿದ್ದಾರೆ.
'ಸ್ಟೇ ಅಟ್ ಹೋಮ್ ಸ್ಲ್ಯಾಮ್' ಎಂಬ ಶೀರ್ಷಿಕೆಯಡಿ ಟೂರ್ನ್ಮೆಂಟ್ ಅನ್ನು ಐಎಂಜಿ ಕಂಪನಿ ಸಂಘಟಿಸುತ್ತಿದೆ. ಈ ಪಂದ್ಯಾವಳಿಯನ್ನು ಭಾನುವಾರ 'ಫೇಸ್ಬುಕ್ ಗೇಮಿಂಗ್' ಮತ್ತು 'ಐಎಂಜಿ ಟೆನಿಸ್' ಫೇಸ್ಬುಕ್ ಪುಟದಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತದೆ.
ನಿಂಟೆಂಡೊ ಸ್ವಿಚ್ನಲ್ಲಿ ಮಾರಿಯೋ ಟೆನಿಸ್ ಏಸಸ್ ಆಟವನ್ನು ಬಳಸಿಕೊಂಡು ಇಬ್ಬರಿರುವ ತಂಡಗಳು ಸ್ಪರ್ಧಿಸಲಿವೆ. ಈ ಟೂರ್ನ್ಮೆಂಟ್ನಲ್ಲಿ ವಿಜೇತರಿಗೆ 1 ಮಿಲಿಯನ್ ಡಾಲರ್ ಬಹುಮಾನ ಸಿಗಲಿದೆ. ಪ್ರತಿಯೊಂದು ತಂಡವೂ 25,000 ಡಾಲರ್ ದಾನ ಮಾಡಬೇಕಿದೆ.
ಲಾಕ್ಡೌನ್ ಹೇರಿರುವ ಪರಿಣಾಮ ಮನೆಯಲ್ಲೇ ಕೂತು ಬೇಸತ್ತು ಹೋಗಿರುವ ಜನರನ್ನು ರಂಜಿಸಲು ಮತ್ತು ಪರಿಣಾಮಕಾರಿ ಸ್ಪರ್ಧೆಗಾಗಿ ವಿಶ್ವದ ಉನ್ನತ ಕ್ರೀಡಾಪಟುಗಳು ಈ ಟೂರ್ನ್ಮೆಂಟ್ನಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಫೇಸ್ಬುಕ್ ಅಥ್ಲೀಟ್ ಪಾಟ್ನರ್ಶಿಫ್ ಲೀಡ್ ಇವಾನ್ ಶುಗರ್ಮನ್ ಹೇಳಿದ್ದಾರೆ.
ಲೆಜೆಂಡರಿ ಟೆನಿಸ್ ಆಟಗಾರ ಜಾನ್ ಮೆಕೆನ್ರೋ ಮತ್ತು ಜನಪ್ರಿಯ ಯೂಟ್ಯೂಬ್ ಸ್ಟಾರ್ ಐಜಸ್ಟಿನ್ (ಜಸ್ಟಿನ್ ಎಜಾರಿಕ್) ಅವರು ಕಾಮೆಂಟರಿ ನಡೆಸಿಕೊಡಲಿದ್ದಾರೆ.
ಐಎಂಜಿ ಕ್ಲೈಂಟ್ಸ್ ಒಟ್ಟಾಗಿ ಟೂರ್ನ್ಮೆಂಟ್ಗೆ ಬೆಂಬಲಿಸಿದ್ದು ಹೆಮ್ಮೆ ಅನಿಸುತ್ತದೆ. ಕಂಪನಿಯ ನೌಕರರಿಗೆ ಇದು ಉಪಯೋಗವಾಗಲಿದೆ ಎಂದು ಟೆನಿಸ್ ಕ್ಲೈಂಟ್ಗಳ ಎಸ್ವಿಪಿ ಮ್ಯಾಕ್ಸ್ ಐಸೆನ್ಬುಡ್ ಹರ್ಷ ವ್ಯಕ್ತಪಡಿಸಿದರು.
ಭಾಗವಹಿಸಲಿರುವ ತಂಡಗಳು
- ಸೆರೆನಾ ವಿಲಿಯಮ್ಸ್ & ಗಿಗಿ ಹಡಿದ್
- ನವೋಮಿ ಒಸಾಕಾ & ಹೇಲಿ ಬೈಬರ್
- ವೀನಸ್ ವಿಲಿಯಮ್ಸ್ & ಜುಜು ಸ್ಮಿತ್-ಶುಸ್ಟರ್
- ಮರಿಯಾ ಶರಪೋವಾ & ಕಾರ್ಲಿ ಕ್ಲೋಸ್
- ಕಿ ನಿಶಿಕೋರಿ & ಸ್ಟೀವ್ ಆಕಿ
- ಮ್ಯಾಡಿಸನ್ ಕೇ & ಸೀಲ್
- ಟೇಲರ್ ಫ್ರಿಟ್ಜ್ & ಆ್ಯಡಿಸನ್ ರೇ
- ಕೆವಿನ್ ಆ್ಯಂಡರ್ಸನ್ & ರಿಯಾನ್ ತಾನೆಹಿಲ್