ಕರ್ನಾಟಕ

karnataka

ETV Bharat / sports

T20 ಯಲ್ಲಿ ವೇಗದ 2500 ರನ್​: ವಿರಾಟ್​ ದಾಖಲೆ ಬ್ರೇಕ್​ ಮಾಡಿದ ಬಾಬರ್​ ಆಜಂ - ವಿರಾಟ್​ ಕೊಹ್ಲಿ ರೆಕಾರ್ಡ್

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರ ಬಾಬರ್​ ಆಜಂ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, ಈ ಮೂಲಕ ವಿರಾಟ್​ ಕೊಹ್ಲಿ ರೆಕಾರ್ಡ್​ ಬ್ರೇಕ್ ಮಾಡಿದ್ದಾರೆ.

Babar Azam
Babar Azam

By

Published : Nov 11, 2021, 10:12 PM IST

ದುಬೈ:ಐಸಿಸಿ ಟಿ20 ವಿಶ್ವಕಪ್​​ನಲ್ಲಿ ಅದ್ಭುತ ಫಾರ್ಮ್​​ನಲ್ಲಿರುವ ಪಾಕಿಸ್ತಾನದ ಕ್ಯಾಪ್ಟನ್​​ ಬಾಬರ್​ ಆಜಂ (Babar Azam) ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್ (T20 Cricket)​​ನಲ್ಲಿ ಅತಿ ವೇಗವಾಗಿ 2500 ರನ್​ಗಳಿಕೆ ಮಾಡಿರುವ ಮೊದಲ ಪ್ಲೇಯರ್​ ಎಂಬ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ವಿರಾಟ್​​ ಕೊಹ್ಲಿ ಸಾಧನೆ ಬ್ರೇಕ್​ ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಸೆಮಿಫೈನಲ್​ ಪಂದ್ಯದಲ್ಲಿ ಬಾಬರ್​ ಆಜಂ 39 ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಇದರ ಜೊತೆಗೆ ಟಿ20 ಕ್ರಿಕೆಟ್​ನಲ್ಲಿ ವೇಗವಾಗಿ 2500 ರನ್​ಗಳಿಕೆ ಮಾಡಿರುವ ದಾಖಲೆ ಬರೆದರು. ಇದಕ್ಕಾಗಿ 62 ಇನ್ನಿಂಗ್ಸ್​ ತೆಗೆದುಕೊಂಡಿದ್ದಾರೆ. ಉಳಿದಂತೆ ವಿರಾಟ್​ ಕೊಹ್ಲಿ (Virat Kohli) 68 ಇನ್ನಿಂಗ್ಸ್​, ಆಸ್ಟ್ರೇಲಿಯಾದ ಆರೋನ್​ ಫಿಂಚ್​​ 78 ಹಾಗೂ ನ್ಯೂಜಿಲ್ಯಾಂಡ್​ನ ಮಾರ್ಟಿನ್​ ಗಪ್ಟಿಲ್​​ 83 ಇನ್ನಿಂಗ್ಸ್​​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ:ರಿಜ್ವಾನ್​-ಫಖರ್ ಅರ್ಧಶತಕ: ಆಸ್ಟ್ರೇಲಿಯಾ ಗೆಲುವಿಗೆ 177ರನ್​ ಟಾರ್ಗೆಟ್ ನೀಡಿದ ಪಾಕ್​

ಇದರ ಜೊತೆಗೆ, ಪ್ರಸಕ್ತ ಕ್ಯಾಲೆಂಡರ್​ ವರ್ಷದಲ್ಲಿ ಟಿ20 ಕ್ರಿಕೆಟ್​​ನಲ್ಲಿ 1000 ರನ್​ಗಳಿಕೆ ಮಾಡಿರುವ ಮೊದಲ ಪ್ಲೇಯರ್​ ಎಂಬ ದಾಖಲೆ ಸಹ ಬರೆದಿದ್ದಾರೆ. ಜೊತೆಗೆ ಟಿ-20 ವಿಶ್ವಕಪ್​​ನಲ್ಲಿ ಅತಿ ಹೆಚ್ಚಿನ ರನ್ ​​(303*) ಗಳಿಕೆ ಮಾಡಿರುವ ಪ್ಲೇಯರ್​ ಎಂಬ ಪಟ್ಟ ಕೂಡ ಅಲಂಕಾರ ಮಾಡಿದ್ದಾರೆ. ಈಗಾಗಲೇ 2014ರಲ್ಲಿ ವಿರಾಟ್​ ಕೊಹ್ಲಿ 319ರನ್​, 2009ರಲ್ಲಿ ದಿಲ್ಷಾನ್​ 317ರನ್​​, 2010ರಲ್ಲಿ ಜಯವರ್ದನೆ 302ರನ್​ಗಳಿಕೆ ಮಾಡಿದ್ದಾರೆ.

ABOUT THE AUTHOR

...view details