ಕರ್ನಾಟಕ

karnataka

ETV Bharat / sports

ವಿಶ್ವದ ಅತಿ ವೇಗದ ಬ್ಯಾಡ್ಮಿಂಟನ್ ಸ್ಮ್ಯಾಶ್.. ಗಿನ್ನಿಸ್ ವಿಶ್ವ ದಾಖಲೆ ಬರೆದ ಸಾತ್ವಿಕ್

565 ಕಿ.ಮೀ/ಗಂಟೆ ವೇಗದಲ್ಲಿ ಸ್ಮ್ಯಾಶ್​ ಹಿಟ್ ಹೊಡೆದು ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ದಾಖಲೆ ಮಾಡಿದ್ದಾರೆ.

ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ
ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ

By

Published : Jul 18, 2023, 6:44 PM IST

ಸೋಕಾ (ಜಪಾನ್) : ಭಾರತದ ಸ್ಟಾರ್ ಷಟ್ಲರ್ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಅವರು ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದಾರೆ. ಪುರುಷ ಆಟಗಾರನಿಗೆ 565 ಕಿ.ಮೀ/ಗಂಟೆ ವೇಗದಲ್ಲಿ ಆಕರ್ಷಕ ಸ್ಮ್ಯಾಶ್​ ಹಿಟ್ ಹೊಡೆದು ದಾಖಲೆ ನಿರ್ಮಿಸಿದ್ದಾರೆ. ಇದು ಪುರುಷರ ಬ್ಯಾಡ್ಮಿಂಟನ್​ನಲ್ಲಿ ಈವರೆಗೆ ಅಧಿಕ ವೇಗದಲ್ಲಿ ಹೊಡೆದ ಸ್ಮ್ಯಾಶ್​ ಆಗಿದೆ.

ಇತ್ತೀಚೆಗೆ ನಡೆದ ಇಂಡೋನೇಷ್ಯಾ ಓಪನ್ ಸೂಪರ್ 1000 ಪ್ರಶಸ್ತಿಯನ್ನು ಮತ್ತೊಬ್ಬ ಷಟ್ಲರ್​ ಚಿರಾಗ್ ಶೆಟ್ಟಿ ಜೊತೆಗೂಡಿ ಸಾತ್ವಿಕ್ ಗೆದ್ದಿದ್ದಾರೆ. ಮೇ 2013 ರಲ್ಲಿ ಮಲೇಷಿಯಾದ ಟಾನ್ ಬೂನ್ ಹಿಯಾಂಗ್ ಅವರು 493 ಕಿ.ಮೀ/ಗಂಟೆ ವೇಗವಾಗಿ ಸ್ಮ್ಯಾಶ್​ ​ಮಾಡಿ ದಾಖಲೆ ನಿರ್ಮಿಸಿದ್ದರು. ಈ ದಾಖಲೆ ಯನ್ನು ದಶಕಗಳ ನಂತರ ಸಾತ್ವಿಕ್​ ಮುರಿದಿದ್ದಾರೆ. ಸಾತ್ವಿಕ್ ಅವರ ಸ್ಮ್ಯಾಶ್ ಒಂದು ಕಾರು ಸಾಧಿಸಿದ 372.6 ಕಿ.ಮೀ/ಗಂಟೆಯ ಗರಿಷ್ಠ ವೇಗಕ್ಕಿಂತ ಅಧಿಕ ವೇಗವಾಗಿದೆ. ಇನ್ನು ಮಲೇಷ್ಯಾದ ಮಹಿಳಾ ಬ್ಯಾಡ್ಮಿಂಟನ್​ ಆಟಗಾರ್ತಿ ಟ್ಯಾನ್ ಪರ್ಲಿ ಅವರು 438 ಕಿ.ಮೀ/ಗಂಟೆ ವೇಗದಲ್ಲಿ ಗಿನ್ನಿಸ್ ವಿಶ್ವ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಟ್ಯಾನ್​ ಅಧಿಕ ವೇಗದಲ್ಲಿ ಸ್ಮ್ಯಾಶ್​ ಹೊಡೆದು ಮೊದಲ ಸ್ಥಾನದಲ್ಲಿದ್ದಾರೆ.

ಯೋನೆಕ್ಸ್ ಬ್ಯಾಡ್ಮಿಂಟನ್ ಆಟಗಾರದ ಭಾರತ ಪುರಷರ ಷಟ್ಲರ್​ ಸಾತ್ವಿಕ್​ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಮಲೇಷ್ಯಾದ ಟ್ಯಾನ್ ಪರ್ಲಿ ಅವರು ವೇಗವಾಗಿ ಪುರುಷ ಮತ್ತು ಮಹಿಳಾ ಬ್ಯಾಡ್ಮಿಂಟನ್ ಹಿಟ್‌ಗಳಿಂದ ಹೊಸ ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ ಎಂದು ಘೋಷಿಸಲು ಹೆಮ್ಮೆಪಡುತ್ತದೆ ಎಂದು ಜಪಾನಿನ ಕ್ರೀಡಾ ಸಲಕರಣೆಗಳ ಉತ್ಪಾದನಾ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವ ದಾಖಲೆ ನಿರ್ಮಿಸಲು ಏಪ್ರಿಲ್ 14, 2023 ರಂದು ನಡೆಸಿದ ಪ್ರಯತ್ನಗಳನ್ನು ಸಾಧಿಸಲಾಯಿತು. ಆ ದಿನದ ವೇಗ ಮಾಪನ ಫಲಿತಾಂಶಗಳ ಆಧಾರದ ಮೇಲೆ ಗಿನ್ನಿಸ್ ವಿಶ್ವ ದಾಖಲೆಗಳಿಂದ ಅಧಿಕೃತ ತೀರ್ಪುಗಾರರು ಪರಿಶೀಲಿಸಿದರು. ಜಪಾನ್‌ನ ಸೈತಾಮಾದ ಸೋಕಾದಲ್ಲಿರುವ ಯೋನೆಕ್ಸ್ ಫ್ಯಾಕ್ಟರಿ ಜಿಮ್ನಾಷಿಯಂನಲ್ಲಿ ನಿಯಂತ್ರಿತ ಪರಿಸರದಲ್ಲಿ ಸಾತ್ವಿಕ್ ಅವರ ಸ್ಮ್ಯಾಶ್ ಅನ್ನು ನಡೆಸಲಾಗಿತ್ತು.

ಇಂಡೋನೇಷ್ಯಾ ಓಪನ್ 2023 ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೋಹ್ ವಿರುದ್ಧ ಗೆದ್ದ ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೂನ್​ 18 ರಂದು ಇತಿಹಾಸ ಬರೆದಿದ್ದರು. ಸೂಪರ್ 1000 ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಗೆದ್ದ ಮೊದಲ ಭಾರತೀಯರಾಗಿದ್ದು, ಸೂಪರ್​ 100, 300, 500,750 ಮತ್ತು 1000 ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಈ ಜೋಡಿ ಗೆದ್ದಿತ್ತು.

ಅಮೆರಿಕ ಓಪನ್​ ಬ್ಯಾಡ್ಮಿಂಟನ್ :ಜುಲೈ 14 ರಂದು ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಲಕ್ಷ್ಯಸೇನ್​ 21-10, 21-17ರಲ್ಲಿ ಭಾರತದವರೇ ಆದ ಶಂಕರ್ ಮುತ್ತುಸಾಮಿ ಸುಬ್ರಮಣಿಯನ್ ಅವರನ್ನು ಸೋಲಿಸಿದ್ದರು. ಪಂದ್ಯದಲ್ಲಿ ಪೂರ್ಣ ಪ್ರಾಬಲ್ಯ ಮೆರೆದ ಸೇನ್, ಯಾವುದೇ ಸಮಯದಲ್ಲಿ ಶಂಕರ್ ಪುಟಿದೇಳದಂತೆ ತಡೆದಿದ್ದರು. ಮೊದಲ ಸೆಟ್​ನ ಆರಂಭದಲ್ಲಿ 7-1 ರಿಂದ ಮುನ್ನಡೆ ಸಾಧಿಸಿದ ಸೇನ್​ ಪಾಯಿಂಟ್​ ಸಾಧಿಸುತ್ತಾ, 21-10 ರಲ್ಲಿ ಗೇಮ್​ ಗೆದ್ದರು. ಎರಡನೇ ಗೇಮ್‌ನಲ್ಲಿ ಎಸ್ ಶಂಕರ್ ತಿರುಗೇಟು ನೀಡುವ ಹೋರಾಟ ನಡೆಸಿದ್ದರೂ, ತನ್ನ ಚಾಕಚಕ್ಯತೆಯಿಂದ ಸೇನ್​ ಗೇಮ್​ ಅನ್ನು 21-17 ರಲ್ಲಿ ಗೆದ್ದರು. ಲಕ್ಷ್ಯಸೇನ್​ ಪಂದ್ಯವನ್ನು ಕೇವಲ 38 ನಿಮಿಷಗಳಲ್ಲಿ ಗೆದ್ದುಕೊಂಡಿದ್ದರು.

ಇದನ್ನೂ ಓದಿ :US Open Badminton: ಸಿಂಧು, ಸೇನ್ ಕ್ವಾರ್ಟರ್ ಫೈನಲ್ ಪ್ರವೇಶ

ABOUT THE AUTHOR

...view details