ಕರ್ನಾಟಕ

karnataka

By

Published : Oct 8, 2021, 4:26 AM IST

ETV Bharat / sports

ವಿಶ್ವ ಕುಸ್ತಿ ಚಾಂಪಿಯನ್​ಶಿಪ್​: ಭಾರತದ ಸರಿತಾಗೆ ಕಂಚು

ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಭಾರತದ ಮಹಿಳಾ ಕುಸ್ತಿಪಟುಗಳು ಗುರುವಾರ ಮಿಂಚಿದ್ದಾರೆ. 57 ಕೆಜಿ ವಿಭಾಗದಲ್ಲಿ ಅನ್ಶು ಮಲಿಕ್ ಬೆಳ್ಳಿ ಹಾಗೂ 59 ಕೆಜಿ ವಿಭಾಗದಲ್ಲಿ ಸರಿತಾ ಕಂಚಿನ ಪದಕ ಜಯಿಸಿದ್ದಾರೆ.

Sarita Mor
Sarita Mor

ಒಸ್ಲೋ (ನಾರ್ವೆ): ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾರತದ ಕುಸ್ತಿಪಟು ಸರಿತಾ ಮೋರ್ ಕಂಚಿನ ಪದಕ ಜಯಿಸಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಪಡೆದ ಭಾರತದ 6ನೇ ಮಹಿಳಾ ಕುಸ್ತುಪಟುವಾಗಿ ಇತಿಹಾಸ ರಚಿಸಿದ್ದಾರೆ.

59 ಕೆಜಿ ವಿಭಾಗದಲ್ಲಿ ಸ್ವಿಡನ್​​ನ ಸಾರಾ ಲಿಂಡ್​ಬೋರ್ಗ್ ವಿರುದ್ಧ ಸರಿತಾ 8-2 ಅಂತರದಿಂದ ಗೆದ್ದು ಪದಕ ಜಯಿಸಿದರು. 2021ರಲ್ಲಿ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಪದಕ ಗೆದ್ದ ದೇಶದ ಎರಡನೇ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೂ ಪಾತ್ರಾಗಿದ್ದಾರೆ. ಜೊತೆಗೆ ಈವರೆಗೆ ವಿಶ್ವಚಾಂಪಿಯನ್​ಶಿಪ್​ನಲ್ಲಿ ಕಂಚು ಗೆದ್ದ 6ನೇ ಭಾರತೀಯ ಮಹಿಳಾ ಕುಸ್ತಿಪಟು ಆಗಿಯೂ ಸರಿತಾ ಹೊರಹೊಮ್ಮಿದ್ದಾರೆ.

ಇನ್ನು ಗುರುವಾರವೇ ಭಾರತದ ಇನ್ನೋರ್ವ ಮಹಿಳಾ ಕುಸ್ತಿಪಟು ಅನ್ಶು ಮಲಿಕ್ 57 ಕೆಜಿ ವಿಭಾಗದಲ್ಲಿ ವಿಶ್ವಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಜಯಿಸಿ ಇತಿಹಾಸ ಬರೆದಿದ್ದಾರೆ. ಈ ಮೂಲಕ ಬೆಳ್ಳಿ ಪದಕ ಗೆದ್ದ ದೇಶದ ಮಹಿಳಾ ಕುಸ್ತಿಪಟುವಾಗಿ ಅನ್ಶು ದಾಖಲೆ ಮಾಡಿದ್ದಾರೆ.

(ಇತಿಹಾಸ ಬರೆದ ಅನ್ಶು ಮಲಿಕ್.. ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ಮೊದಲ ಮಹಿಳಾ ಕುಸ್ತಿಪಟು!)

ABOUT THE AUTHOR

...view details