ಹೈದರಾಬಾದ್: ಕ್ರೀಡಾಪಟುಗಳು ಮತ್ತು ಅವರ ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ವೈದ್ಯಕೀಯ ತಂಡಕ್ಕೆ ತುರ್ತಾಗಿ ಕೋವಿಡ್ ಲಸಿಕೆ ನೀಡುವಂತೆ ಮಾಜಿ ಒಲಿಂಪಿಕ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಪಿ.ಟಿ.ಉಷಾ ಟ್ವೀಟ್ ಮೂಲಕ ಕೇರಳ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕ್ರೀಡಾಪಟುಗಳಿಗೆ ತುರ್ತಾಗಿ ಕೋವಿಡ್ ಲಸಿಕೆ ನೀಡುವಂತೆ ಪಿ.ಟಿ. ಉಷಾ ಮನವಿ - ಪಿ.ಟಿ. ಉಷಾ
ಮುಂಬರುವ ರಾಷ್ಟ್ರೀಯ ಮತ್ತು ಇತರ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಲಸಿಕೆ ನೀಡುವಂತೆ ಖ್ಯಾತ ಕ್ರೀಡಾಪಟು ಪಿ.ಟಿ.ಉಷಾ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಅವರಿಗೆ ಮನವಿ ಮಾಡಿದ್ದಾರೆ.
ಪಿ.ಟಿ. ಉಷಾ
ಟ್ವೀಟ್ ಮೂಲಕ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಅವರಿಗೆ ಮನವಿ ಮಾಡಿರುವ ಪಿ.ಟಿ.ಉಷಾ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮತ್ತು ಇತರ ಸ್ಪರ್ಧೆಗಳು ನಿಗದಿಯಾಗಿವೆ. ಈ ಪಂದ್ಯಾವಳಿಗಳಲ್ಲಿ ಕ್ರೀಡಾಪಟುಗಳು, ಮತ್ತು ಅವರ ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ವೈದ್ಯಕೀಯ ತಂಡ ಭಾಗವಹಿಸಲಿದ್ದಾರೆ. ಹಾಗಾಗಿ, ತುರ್ತಾಗಿ ಲಸಿಕೆ ನೀಡುವಂತೆ ಸಲಹೆ ನೀಡಿದ್ದಾರೆ.