ಕರ್ನಾಟಕ

karnataka

ETV Bharat / sports

ಪವನ್ ಶೆರಾವತ್​ ಮಿಂಚಿನ ರೈಡಿಂಗ್​ಗೆ​ ಬೆಚ್ಚಿದ ಹರಿಯಾಣ..​ ಹ್ಯಾಟ್ರಿಕ್ ಜಯದೊಂದಿಗೆ 2ನೇ ಸ್ಥಾನಕ್ಕೇರಿದ ಬುಲ್ಸ್

ವೈಟ್​​ಫೀಲ್ಡ್​ನ ಶೆರಟಾನ್ ಗ್ರ್ಯಾಂಡ್ ಹೋಟೆಲ್​ನ ಒಳಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಿಂಚಿನ ರೈಡಿಂಗ್ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್ ತಂಡದ ನಾಯಕ ಪವನ್ ಶೆರಾವತ್ ಒಟ್ಟು 22 ಅಂಕಗಳಿಸಿ ಹರಿಯಾಣ ಸ್ಟೀಲರ್ಸ್​ ಡಿಫೆಂಡಿಂಗ್ ಪಡೆಯನ್ನು ಛಿದ್ರಗೊಳಿಸಿದರು.

Pawan Sehrawat shine,Bengaluru Bulls beat Haryana Steelers
ಬೆಂಗಳೂರು ಬುಲ್ಸ್​ಗೆ ಹ್ಯಾಟ್ರಿಕ್ ಜಯ

By

Published : Dec 30, 2021, 10:46 PM IST

ಬೆಂಗಳೂರು:ನಾಯಕ ಪವನ್ ಶೆರಾವತ್​ ಅವರ ಮಿಂಚಿನ ರೈಡಿಂಗ್​ ಹಾಗೂ ಮೋರೆ ಮತ್ತು ಮಹೇಂದರ್ ಸಿಂಗ್ ಅವರ ಡಿಫೆಂಡಿಂಗ್​ ನೆರವಿನಿಂದ ಬೆಂಗಳೂರು ಬುಲ್ಸ್​ ತಂಡ 42-28 ಅಂಕಗಳ ಅಂತರದಿಂದ ಹರಿಯಾಣ ಸ್ಟೀಲರ್ಸ್​ ವಿರುದ್ಧ ಪ್ರಾಬಲ್ಯಯುತ ಜಯ ಸಾಧಿಸಿದೆ.

ವೈಟ್​​ಫೀಲ್ಡ್​ನ ಶೆರಟಾನ್ ಗ್ರ್ಯಾಂಡ್ ಹೋಟೆಲ್​ನ ಒಳಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಿಂಚಿನ ರೈಡಿಂಗ್ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್ ತಂಡದ ನಾಯಕ ಪವನ್ ಶೆರಾವತ್ ಒಟ್ಟು 22 ಅಂಕಗಳಿಸಿ ಹರಿಯಾಣ ಸ್ಟೀಲರ್ಸ್​ ಡಿಫೆಂಡಿಂಗ್ ಪಡೆಯನ್ನು ಛಿದ್ರಗೊಳಿಸಿದರು.

ಚಂದ್ರನ್ ರಂಜಿತ್​ ವಿಫಲರಾಗಿದ್ದರಿಂದ ಪವನ್​ ರೈಡಿಂಗ್ ಜವಾಬ್ದಾರಿಯನ್ನು ಸಂಪೂರ್ಣ ತೆಗೆದುಕೊಂಡು 15 ಟಚ್​ ಪಾಯಿಂಟ್​ ಗಳಿಸಿಕೊಂಡರೆ, 5 ಬೋನಸ್ ಮತ್ತು 2 ಟ್ಯಾಕಲ್ ಕೂಡ ಮಾಡಿ 22 ಅಂಕ ಗಳಿಸಿದರು.

ಒಂದು ಕಡೆ ಪವನ್ ಸ್ಟೀಲರ್​ ಡಿಫೆನ್ಸ್ ಪಡೆಯನ್ನು ತಬ್ಬಿಬ್ಬುಗೊಳಿಸುತ್ತಿದ್ದರೆ ಇತ್ತ ಮಹೇಂದರ್ ಸಿಂಗ್ ಮತ್ತು ಜಿಬಿ ಮೋರೆ ಹರಿಯಾಣ ಸ್ಟೀಲರ್ಸ್​ ರೈಡರ್​ಗಳನ್ನು ಬಂದ ಹಾಗೆ ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೋರೆ 5 ಅಂಕ ಪಡೆದರೆ, ಮಹೇಂದರ್​ 4, ಅಮನ್ 3, ಸೌರಭ್ ನಂಡಲ್ 3 ಟ್ಯಾಕಲ್​ ಅಂಕ ಗಿಟ್ಟಿಸಿಕೊಂಡರು.

ಸ್ಟೀಲರ್ಸ್ ಪರ ವಿಕಾಸ್​ ಖಂಡೋಲಾ 7, ರೋಹಿತ್ ಗುಲಿಯಾ 5 ರೈಡಿಂಗ್ ಅಂಕ ಪಡೆದರೆ, ಜೈದೀಪ್ ಕುಲ್ದೀಪ್ 4, ರವಿಕುಮಾರ್​ ಮತ್ತು ಸುರೇಂದರ್ ನಾಡಾ ತಲಾ 2 ಟ್ಯಾಕಲ್ ಅಂಕ ಪಡೆದರು.

ಮತ್ತೊಂದು ಪಂದ್ಯದಲ್ಲಿ ಯು ಮುಂಬಾ 37-28 ಅಂಕಗಳ ಅಂತರದಿಂದ ಜೈಪುರ್​ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆಲುವು ಸಾಧಿಸಿತು. ರೈಡರ್​ಗಳಾದ ವಿ.ಅಜಿತ್ ಕುಮಾರ್​ 11, ಅಭಿಶೇಕ್​ ಸಿಂಗ್ 10 ಪಡೆದರೆ, ಫಜಲ್ ಅಟ್ರಾಚಲಿ 3, ಹರೀಂದರ್​ ಕುಮಾರ್ ಮತ್ತು ರಿಂಕು​ 2 ಟ್ಯಾಕಲ್ ಅಂಕ ಪಡೆದರು.

ಇತ್ತ ಪ್ಯಾಂಥರ್ಸ್ ಪರ ಏಕಾಂಗಿ ಹೋರಾಟ ಮಾಡಿದ ಅರ್ಜುನ್ ದೇಶ್ವಾಲ್ 14 ಅಂಕ ಪಡೆದರು. ನಾಯಕ ದೀಪಕ್​ ಕೇವಲ 4 ಅಂಕ ಪಡೆದು ಮಂಕಾದರು. ಡಿಫೆಂಡರ್​ಗಳಾದ ವಿಶಾಲ್​ ಮತ್ತು ಶಾವುಲ್ ಕುಮಾರ್​ ತಲಾ 3 ಅಂಕ ಪಡೆದರು.

ಇದನ್ನೂ ಓದಿ:U19 ಏಷ್ಯಾಕಪ್: ​ಬಾಂಗ್ಲಾದೇಶ ಮಣಿಸಿ ಫೈನಲ್ ಪ್ರವೇಶಿಸಿದ ಭಾರತದ ಯಂಗ್ ಟೈಗರ್ಸ್​

ABOUT THE AUTHOR

...view details