ಟೋಕಿಯೊ: ಟೋಕಿಯೊ ಒಲಿಂಪಿಕ್ನಲ್ಲಿ ಕಳೆದ ಏಳು ದಿನಗಳಲ್ಲಿ ನಡೆದ ಕೆಲವು ಕುತೂಹಲಕಾರಿ ವಿಡಿಯೋಗಳು ಮತ್ತು ಫೋಟೋಗಳನ್ನು ವೈರಲ್ ಮಾಡಲಾಗಿದೆ.
ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮಹಿಳಾ ಸ್ಪರ್ಧಿ ಕಯಾಕ್‌ಗೆ ಕಾಂಡೋಮ್ ಬಳಸಿದ್ದೇಕೆ ಗೊತ್ತೇ? - ಜೆಸ್ಸಿಕಾ ಫಾಕ್ಸ್
ಸ್ಪರ್ಧಿ ಫಾಕ್ಸ್ ಅವರು ತಮ್ಮ ಕಯಾಕ್ನ ಸುರಕ್ಷತೆ ದೃಷ್ಟಿಯಿಂದ ಅದರ ಮುಂದಿನ ಭಾಗಕ್ಕೆ ಕಾಂಡೋಮ್ಗಳನ್ನು ಬಳಸಿದ್ದಾರೆ. ಈ ರಿಪೇರಿ ಕಾರ್ಯವನ್ನು ಹೇಗೆ ಮಾಡಲಾಗಿದೆ ಎಂಬುದನ್ನು ನಿರೂಪಿಸಲು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಒಲಿಂಪಿಕ್ಸ್‌ನ ಇತ್ತೀಚಿನ ವೈರಲ್ ವಿಡಿಯೋದಲ್ಲಿ ಆಸ್ಟ್ರೇಲಿಯಾದ ಕ್ರೀಡಾಪಟು ಜೆಸ್ಸಿಕಾ ಫಾಕ್ಸ್ ಭಾರೀ ವೈರಲ್ ಆಗಿದ್ದಾರೆ. 27ರ ಹರೆಯದ ಈಕೆ 6 ನೇ ದಿನದ ಮೊದಲ ಮಹಿಳಾ ಸಿ 1 ಒಲಿಂಪಿಕ್ ಫೈನಲ್‌ನಲ್ಲಿ ಎದುರಾಳಿಗಳನ್ನು ಮಣಿಸಿ ಚಿನ್ನ ಗೆದ್ದಿದ್ದಾರೆ. ಆದರೆ ಫೈನಲ್‌ಗೆ ಮುಂಚಿತವಾಗಿ ಫಾಕ್ಸ್ ಮತ್ತು ಅವರ ತಂಡವು ತುರ್ತು ಸಮಸ್ಯೆಯೊಂದಕ್ಕೆ ಪರಿಹಾರ ಮಾಡಿಕೊಳ್ಳಬೇಕಿತ್ತು. ಅದಕ್ಕೆ ಅವರು ಕಂಡುಕೊಂಡ ಮಾರ್ಗ ಕಾಂಡೋಮ್.
ಹೌದು. ಫಾಕ್ಸ್ ತಮ್ಮ ಕಯಾಕ್ನ ಸುರಕ್ಷತೆ ದೃಷ್ಟಿಯಿಂದ ಅದರ ಮುಂದಿನ ಭಾಗಕ್ಕೆ ಕಾಂಡೋಮ್ಗಳನ್ನು ಬಳಸಿದ್ದಾರೆ. ಈ ರಿಪೇರಿ ಕಾರ್ಯವನ್ನು ಹೇಗೆ ಮಾಡಲಾಗಿದೆ ಎಂಬುದನ್ನು ನಿರೂಪಿಸಲು ಅವರು ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.