ಕರ್ನಾಟಕ

karnataka

ETV Bharat / sports

ನಂಬರ್​ ಒನ್​ ಕುಸ್ತಿಪಟುಗೆ ನೀರುಣಿಸಿದ ವಿನೇಶ್​​... ಟೋಕಿಯೋ ಒಲಿಂಪಿಕ್​ಗೆ ಅರ್ಹತೆ ಪಡೆದ ಫೋಗಟ್​

ಭಾರತದ ಸ್ಟಾರ್​ ಕುಸ್ತಿಪಟು ವಿನೇಶ್‌ ಫೋಗಟ್‌ ನಿನ್ನೆ ನಡೆದ ಪಂದ್ಯದಲ್ಲಿ ಜಪಾನ್​ನ ಮಾಯಾ ಮುಕೈದಾ ವಿರುದ್ಧ 0-7ರಲ್ಲಿ ಸೋಲನುಭಬಿಸಿದ್ದರು. ಆದರೆ ಮುಕೈದಾ ಫೈನಲ್​ ತಲುಪಿದ್ದರಿಂದ ಫೋಗಟ್​ಗೆ ಮರುಹಂಚಿಕೆ ಸುತ್ತಿನಲ್ಲಿ ಕಂಚಿಗಾಗಿ ಹೋರಾಟ ಮಾಡುವ ಅವಕಾಶ ಸಿಕ್ಕಿತ್ತು.

By

Published : Sep 18, 2019, 5:11 PM IST

Updated : Sep 19, 2019, 5:31 PM IST

India wrestler Vinesh Phogat

ನೂರ್​-ಸುಲ್ತಾನ್​: ಕಜಾಕಿಸ್ತಾನ್​ನ ನೂರ್‌ಸುಲ್ತಾನ್​ನಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನ 2ನೇ ಮರುಹಂಚಿಕೆ ಸುತ್ತಿನಲ್ಲಿ ವಿಶ್ವದ ನಂಬರ್​ ಒನ್​ ಶ್ರೇಯಾಂಕದ ಸಾರಾ ಹಿಲ್ಡರ್​ ಬ್ರಾಂಡ್​ರನ್ನು ಮಣಿಸಿ ಟೋಕಿಯೋ ಒಲಿಂಪಿಕ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಭಾರತದ ಸ್ಟಾರ್​ ಕುಸ್ತಿಪಟು ವಿನೇಶ್‌ ಫೋಗಟ್‌ ಮಂಗಳವಾರ ನಡೆದ ಪಂದ್ಯದಲ್ಲಿ ಜಪಾನ್​ನ ಮಾಯಾ ಮುಕೈದಾ ವಿರುದ್ಧ 0-7ರಲ್ಲಿ ಸೋಲನುಭವಿಸಿದ್ದರು. ಆದರೆ ಮುಕೈದಾ ಫೈನಲ್​ ತಲುಪಿದ್ದರಿಂದ ಫೋಗಟ್​ಗೆ ಮರುಹಂಚಿಕೆ ಸುತ್ತಿನಲ್ಲಿ ಕಂಚಿಗಾಗಿ ಹೋರಾಡುವ ಅವಕಾಶ ಸಿಕ್ಕಿತ್ತು.

ಇಂದು ನಡೆದ ಮರುಹಂಚಿಕೆಯ ಮೊದಲ ಪಂದ್ಯದಲ್ಲಿ ಉಕ್ರೇನ್‍ನ ಯುವಿಲಿಯಾ ಅವರನ್ನು 5-0ಯಲ್ಲಿ ಮಣಿಸಿದ್ದ ಫೋಗಟ್​, ಎರಡನೇ ಪಂದ್ಯದಲ್ಲಿ ಕಳೆದ ಬಾರಿಯ ವಿಶ್ವಚಾಂಪಿಯನ್​ಶಿಪ್​ನ ಬೆಳ್ಳಿ ಪದಕ ವಿಜೇತೆ ಅಮೆರಿಕದ ಸಾರಾ ಹಿಲ್ಡರ್​ಬ್ರಾಂಡ್​​ರನ್ನು 8-2 ರಲ್ಲಿ ಮಣಿಸಿ 2020ರ ಟೋಕಿಯೋ ಒಲಿಂಪಿಕ್​ಗೆ ಅರ್ಹತೆ ಗಿಟ್ಟಿಸಿಕೊಂಡರಲ್ಲದೆ ಕಂಚಿನ ಪದಕಕ್ಕೆ ಹತ್ತಿರವಾಗಿದ್ದಾರೆ.

ಇಂದು ಕಂಚಿನ ಪದಕಕ್ಕಾಗಿ ಗ್ರೀಕ್​ನ ಮರಿಯಾ ಪ್ರೇವೊಲರಕಿ ವಿರುದ್ಧ ಫೋಗಟ್​ ಸೆಣಸಾಟ ನಡೆಸಲಿದ್ದಾರೆ.

Last Updated : Sep 19, 2019, 5:31 PM IST

ABOUT THE AUTHOR

...view details