ಕರ್ನಾಟಕ

karnataka

By

Published : Jan 6, 2023, 7:58 PM IST

ETV Bharat / sports

1975ರ ವಿಶ್ವಕಪ್ ಗೆಲುವು ಪಾಕ್​ ಮೇಲಿನ ಯುದ್ಧದ  ವಿಜಯದಂತಿತ್ತು.. ಹರ್​ಚರಣ್​ ಸಿಂಗ್

ಇದೇ 13ರಿಂದ ಒಡಿಶಾದಲ್ಲಿ ಹಾಕಿ ವಿಶ್ವ ಕಪ್​ ಆರಂಭ - 1975ರ ವಿಶ್ವಕಪ್​ ವಿಜೇತ ತಂಡದ ಆಟಗಾರ ಹರ್​ಚರಣ್​ ಸಿಂಗ್ ಗೆಲುವಿನ ಕ್ಷಣದ ನೆನಪುಗಳು ಇಲ್ಲಿವೆ..

Harcharan Singh remembered the day of 1975 Hockey World Cup victory.
ಹರ್​ಚರಣ್​ ಸಿಂಗ್

ಹೈದರಾಬಾದ್:ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್​​ನಿಂದ ಒಡಿಶಾದಲ್ಲಿ ಜನವರಿ 13 ರಿಂದ ಪುರುಷರ ಹಾಕಿ ವಿಶ್ವಕಪ್‌ ಆರಂಭವಾಗಲಿದೆ. ಇನ್ನು ಕೆಲವೇ ದಿನಗಳಿದ್ದು ಹಾಕಿ ಪ್ರೀಯರಿಗೆ ಎಲ್ಲೆ ಇಲ್ಲದ ಮನರಂಜನೆ ಸಿಗಲಿದೆ. ಮೊದಲ ದಿನವೇ ವಿಶ್ವ ಕಪ್​ಗೆ ಆಥಿತ್ಯವಹಿಸಿರುವ ಭಾರತ ಮತ್ತು ಸ್ಪೇನ್ ​ನಡುವೆ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಒಡಿಶಾದಲ್ಲಿ ವಿಶ್ವದ ನಾಲ್ಕನೇ ಅತೀದೊಡ್ಡ ಕ್ರಿಡಾಂಗಣ ಉದ್ಘಾಟನೆಯಾಗಿದೆ.

ಭಾರತದ ರಾಷ್ಟ್ರೀಯ ಕ್ರೀಡೆಯಾಗಿರುವ ಹಾಕಿಯ ಆದ್ಯತೆಯ ತಾಣಗಳಲ್ಲಿ ಒಂದಾದ ಒಡಿಶಾದಲ್ಲಿ ವಿಶ್ವದ ಅತ್ಯುತ್ತಮ ಆಟಗಾರರ ಪ್ರದರ್ಶನ ವೀಕ್ಷಿಸುವ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿಷ್ಠಿತ ಈವೆಂಟ್‌ನಲ್ಲಿ ಪದಕದ ಬರವನ್ನು ಕೊನೆಗೊಳಿಸಲು ಭಾರತ ತಂಡವು ತಮ್ಮ ಸಿದ್ಧತೆಗಳನ್ನು ನಡೆಸುತ್ತಿದೆ. ಈ ವೇಳೆ, ಹಾಕಿ ವಿಶ್ವಕಪ್​ನ ಸಿಹಿ ಹಾಗೂ ಕಹಿ ಅನುಭವಗಳನ್ನು ನೆನೆಯುವ ಸಮಯ.

ಹಾಕಿಯ ಗತ ವೈಭವ:ಹರ್​ಚರಣ್​ ಸಿಂಗ್ ಅವರು 1975 ರಲ್ಲಿ ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ನಡೆದ ಹಾಕಿ ವಿಶ್ವಕಪ್​ ದಿನಗಳನ್ನು ನೆನಯುತ್ತಾ, 'ಹೋಟೆಲ್​ನಲ್ಲಿ ಟ್ರೋಫಿಯನ್ನು ಪ್ರದರ್ಶಿಸಲಾಯಿತು. ಕಪ್ ಅ​ನ್ನು ಮೊದಲ ಬಾರಿಗೆ ನೋಡಿದಾಗ ಎಲ್ಲರೂ ಮೂಕ ವಿಸ್ಮಿತರಾಗಿದ್ದೆವು, ಈ ಕಪ್​ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದೆವು. ಅದಕ್ಕೂ ಮೊದಲು ಎರಡು ಬಾರಿ ಕೈ ತಪ್ಪಿದ್ದ ಟ್ರೋಫಿಗೆ ಗೆದ್ದು ಮುತ್ತಿಕ್ಕುವ ಆಸೆ ಆಗಿತ್ತು. ಅಜಿತ್ ಪಾಲ್ ಸಿಂಗ್ ನಾಯಕತ್ವದಲ್ಲಿ ಗೆದ್ದು ಬೀಗಿದ್ದೆವು. ಆ ಕ್ಷಣ ಮರುಕಳಿಸುವ ದಿನಗಳು ದೂರ ಇಲ್ಲ. ಮತ್ತೆ ಭಾರತ ಟ್ರೋಫಿ ತನ್ನದಾಗಿಸಿಕೊಳ್ಳಲಿದೆ' ಎಂದರು.

1975ರ ವಿಶ್ವಕಪ್ ಗೆಲುವು ಪಾಕ್​ ಮೇಲಿನ ಯುದ್ಧ ಜಯದಂತಿತ್ತು ಹರ್​ಚರಣ್​ ಸಿಂಗ್ ನೆನಕೆ

ಹರ್​ಚರಣ್​ ಸಿಂಗ್ ಭಾರತದ ರನ್​ ಇನ್‌ನಲ್ಲಿ ಎಡ ಬದಿಯ ಆಕ್ರಮಣಕಾರಿದ್ದರು. ಸೆಮಿ-ಫೈನಲ್‌ನಲ್ಲಿ ಮಲೇಷ್ಯಾ ವಿರುದ್ಧ ಹೆಚ್ಚುವರಿ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿ ಪಾಕ್​ ವಿರುದ್ಧದ ಫೈನಲ್​ಗೆ ಹೆಜ್ಜೆ ಇಟ್ಟರು. 1975 ರಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಒಂದು ಗೋಲಿನಿಂದ ಸೋಲಿಸಿ ಕಪ್​ ಮುಡಿಗೇರಿಸಿಕೊಂಡಿತ್ತು. ವಿಶ್ವಕಪ್‌ನ ಮೊದಲ ಮೂರು ಆವೃತ್ತಿಗಳಲ್ಲಿ ಭಾರತದ ಪ್ರಮುಖ ನಾಲ್ವರು ಆಟಗಾರರಲ್ಲಿ ಹರ್ಚರಣ್ ಕೂಡ ಒಬ್ಬರಾಗಿದ್ದರು.

'ಭಾರತಕ್ಕೆ ವಿಶ್ವಕಪ್‌ನಲ್ಲಿ ಮೊದಲ ಚಿನ್ನದ ಪದಕವನ್ನು ಗೆದ್ದ ನಂತರ ನಾವು ವಿಶ್ವದ ಅಗ್ರಸ್ಥಾನದಲ್ಲಿದ್ದೆವು. ನಾನು ಹಿಂತಿರುಗಿ ಯೋಚಿಸಿದಾಗ, ನಾವು ಸಾಧಿಸಿದ್ದರಲ್ಲಿ ನನಗೆ ತುಂಬಾ ಸಂತೋಷ ಮತ್ತು ತೃಪ್ತಿಯಾಗಿದೆ. ಒಬ್ಬ ಕ್ರೀಡಾಪಟುವಾಗಿ, ತೃಪ್ತಿಯನ್ನು ವಿವರಿಸಲು ಸಾಧ್ಯವಿಲ್ಲ. ಥ್ರಿಲ್, ಗೂಸ್‌ಬಂಪ್ಸ್ ಈ ರೀತಿಯಾಗಿ ನಮ್ಮ ಆ ಸಂತೋಷದ ಕ್ಷಣವನ್ನು ನೆನಪಿಸಿಕೊಳ್ಳ ಬೇಕಿದೆ ಅಷ್ಟೇ. ಪಂದ್ಯಾವಳಿಯ ಪ್ರಾರಂಭದಲ್ಲಿ ನಮ್ಮ ಹೋಟೆಲ್​​ನಲ್ಲಿ ತೋರಿಸಿದ್ದ ಕಪ್, ಪಾಕಿಸ್ತಾನವನ್ನು ಸೋಲಿಸಿದ ದಿನ ನಮ್ಮ ಕೈಯಲ್ಲಿತ್ತು, ಆದರೆ, ಅದನ್ನು ನಂಬುವ ಸ್ಥಿತಿಯಲ್ಲಿ ನಾವ್ಯಾರು ಇರಲಿಲ್ಲ. ಅದೊಂದು ಕನಸಿನಂತೆ ಇಂದಿಗೂ ಭಾಸವಾಗುತ್ತದೆ' ಎನ್ನುತ್ತಾರೆ ಹರ್​ಚರಣ್​ ಸಿಂಗ್ .

1969 ರಲ್ಲಿ ಅಮೃತಸರದಲ್ಲಿ ತವರಿನಲ್ಲಿ ಆಡಿದ ಸರಣಿಯಲ್ಲಿ ಕೀನ್ಯಾ ವಿರುದ್ಧ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಹರ್​ಚರಣ್​ ಸಿಂಗ್ ಆಡಿದ್ದರು. 1972 ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡದ ಭಾಗವಾಗಿದ್ದರು. ಅವರ ಆಟದ ದಿನಗಳಲ್ಲಿ ನೆರೆಹೊರೆಯವರು ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಆಟಗಳು ಇಂದಿನ ಭಾರತ ಪಾಕಿಸ್ತಾನ ಕ್ರಿಕೆಟ್​ ಪಂದ್ಯಗಳಂತೆ ಭಾವನಾತ್ಮಕವಾಗಿ ಆವೇಶದ ಸ್ಪರ್ಧೆಗಳಾಗಿದ್ದವು. ಭಾರತ 1971 ರಲ್ಲಿ ಪಾಕಿಸ್ತಾನದ ವಿರುದ್ಧ ಸೋಲನುಭವಿಸಿತ್ತು. ಇದರ ಪ್ರತೀಕಾರ ಎನ್ನುವ ರೀತಿಯಲ್ಲಿ 1973 (ಸೆಮಿಫೈನಲ್) ಮತ್ತು 1975 (ಫೈನಲ್) ನಲ್ಲಿ ಪಾಕ್​ನ್ನು ಸೋಲಿಸಿತ್ತು.

'1975ರ ಫೈನಲ್​ ಹಣಾಹಣಿ ಒಂದು ಯುದ್ಧದ ರೀತಿಯೇ ಇತ್ತು. ಅದಕ್ಕೆ ಕಾರಣ 1971ರಲ್ಲಿ ಭಾರತವನ್ನು ಪಾಕ್​ ಸೋಲಿಸಿತ್ತು ಮತ್ತು 1973ರಲ್ಲಿ ಭಾರತ ಪಾಕ್​ನ್ನು ಸೆಮಿಸ್​ನಲ್ಲಿ ಸೋಲಿಸಿತ್ತು. ಹೀಗಾಗಿ 1975ರ ಪಂದ್ಯ ಸಂಪೂರ್ಣ ಯುದ್ಧದ ವಾತಾವರಣವಾಗಿ ತಿರುಗಿತ್ತು. ಎಲ್ಲರ ಚಿತ್ತವೂ ಈ ವಿಶ್ವಕಪ್​ ಮೇಲೆ ನೆಟ್ಟಿತ್ತು. ಗೆದ್ದ ದಿನ ನಾವು ದೇಶಕ್ಕಾಗಿ ಏನಾದರೊಂದು ಸಾಧಸಿದ್ದೇವೆ ಎಂಬ ಭಾವನೆ ನಮ್ಮಲ್ಲಿ ತಂದಿತ್ತು. ನಮ್ಮ ತಾಯ್ನಾಡಿಗೆ ಹೆಮ್ಮೆ ಮತ್ತು ತೃಪ್ತಿ ಪಡುವ ಕ್ಷಣಗಳು ಅವಾಗಿದ್ದವು' ಎಂದು ಹರ್​ಚರಣ್ ಆಟದ ಕ್ಷಣಗಳನ್ನು ನೆನೆದಿದ್ದಾರೆ.

'ನನ್ನ ಶುಭ ಹಾರೈಕೆಗಳು ಭಾರತೀಯ ಪುರುಷರ ಹಾಕಿ ತಂಡದೊಂದಿಗೆ ಯಾವಾಗಲೂ ಇರುತ್ತದೆ. ಅವರು ಎಲ್ಲ ಸಮಯದಲ್ಲೂ ಧನಾತ್ಮಕವಾಗಿ ಉಳಿಯುತ್ತಾರೆ ಮತ್ತು ಆಶಾದಾಯಕವಾಗಿ ಅವರು ವಿಶ್ವಕಪ್ ಗೆಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ಪಾಕಿಸ್ತಾನಕ್ಕೆ ಅವಕಾಶ ಸಿಕ್ಕಿಲ್ಲ:ಭಾರತದಲ್ಲಿ ಸತತ ಎರಡನೇ ಬಾರಿಗೆ ಹಾಕಿ ವಿಶ್ವಕಪ್‌ ಆಯೋಜನೆಯಾಗುತ್ತಿದೆ. ಈ ಬಾರಿಯೂ ಒಡಿಶಾ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ. ಜನವರಿ 13-29ರವರೆಗೆ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ವಿಶ್ವದ 16 ತಂಡಗಳು ಭಾಗವಹಿಸಲಿವೆ. ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿರುವ ಪಾಕಿಸ್ತಾನ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ. ಅದೇ ಸಮಯದಲ್ಲಿ, ಭಾರತವು ನಾಲ್ಕು ದಶಕಗಳ ನಂತರ ಇತಿಹಾಸವನ್ನು ಪುನರಾವರ್ತಿಸಲು ಬಯಸುತ್ತದೆ.

ಇದನ್ನೂ ಓದಿ:ವಿಶ್ವದ ನಾಲ್ಕನೇ ಅತಿದೊಡ್ಡ ಹಾಕಿ ಕ್ರೀಡಾಂಗಣ ಜ. 5ಕ್ಕೆ ಉದ್ಘಾಟನೆ: ಇದೇ 13ರಿಂದ ಹಾಕಿ ವಿಶ್ವಕಪ್

ABOUT THE AUTHOR

...view details