ಆಮ್‌ಸ್ಟೆಲ್‌ವೀನ್:ಗುರುವಾರ ಇಲ್ಲಿ ನಡೆದ ಎಫ್‌ಐಎಚ್ ಮಹಿಳಾ ವಿಶ್ವಕಪ್ ಪೂಲ್ ಬಿ ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 3-4 ಅಂತರದಲ್ಲಿ ಸೋಲು ಅನುಭವಿಸಿತು. ಈ ಮೂಲಕ ಮಹಿಳಾ ಹಾಕಿ ತಂಡವು ಅಪರೂಪದ ಅವಕಾಶವನ್ನು ಕೈಚೆಲ್ಲಿ 3ನೇ ಸ್ಥಾನ ಗಳಿಸಿದೆ. ಆದರೆ ತಂಡವು ಕ್ರಾಸ್‌ಓವರ್ ಮೂಲಕ ಕ್ವಾರ್ಟರ್ ಫೈನಲ್ ತಲುಪಲು ಸಾಧ್ಯವಿದೆ.
ಭಾರತದ ವಿರುದ್ಧ ಗೆಲುವು ದಾಖಲಿಸಿದ ನ್ಯೂಜಿಲೆಂಡ್ ಏಳು ಅಂಕಗಳೊಂದಿಗೆ ಬಿ ಪೂಲ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ ತಂಡ ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ಭಾರತ ಮತ್ತು ಚೀನಾ ತಲಾ ಎರಡೆರಡು ಅಂಕಗಳನ್ನು ಹೊಂದಿವೆ. ಆದರೆ ಟೂರ್ನಿಯಲ್ಲಿ ಉತ್ತಮ ಗೋಲು ಗಳಿಸಿರುವ ಭಾರತ ಕ್ರಾಸ್‌ಓವರ್‌ಗೆ ಅರ್ಹತೆ ಪಡೆದಿದೆ.