ಕರ್ನಾಟಕ

karnataka

ETV Bharat / sports

ಫಿಫಾ ವಿಶ್ವಕಪ್​: ರಾಷ್ಟ್ರಗೀತೆ ಹಾಡದೆ ಹಿಜಾಬ್‌ ಹೋರಾಟಕ್ಕೆ ಇರಾನ್​ ತಂಡದ ಬೆಂಬಲ - ETV Bharat Kannada

ತನ್ನ ತವರಿನಲ್ಲಿ ನಡೆಯುತ್ತಿರುವ ಹಿಜಾಬ್‌ ವಿರುದ್ಧದ ಪ್ರತಿಭಟನೆಗೆ ಬೆಂಬಲ ಸೂಚಿಸಿ, ನಿನ್ನೆ ಫಿಫಾ ವಿಶ್ವಕಪ್​ನಲ್ಲಿ ಇರಾನ್​ ತಂಡ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಲು ನಿರಾಕರಿಸಿತು.

The Iranian team refused to sing the national anthem
ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್​ ತಂಡ

By

Published : Nov 22, 2022, 9:24 AM IST

ಕತಾರ್​: ಅರಬ್​ ದೇಶ ಕತಾರ್​ನಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಫಿಫಾ ವಿಶ್ವಕಪ್​ ಟೂರ್ನಿಯಲ್ಲಿ ಇಂಗ್ಲೆಂಡ್​ ವಿರುದ್ಧದ ತನ್ನ ಮೊದಲ ಪಂದ್ಯಕ್ಕೂ ಮುನ್ನ ಇರಾನ್ ತಂಡದ ಆಟಗಾರರು ಸ್ವದೇಶದ ರಾಷ್ಟ್ರಗೀತೆ ಹಾಡಲು ನಿರಾಕರಿಸಿದರು.

ಇರಾನ್‌ನಲ್ಲಿ ಹಿಜಾಬ್‌ ವಿರೋಧಿಸಿ ಹೋರಾಡಿ 22 ವರ್ಷದ ಮಹ್ಸಾ ಅಮಿನಿ ಎಂಬ ಯುವತಿ ಪೊಲೀಸ್ ವಶದಲ್ಲೇ ಸಾವನ್ನಪ್ಪಿದ್ದರು. ಈ ಘಟನೆಯ ಬಳಿಕ ದೇಶಾದ್ಯಂತ ಹಿಜಾಬ್‌ ವಿರೋಧಿ ಆಂದೋಲನ ದೊಡ್ಡ ಮಟ್ಟದಲ್ಲಿ ಶುರುವಾಗಿತ್ತು. ಇದೀಗ ಸರ್ಕಾರದ ವಿರುದ್ಧ ನಡೆಯುತ್ತಿರುವ ಸಾಮೂಹಿಕ ಪ್ರತಿಭಟನೆಗಳಿಗೆ ಇರಾನ್ ಫುಟ್ಬಾಲ್‌ ತಂಡವೂ ಬೆಂಬಲ ಸೂಚಿಸಿ ಜಗತ್ತಿನ ಗಮನ ಸೆಳೆದಿದೆ.

ಇದನ್ನೂ ಓದಿ:ಫಿಫಾ ವಿಶ್ವ​ಕಪ್​: ಇರಾನ್ ಮಣಿಸಿದ ಇಂಗ್ಲೆಂಡ್ ಶುಭಾರಂಭ

ABOUT THE AUTHOR

...view details