ಸ್ಟಾವೆಂಜರ್(ನಾರ್ವೆ) :ಭಾರತದ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರು ನಾರ್ವೆ ಚೆಸ್ ಟೂರ್ನಿಯ ಕ್ಲಾಸಿಕಲ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಮ್ಯಾಕ್ಸಿಮ್ ವಾಚಿಯರ್ - ಲಾಗ್ರೇವ್ ಅವರನ್ನು ಸೋಲಿಸಿದರು. ಮಂಗಳವಾರ ತಡರಾತ್ರಿ ಫ್ರೆಂಚ್ ಆಟಗಾರನ ವಿರುದ್ಧದ ಗೆಲುವಿನಿಂದ ಭಾರತದ ಗ್ರಾಂಡ್ಮಾಸ್ಟರ್ 3 ಅಂಕ ಗಳಿಸಲು ಸಾಧ್ಯವಾಯಿತು.
ಅಮೆರಿಕದ ವೆಸ್ಲಿ ಸೋ ಮೊದಲ ಸುತ್ತಿನಲ್ಲಿ ತೈಮೂರ್ ರಾಜ್‌ದಬೊವ್ ಅವರನ್ನು ಸೋಲಿಸಿ ಆನಂದ್ ಅವರೊಂದಿಗೆ ಸಮಬಲ ಸಾಧಿಸಿದರು. ಆದರೆ ಮ್ಯಾಗ್ನಸ್ ಕಾರ್ಲ್‌ಸೆನ್ ಚೀನಾದ ವಾಂಗ್ ಹ್ಯಾಡ್ ಅವರೊಂದಿಗೆ ಡ್ರಾಗೆ ತೃಪ್ತಿಪಡಬೇಕಾಯಿತು. ಕ್ಲಾಸಿಕಲ್‌ಗೆ ಮೊದಲು ನಡೆದ ಬ್ಲಿಟ್ಜ್ ಸ್ಪರ್ಧೆಯಲ್ಲಿ, ಏಳನೇ ಸುತ್ತಿನಲ್ಲಿ ಆನಂದ್ ಕಾರ್ಲ್‌ಸೆನ್ ಅವರನ್ನು ಸೋಲಿಸಿ ಆಘಾತ ನೀಡಿದರು.