ಕರ್ನಾಟಕ

karnataka

ETV Bharat / sports

ಕೊನೆ ಘಳಿಗೆಯಲ್ಲಿ ಪಂದ್ಯ ರದ್ದು.. ಆಕ್ರೋಶ ವ್ಯಕ್ತಪಡಿಸಿದ ಆರ್ಸೆನಲ್​ ಬಾಸ್​ ಆರ್ಟೆಟಾ!

ಎರಡು ಡ್ರಾ, ಸತತ ಮೂರು ಸೋಲು ಕಂಡಿರುವ ವೆಸ್ಟ್​ ಬ್ರೋಮ್​ ತಂಡದೊಂದಿಗೆ ಫುಟ್ಬಾಲ್​​ ಆಟ ರದ್ದಾದ ಬಳಿಕ ಬೇಸರಗೊಂಡಿರುವ ಆರ್ಸೆನಲ್​ ತಂಡದ ಪ್ರಧಾನ ವ್ಯವಸ್ಥಾಪಕ ಮೈಕೆಲ್​ ಆರ್ಟೆಟಾ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

By

Published : Jan 2, 2021, 10:36 AM IST

ಆಕ್ರೋಶ ವ್ಯಕ್ತಪಡಿಸಿದ ಆರ್ಸೆನಲ್​ ಬಾಸ್​ ಆರ್ಟೆಟಾ
ಸಂಗ್ರಹ

ಲಂಡನ್ ಕೊಲ್ನಿ:ಪುಟ್ಬಾಲ್​ ಪಂದ್ಯ ರದ್ದಾದ ಬಳಿಕ ಆರ್ಸೆನಲ್ ಬಾಸ್ ಮೈಕೆಲ್ ಆರ್ಟೆಟಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗ ನಮಗೆ ಮತ್ತೊಂದು ಪ್ರೋಟೋಕಾಲ್ ಬೇಕು. ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ನಮಗೆ ಸ್ಪಷ್ಟವಾದ ಮಾರ್ಗಸೂಚಿಗಳು ಬೇಕಾಗುತ್ತವೆ. ಏಕೆಂದರೆ ನಾವು ಫುಟ್ಬಾಲ್​ ಪಂದ್ಯವನ್ನು ಆಡುತ್ತಿದ್ದೇವೆಯೇ ಅಥವಾ ಇಲ್ಲವೇ ಎಂಬುವುದು ಕೊನೆಯ ಎರಡು ಗಂಟೆಯಲ್ಲಿ ತಿಳಿಸುವುದು ಸೂಕ್ತವಲ್ಲ. ನಾವು ಅಲ್ಲಿ ಕಾಯಲು ಸಾಧ್ಯವಿಲ್ಲ. ಸ್ವಲ್ಪ ಮುಂಚಿತವಾಗಿ ತಿಳಿದುಕೊಳ್ಳುವುದು ಸೂಕ್ತ. ಪ್ರೀಮಿಯರ್ ಲೀಗ್‌ನಲ್ಲಿ ಭಾಗಿಯಾಗಿರುವ ಎರಡು ತಂಡಗಳು ಆ ಕ್ಷಣದಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆರ್ಟೆಟಾ ಹೇಳಿದರು.

ಆಕ್ರೋಶ ವ್ಯಕ್ತಪಡಿಸಿದ ಆರ್ಸೆನಲ್​ ಬಾಸ್​ ಆರ್ಟೆಟಾ

ಫುಲ್ಹ್ಯಾಮ್ ವಿರುದ್ಧದ ಟೊಟೆನ್ಹ್ಯಾಮ್ ಪಂದ್ಯವನ್ನು ಕೋವಿಡ್​ ಕಾರಣದಿಂದಾಗಿ ಪಂದ್ಯ ಆರಂಭಕ್ಕೂ ಮೂರು ಗಂಟೆಗಳ ಮುಂಚಿತವಾಗಿ ರದ್ದು ಗೊಳಿಸಿದ ಬಳಿಕ ಆರ್ಟೆಟಾ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಆರ್ಟೆಟಾರಿಗೆ ಕೋವಿಡ್​ ಪ್ರೋಟೊಕಾಲ್​ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ ಈ ಮೇಲಿನ ಹೊಸ ಪ್ರೋಟೋಕಾಲ್​ಗಳು ಪರಿಚಯಸಬೇಕೆಂದು ಹೇಳಿದರು.

ಇನ್ನು ಕಳೆದ ಸೀಸನ್​ನಲ್ಲಿ ಹಾಥಾರ್ನ್ಸ್​ನಲ್ಲಿ ನಡೆದ ಆರ್ಸೆನಲ್​ ಮತ್ತು ವೆಸ್ಟ್​ ಬ್ರೋಮ್​ ಪಂದ್ಯ 1-1 ಸಮದಿಂದ ಅಂತ್ಯಗೊಂಡಿತ್ತು. ಕೊವೀಡ್​ ಕಾರಣದಿಂದಾಗಿ ಇದು ರದ್ದಾದ ಮೂರನೇ ಪ್ರೀಮಿಯರ್​ ಲೀಗ್​ ಪಂದ್ಯವಾಗಿದೆ. ಎರಡು ಡ್ರಾ ಮತ್ತು ಸತತ ಮೂರು ಪಂದ್ಯಗಳು ಸೋಲನ್ನಪ್ಪಿರುವ ವೆಸ್ಟ್ ಬ್ರೋಮ್​ ತಂಡದ ವಿರುದ್ಧ ಆರ್ಸೆನಲ್​ ತಂಡ ಎದುರಲಿಸಿದೆ. ಪಂದ್ಯ ಆರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕೋವಿಡ್​ ಪ್ರೋಟೋಕಾಲ್​ಗಳ ಬಗ್ಗೆ ಅವರು ಮಾತನಾಡಿದರು.

ABOUT THE AUTHOR

...view details