ಅರ್ಜೆಂಟೀನಾ:ಬಾರ್ಸಿಲೋನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಲಾ ಲೀಗಾ ಫುಟ್ಬಾಲ್ ಲೀಗ್ನಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಲಾ ಲೀಗಾ ಫುಟ್ಬಾಲ್ ಲೀಗ್ನಲ್ಲಿ ಬಾರ್ಸಿಲೋನಾದ ವಿಲ್ಲಾರೆಲ್ ಫುಟ್ಬಾಲ್ ಕ್ಲಬ್, ಬಾರ್ಕಾ ಫುಟ್ಬಾಲ್ ಕ್ಲಬ್ ವಿರುದ್ಧ ಆಡುವ ವೇಳೆ ಅತಿ ಹೆಚ್ಚು ಗೋಲ್ಗಳಿಗೆ ಸಹಕರಿಸಿದ (ಬೆಸ್ಟ್ ಎವರ್ ಅಸಿಸ್ಟ್) ದಾಖಲೆಗೆ ಪಾತ್ರರಾಗಿದ್ದಾರೆ
ಈ ಪಂದ್ಯದಲ್ಲಿ ಬಾರ್ಸಿಲೋನಾದ ಪರವಾಗಿ ಮೆಸ್ಸಿ ಆಂಟೋಯಿನ್ ಗ್ರಿಜ್ಮನ್ನ ಮೂರನೇ ಗೋಲ್ಗೆ ಸಹಕರಿಸುವ ಮೂಲಕ ಈ ದಾಖಲೆ ಸೃಷ್ಟಿ ಮಾಡಿದರು. ಈ ಮೂಲಕ ಗೋಲ್ ಬಾರಿಸಲು ಲಾ ಲೀಗಾ ಫುಟ್ಬಾಲ್ ಲೀಗ್ನಲ್ಲಿ 19ನೇ ಬಾರಿಗೆ ಮೆಸ್ಸಿ ಸಹಕಾರ ನೀಡಿದ್ದರು.