ಜೆಮ್ಶೆಡ್ಪುರ (ಜಾರ್ಖಂಡ್):ಎಎಫ್ಸಿ ಚಾಂಪಿಯನ್ಸ್ ಲೀಗ್ನ ಲೀಗ್ ಹಂತಗಳಿಗೆ ಅರ್ಹತೆ ಪಡೆಯುವ ಮೂಲಕ ಎಫ್ಸಿ ಗೋವಾ ಇತಿಹಾಸ ಬರೆದಿದೆ.
ಏಷ್ಯಾದ ಅಗ್ರ ಕ್ಲಬ್ ಸ್ಪರ್ಧೆಯೆಂದು ಪರಿಗಣಿಸಲ್ಪಟ್ಟಿರುವ ಎಎಫ್ಸಿ ಚಾಂಪಿಯನ್ಸ್ ಲೀಗ್ನಲ್ಲಿ ಈಗ ಇಂಡಿಯನ್ ಸೂಪರ್ ಲೀಗ್ನಲ್ಲಿ ಮಿಂಚಿದ ಎಫ್ಸಿ ಗೋವಾ ಭಾರತದಿಂದ ಪ್ರತಿನಿಧಿಸುವ ಏಕೈಕ ತಂಡವಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಎಫ್ಸಿ ಗೋವಾ ತಂಡವು ಜೆಮ್ಶೆಡ್ಪುರ ಎಫ್ಸಿಯನ್ನು 5-0 ಅಂತರದಿಂದ ಮಣಿಸಿ ಈ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.
ಈ ಬಗ್ಗೆ ಐಎಸ್ಎಲ್ ತನ್ನ ಅಧಿಕೃತ ಟ್ವಿಟ್ಟರ್ಖಾತೆಯಲ್ಲಿ ಪೋಸ್ಟ್ ಹಾಕಿದ್ದು, ಎಫ್ಸಿ ಗೋವಾದ ಸಾಧನೆಯನ್ನು ಟ್ವೀಟ್ ಮಾಡಿ ಹೊಗಳಿದೆ.
ಇತ್ತೀಚೆಗೆ, ಐಎಸ್ಎಲ್ ಅನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ದೇಶದ ಉನ್ನತ ಶ್ರೇಣಿಯ ಲೀಗ್ ಎಂದು ಗುರುತಿಸಿದೆ. ಈಗ ಇದರ ಪರಿಣಾಮವಾಗಿ, ಐಎಸ್ಎಲ್ನ ಉನ್ನತ ತಂಡವೊಂದು ಎಎಫ್ಸಿ ಚಾಂಪಿಯನ್ಸ್ ಲೀಗ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದೆ.
ಎಎಫ್ಸಿ ಚಾಂಪಿಯನ್ಸ್ ಲೀಗ್:
ಏಷ್ಯನ್ ಚಾಂಪಿಯನ್ಸ್ ಲೀಗ್ ಎಂದು ಕರೆಯಲ್ಪಡುವ ಎಎಫ್ಸಿ ಚಾಂಪಿಯನ್ಸ್ ಲೀಗ್, ಏಷ್ಯನ್ ಫುಟ್ಬಾಲ್ ಒಕ್ಕೂಟವು ಆಯೋಜಿಸುವ ವಾರ್ಷಿಕ ಕಾಂಟಿನೆಂಟಲ್ ಕ್ಲಬ್ ಫುಟ್ಬಾಲ್ ಸ್ಪರ್ಧೆ. ಈ ಟೂರ್ನಮೆಂಟ್ 2002 ರಲ್ಲಿ ಆರಂಭಗೊಂಡಿತು. ಸದ್ಯ ಇದಕ್ಕೆ ಭಾರತದ ಗೋವಾ ಎಫ್ಸಿ ತಂಡ ಅರ್ಹತೆ ಪಡೆದಿದ್ದು, ಇಲ್ಲಿಯೂ ಅರ್ಹತೆಯೊಂದಿಗೆ ಗೆದ್ದ ತಂಡ ಫೀಫಾ ವಿಶ್ವಕಪ್ಗೆ ಅರ್ಹತೆ ಪಡೆದುಕೊಳ್ಳುತ್ತದೆ.