ಕರ್ನಾಟಕ

karnataka

By

Published : Jun 24, 2021, 7:57 AM IST

ETV Bharat / sports

ಅತಿ ಹೆಚ್ಚು ಗೋಲ್​ ಗಳಿಸಿದವರಲ್ಲಿ ಮೊದಲ ಸ್ಥಾನ ಹಂಚಿಕೊಂಡ ರೊನಾಲ್ಡೋ

ಇನ್ನೊಂದು ಗೋಲ್ ಕ್ರಿಶ್ಚಿಯಾನೋ ರೊನಾಲ್ಡೋ ಅವರನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ವ್ಯಕ್ತಿಯಾಗಿ ರೂಪಿಸಲಿದ್ದು, ಯೂರೋ-2020ಯಲ್ಲಿಯೇ ಅದು ನೆರವೇರಲು ರೊನಾಲ್ಡೋ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Cristiano Ronaldo Equals Ali Daei's Record For Most International Goals In Men's Football
ಅತಿ ಹೆಚ್ಚು ಗೋಲ್​ ಗಳಿಸಿದವರಲ್ಲಿ ಮೊದಲ ಸ್ಥಾನ ಹಂಚಿಕೊಂಡ ಕ್ರಿಶ್ಚಿಯಾನೋ ರೊನಾಲ್ಡೋ

ಬುಡಾಪೆಸ್ಟ್​​(ಹಂಗೇರಿ):ಪೋರ್ಚುಗಲ್ ಫುಟ್​ಬಾಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಮತ್ತೊಂದು ದಾಖಲೆ ಬರೆದಿದ್ದಾರೆ. ಯೂರೋ-2020 ಟೂರ್ನಮೆಂಟ್​ನಲ್ಲಿ ಗುರುವಾರ ಫ್ರಾನ್ಸ್​ ವಿರುದ್ಧ ಆಟವಾಡಿದ ರೊನಾಲ್ಡ್​ ತಮ್ಮ 109ನೇ ಗೋಲ್ ದಾಖಲಿಸಿದರು.

ಈ ಗೋಲ್ ಮೂಲಕ ಅಂತಾರಾಷ್ಟ್ರೀಯ ಪುರುಷರ ಫುಟ್​ಬಾಲ್ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲ್ ದಾಖಲಿಸಿದ ಇರಾನ್​ನ ಸ್ಟ್ರೈಕರ್ ಅಲಿ ಡೈಯಿ ಅವರ ಗೋಲುಗಳಿಗೆ ಸಮನಾಗಿದ್ದಾರೆ. ಈ ಮೂಲಕ ಹೆಚ್ಚು ಗೋಲು ದಾಖಲಿಸಿದವರಲ್ಲಿ ಮೊದಲ ಸ್ಥಾನವನ್ನು ಅಲಿ ಡೈಯಿ ಅವರೊಂದಿಗೆ ಹಂಚಿಕೊಂಡಿದ್ದಾರೆ.

ಯೂರೋಪಿಯನ್ ಚಾಂಪಿಯನ್​ಶಿಪ್ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಆಟಗಾರನಾಗಿರುವ ಕ್ರಿಶ್ಚಿಯಾನೋ ರೊನಾಲ್ಡೋ ಬುಡಾಪೆಸ್ಟ್​ನಲ್ಲಿ ನಡೆದ ಪಂದ್ಯದಲ್ಲಿ ಎರಡನೇ ಪೆನಾಲ್ಟಿಯನ್ನು ಗೋಲ್ ಆಗಿ ಪರಿವರ್ತನೆ ಮಾಡಿಕೊಳ್ಳುವಲ್ಲಿ ಸಫಲರಾದರು.

ಇದನ್ನೂ ಓದಿ:WTC 21 Final: ಭಾರತದ ಬೌಲಿಂಗ್‌ ಸಂಯೋಜನೆ ಸಮರ್ಥಿಸಿಕೊಂಡ ವಿರಾಟ್ ಕೊಹ್ಲಿ

ತಾವು ಗಳಿಸಿದ 109ನೇ ಗೋಲ್ ತಮ್ಮ 178ನೇ ಪಂದ್ಯದ್ದು ಆಗಿದ್ದು, ಇನ್ನೊಂದು ಗೋಲ್ ಅವರನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ವ್ಯಕ್ತಿಯಾಗಿ ರೂಪಿಸಲಿದ್ದು, ಯೂರೋ-2020ಯಲ್ಲಿಯೇ ಅದು ನೆರವೇರಲು ರೊನಾಲ್ಡೋ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಅಲಿ ಡೈಯಿ ಕೇವಲ 149 ಪಂದ್ಯಗಳಲ್ಲಿ 10 ಗೋಲ್​ಗಳನ್ನು ದಾಖಲಿಸಿದ್ದು, 1993 ಮತ್ತು 2006ರ ನಡುವೆ ಇರಾನ್​ಗಾಗಿ ಆಡಿದ್ದರು. ಕ್ಲಬ್​ಗಳು ಮತ್ತು ಎಲ್ಲಾ ಪಂದ್ಯಗಳಲ್ಲಿನ ತಾವು ಪಡೆದ ಗೋಲುಗಳನ್ನು ಒಟ್ಟುಗೂಡಿಸಿದರೆ ಕ್ರಿಶ್ಚಿಯಾನೋ ರೊನಾಲ್ಡೋ ಅವರ ಗೋಲುಗಳ ಸಂಖ್ಯೆ 755 ಆಗಲಿದೆ.

ABOUT THE AUTHOR

...view details