ಕರ್ನಾಟಕ

karnataka

ETV Bharat / sports

ಈ ವಾರದಲ್ಲಿ ಲಾ ಲಿಗಾ ​ಫುಟ್​ಬಾಲ್​ ಲೀಗ್​ ಕ್ಲಬ್​ಗಳಿಂದ ತರಬೇತಿ ಆರಂಭ

ಕಳೆದ ಮಾರ್ಚ್​ನಿಂದ ಕೋವಿಡ್​ 19 ಭೀತಿಯಿಂದ ಹೇರಲಾಗಿದ್ದ ಲಾಕ್​ಡೌನ್​ಅನ್ನು ಸಡಿಲಗೊಳಿಸಿದ್ದು, ಸ್ಪೇನ್​ನಲ್ಲಿ ಕ್ರೀಡಾ ತರಬೇತಿ ಆರಂಭವಾಗಿದೆ.

By

Published : May 5, 2020, 1:05 PM IST

ಲಾ ಲೀಗಾ ​ಫುಟ್​ಬಾಲ್​ ಲೀಗ್
ಲಾ ಲೀಗಾ ​ಫುಟ್​ಬಾಲ್​ ಲೀಗ್ಲಾ ಲೀಗಾ ​ಫುಟ್​ಬಾಲ್​ ಲೀಗ್

ಮ್ಯಾಡ್ರಿಡ್​:ಸ್ಪೇನ್​ ಆರೋಗ್ಯ ಸಚಿವಾಲಯ ಕ್ರೀಡಾ ತರಬೇತಿಗೆ ಅನುಮತಿ ನೀಡಿರುವ ಹಿನ್ನೆಲೆ ಪ್ರಸಿದ್ಧ ಫುಟ್​ಬಾಲ್​ ಲೀಗ್​ ಆದ ಲಾ ಲೀಗಾ ಕ್ಲಬ್​ಗಳು ಈ ವಾರದಲ್ಲಿ ತರಬೇತಿಗೆ ಮರಳಲು ಸಜ್ಜಾಗಿವೆ.

ಕಳೆದ ಮಾರ್ಚ್​ನ ಮಧ್ಯಂತರದಲ್ಲಿ ಕೋವಿಡ್​ 19 ಭೀತಿಯಿಂದ ಏರಿದ್ದ ಲಾಕ್​ಡೌನ್ ​ಅನ್ನು ಸ್ಪೇನ್​ ಸರ್ಕಾರ ಸಡಿಲಗೊಳಿಸಿದ್ದರಿಂದ ಕ್ರೀಡಾ ತರಬೇತಿಗೆ ಅನುವು ಮಾಡಿಕೊಟ್ಟಿದೆ.

ಸ್ಪೇನ್‌ನ ವೃತ್ತಿಪರ ಫುಟ್‌ಬಾಲ್‌ನ ಮೊದಲ ಮತ್ತು ಎರಡನೆಯ ವಿಭಾಗಗಳಾದ ಲಾ ಲಿಗಾ ಸ್ಯಾಂಟ್ಯಾಂಡರ್ ಮತ್ತು ಲಾ ಲಿಗಾ ಸ್ಮಾರ್ಟ್‌ಬ್ಯಾಂಕ್‌ನ ವೃತ್ತಿಪರ ಆಟಗಾರರು ಕ್ಲಬ್ ವೈದ್ಯಕೀಯ ಸಿಬ್ಬಂದಿ ನಡೆಸುವ ಪರೀಕ್ಷೆಯ ನಂತರವಷ್ಟೆ ತರಬೇತಿ ಪ್ರಾರಂಭಿಸಲಿದ್ದಾರೆ.

ಲಾ ಲೀಗಾ ​ಫುಟ್​ಬಾಲ್​ ಲೀಗ್

ತರಬೇರಿಗೆ ಮರಳುವಿಕೆಯ ಯೋಜನೆಯನ್ನು ಲಾ ಲಿಗಾ ಮಾಡಿದೆ. ಆದರೆ ಇದರ ಜೊತೆಗೆ ಭಾಗಿಯಾಗುವವವರು ಎಲ್ಲರ ಆರೋಗ್ಯಕ್ಕೆ ಸಾಧ್ಯವಾದಷ್ಟು ಸುರಕ್ಷತೆಯನ್ನು ಕಾಪಾಡಿಕೊಳ್ಳಿತ್ತೇವೆಂದು ಸಂಬಂಧಪಟ್ಟ ಕ್ರೀಡಾ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಲಾ ಲಿಗಾ ಒಪ್ಪಿಗೆ ಪಡೆದಿದೆ.

ಈ ಕೋವಿಡ್​ 19 ಬಿಕ್ಕಟ್ಟು ನಮ್ಮೆಲ್ಲರ ಮೇಲೆ ತೀವ್ರ ಪರಿಣಾಮ ಬೀರಿದೆ. ಫುಟ್ಬಾಲ್​ನ ಮರಳುವಿಕೆ ಸಮಾಜವು ಸಹಜ ಸ್ಥಿತಿಗೆ ಬರುತ್ತಿದೆ ಎಂಬುದರ ಸಂಕೇತವಾಗಿದೆ. ಇದು ಸ್ಪೇನ್ ಮತ್ತು ಪ್ರಪಂಚದಾದ್ಯಂತ ಆರಾಧಿಸುವ ಮತ್ತು ಪ್ರೀತಿಸುವ ಒಂದು ಅಂಶವನ್ನು ಮರಳಿ ತರುತ್ತಿದೆ ಎಂದು ಲಾ ಲೀಗಾದ ಅಧ್ಯಕ್ಷ ಜೇವಿಯರ್​ ತೆಬಾಸ್​ ಹೇಳಿದ್ದಾರೆ.

ನಮಗೆ ಜನರ ಆರೋಗ್ಯವೇ ಅತ್ಯುನ್ನತವಾದುದು. ಆದ್ದರಿಂದ ನಾವೂ ಲಾ ಲೀಗಾವನ್ನು ಆರಂಭಿಸುವಾಗಲೆ ಪ್ರತಿಯೊಬ್ಬರ ಆರೋಗ್ಯವನ್ನು ಕಾಪಾಡಲು ಸಮಗ್ರವಾದ ಪ್ರೋಟೋಕಾಲ್​ಗಳನ್ನು ಹೊಂದಿದ್ದೇವೆ. ಪರಿಸ್ಥಿರಿ ಅನಿರೀಕ್ಷಿತವಾಗಿದೆ. ಆದರೆ ಜೂನ್​ನಲ್ಲಿ ಮತ್ತೆ ಆಟವನ್ನು ಪ್ರಾರಂಭಿಸುತ್ತೇವೆ. ಈ ಬೇಸಿಗೆಯಲ್ಲಿ 19/20 ಆವೃತ್ತಿಯ ಲಾ ಲಿಗಾವನ್ನು ಮುಗಿಸುತ್ತೇವೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ತಿಲಿಸಿದ್ದಾರೆ.

ABOUT THE AUTHOR

...view details