ಲಿಸ್ಬನ್:ಜೋಸ್ ಅಲ್ವಾಲೇಡ್ ಕ್ರೀಡಾಂಗಣದಲ್ಲಿ ನಡೆದ ಬುಂಡೆಸ್ಲಿಗಾ ಫುಟ್ಬಾಲ್ ಚಾಂಪಿಯನ್ನ ಎರಡನೇ ಸೆಮಿಫೈನಲ್ನಲ್ಲಿ ಬೇಯರ್ನ್ ಮ್ಯೂನಿಚ್ ತಂಡ ಲಿಯಾನ್ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಚಾಂಪಿಯನ್ಸ್ ಲೀಗ್ನಲ್ಲಿ ಫೈನಲ್ ಪ್ರವೆಶಿಸಿದೆ.
ಈ ಫಲಿತಾಂಶದೊಂದಿಗೆ, ಆಗಸ್ಟ್ 23 ರ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬೇಯರ್ನ್ ಮ್ಯೂನಿಚ್ ತಂಡವು ಪ್ಯಾರಿಸ್ ಸೇಂಟ್ - ಜರ್ಮೈನ್ ಅವರನ್ನು ಎದುರಿಸಲಿದೆ.
ಪಂದ್ಯ ಆರಂಭವಾದ 18ನೇ ನಿಮಿಷದಲ್ಲಿ ಮೊದಲ ಗೋಲನ್ನು ಸೆರ್ಜ್ ಗ್ನಾಬ್ರಿ ಗಳಿಸಿದರು. ಇದರ ಪರಿಣಾಮವಾಗಿ ಬೇಯರ್ನ್ ಮ್ಯೂನಿಚ್ ಮುನ್ನಡೆ ಸಾಧಿಸಿತು. ಗ್ನಾಬ್ರಿ 33ನೇ ನಿಮಿಷದಲ್ಲಿ ಬೇಯರ್ನ್ ಪರ ಮತ್ತೊಂದು ಗೋಲು ಗಳಿಸಿದರು. ಮೊದಲಾರ್ಧದಲ್ಲಿ ತಂಡಕ್ಕೆ 2-0 ಮುನ್ನಡೆ ನೀಡಿದರು. ದ್ವಿತೀಯಾರ್ಧದಲ್ಲಿ, ಬೇಯರ್ನ್ ತಂಡ ಎದುರಾಳಿಗಳ ಮೇಲಿನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದರು. ಸ್ಥಿರವಾದ ಆಕ್ರಮಣಕಾರಿ ಆಟದಿಂದ ಲಿಯಾನ್ ತಂಡಕ್ಕೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ.
ರಾಬರ್ಟ್ ಲೆವಾಂಡೋವ್ಸ್ಕಿ ಅವರು 88 ನೇ ನಿಮಿಷದಲ್ಲಿ ಗೋಲು ಗಳಿಸಿ ಬೇಯರ್ನ್ ಮ್ಯೂನಿಚ್ಗೆ ಪಂದ್ಯದಲ್ಲಿ 3-0 ಅಂತರದ ಜಯ ತಂದುಕೊಟ್ಟರು.