ಪ್ಯಾರೀಸ್(ಫ್ರಾನ್ಸ್) :ಚಾಂಪಿಯನ್ ಲೀಗ್ ಸೆಮಿಫೈನಲ್ನಲ್ಲಿ ಫ್ರಾನ್ಸ್ ಫುಟ್ಬಾಲ್ ಕ್ಲಬ್ ಪ್ಯಾರೀಸ್ ಸೇಂಟ್ ಜರ್ಮನ್ ಸೆಮಿಫೈನಲ್ನಲ್ಲಿ ವಿಜಯ ಸಾಧಿಸಿತ್ತು. ಈ ವೇಳೆ, ಪ್ಯಾರೀಸ್ನಲ್ಲಿ ಸಂಭ್ರಮಾಚರಣೆ ನಡೆಸುವ ವೇಳೆ ಹಿಂಸಾಚಾರಕ್ಕೆ ತಿರುಗಿದ್ದರಿಂದ 36 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಾಂಪಿಯನ್ಸ್ ಲೀಗ್ನಲ್ಲಿ ಪ್ಯಾರೀಸ್ ಸೇಂಟ್ ಜರ್ಮನ್ ತಂಡದ 3-0 ಗೋಲುಗಳಿಂದ ಲಿಪ್ಜಿಗ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಈ ಐತಿಹಾಸಿಕ ಜಯದ ಸಂಭ್ರಮವನ್ನು ಪ್ಯಾರೀಸ್ ಆರ್ಕ್ ಡಿ ಟ್ರಯೋಂಪ್ನ ಬುಡದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಮಿತಿ ಮೀರಿದ ಸಂಭ್ರಮಾಚರಣೆ ಮಾಡಿದ್ದರು. ಈ ವೇಳೆ, ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದ್ದರಿಂದ ಪೊಲೀಸರು 36 ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.