ಸೌತಾಂಪ್ಟನ್:ಭಾರತ-ನ್ಯೂಜಿಲ್ಯಾಂಡ್ ತಂಡಗಳ ನಡುವೆ ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆರಂಭಗೊಂಡಿದೆ. ಟಾಸ್ ಸೋತಿರುವ ಟೀಂ ಇಂಡಿಯಾ ಬ್ಯಾಟಿಂಗ್ ನಡೆಸುತ್ತಿದ್ದು, ಚಹಾ ವಿರಾಮದ ವೇಳೆಗೆ ಕೊಹ್ಲಿ ಪಡೆ 3ವಿಕೆಟ್ನಷ್ಟಕ್ಕೆ 146ರನ್ಗಳಿಕೆ ಮಾಡಿದೆ. ಹೀಗಾಗಿ ಕೊಹ್ಲಿ ಪಡೆ ಎದುರಾಳಿ ಬೌಲಿಂಗ್ ದಾಳಿಗೆ ತತ್ತರಿಸಿ ಆರಂಭಿಕ ಆಘಾತಕ್ಕೊಳಗಾಗಿದೆ.
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ(34ರನ್) ಹಾಗೂ ಶುಬ್ಮನ್ ಗಿಲ್(28ರನ್) ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮೊದಲ ವಿಕೆಟ್ನಷ್ಟವಿಲ್ಲದೇ 62ರನ್ಗಳಿಕೆ ಮಾಡಿದರು. ಆದರೆ, ಇದರ ಬೆನ್ನಲ್ಲೇ ಇಬ್ಬರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಸಂಕಷ್ಟಕ್ಕೊಳಗಾಯಿತು. ಈ ವೇಳೆ, ಒಂದಾದ ಚೇತೇಶ್ವರ ಪೂಜಾರಾ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ಮತ್ತೊಮ್ಮೆ ಚೇತರಿಕೆ ನೀಡುವ ಕೆಲಸ ಮಾಡಿದ್ರು. 54 ಎಸೆತ ಎದುರಿಸಿ 8ರನ್ಗಳಿಕೆ ಮಾಡಿದ್ದ ಪೂಜಾರಾ ಕೂಡ ಎಲ್ಬಿ ಬಲೆಗೆ ಬಿದ್ದರು. ಸದ್ಯ 44ರನ್ಗಳಿಕೆ ಮಾಡಿರುವ ಕೊಹ್ಲಿ ಹಾಗೂ 29ರನ್ಗಳಿಸಿರುವ ರಹಾನೆ ಮೈದಾನದಲ್ಲಿದ್ದಾರೆ.
ಇದನ್ನೂ ಓದಿರಿ: 'ಫ್ಲೈಯಿಂಗ್ ಸಿಖ್' ಮಿಲ್ಖಾ ಸಿಂಗ್ ನಿಧನ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ