ಸೌತಾಂಪ್ಟನ್ :ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಲಾಲಾರಸವನ್ನು ಬಳಸದೇ ಚೆಂಡನ್ನು ಸ್ವಿಂಗ್ ಮಾಡಬಹುದು ಎಂದು ಟೀಂ ಇಂಡಿಯಾ ಅನುಭವಿ ವೇಗಿ ಇಶಾಂತ್ ಶರ್ಮಾ ಹೇಳಿದ್ದಾರೆ. ಕೋವಿಡ್-19 ಬಿಕ್ಕಟ್ಟಿನ ಕಾರಣದಿಂದ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಲಾಲಾರಸವನ್ನು ಚೆಂಡಿಗೆ ಹಚ್ಚುವುದನ್ನು ನಿಷೇಧಿಸಿತ್ತು.
ಆದರೆ, ಇದರಿಂದ ಚೆಂಡು ಸ್ವಿಂಗ್ ಮಾಡುವುದಕ್ಕಾಗುವುದಿಲ್ಲ ಎಂದು ಕೆಲವರು ವಾದಿಸಿದ್ದರು. ಇದರಿಂದ ಬೌಲರ್ಗಳಿಗೆ ತೊಂದರೆಯಾಗುತ್ತದೆ ಎಂಬ ಅಭಿಪ್ರಾಯವ್ಯಕ್ತವಾಗಿತ್ತು. ಆದರೆ, ಭಾರತದ ವೇಗಿ ಇಶಾಂತ್ ಚೆಂಡನ್ನು ಸ್ವಿಂಗ್ ಮಾಡಲು ಲಾಲಾರಸದ ಅವಶ್ಯಕತೆಯಿಲ್ಲ ಎಂದಿದ್ದಾರೆ. ಸ್ವಿಂಗ್ ಮಾಡುವುದು ಕಷ್ಟ ಎಂದು ನಾನು ಭಾವಿಸುವುದಿಲ್ಲ, ಲಾಲಾರಸವಿಲ್ಲದೆ ಚೆಂಡು ಸ್ವಿಂಗ್ ಆಗುತ್ತದೆ ಎಂದು ನಾನು ಭಾವಿಸುತ್ತೇನೆ.