ಮುಂಬೈ: ವಿರಾಟ್ ಕೊಹ್ಲಿ-ರಾಹುಲ್ ದ್ರಾವಿಡ್ ಸಂಯೋಜನೆಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಭಾರತ ತಂಡ ಶುಭಾರಂಭ ಮಾಡಿದೆ. ಹೊಸ ಕೋಚ್ಗಳ ಅಡಿಯಲ್ಲೂ ನಮ್ಮ ಮನಸ್ಥಿತಿ ಮತ್ತು ಉದ್ದೇಶ ಹಿಂದಿನಂತೆಯೇ ಉಳಿಯಲಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಹೇಳಿದ್ದಾರೆ.
ರವಿಶಾಸ್ತ್ರಿ ಕೋಚ್ ಅವಧಿ ಮುಗಿಯುತ್ತಿದ್ದಂತೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೇರಿದರು. ಪರಾಸ್ ಮಾಂಬ್ರೆ ಮತ್ತು ಟಿ ದಿಲೀಪ್ ಕ್ರಮವಾಗಿ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಭರತ್ ಅರುಣ್ ಮತ್ತು ಆರ್ ಶ್ರೀಧರ್ ಸ್ಥಾನವನ್ನ ಅಲಂಕರಿಸಿದ್ದಾರೆ.
ಹೊಸ ಮ್ಯಾನೇಜ್ಮೆಂಟ್ ಬಂದ ಬಳಿಕವೂ ನಾವು ಹಿಂದಿನ ಮನಸ್ಥಿತಿ ಮತ್ತು ಉದ್ದೇಶದೊಂದಿಗೆ ಮುಂದುವರಿಯಲಿದ್ದೇವೆ. ಭಾರತೀಯ ಕ್ರಿಕೆಟ್ನ ಗುಣಮಟ್ಟವನ್ನು ಕಾಪಾಡಿಕೊಳ್ಳುವುದಕ್ಕೆ ಇದು ಮಹತ್ವದಾಗಿದೆ ಮತ್ತು ಇದನ್ನು ಅನುಸರಿಸುವುದರಿಂದ ಭಾರತ ಕ್ರಿಕೆಟ್ ಬೆಳವಣಿಗೆ ಮುಂದುವರಿಯಲಿದೆ ಎಂದು ಕಿವೀಸ್ ವಿರುದ್ಧ 372 ರನ್ಗಳ ಜಯ ಸಾಧಿಸಿದ ನಂತರ ಕೊಹ್ಲಿ ಹೇಳಿದ್ದಾರೆ.