ಕರ್ನಾಟಕ

karnataka

ETV Bharat / sports

ಕಿವೀಸ್​ ಉದಯೋನ್ಮುಖ ಕ್ರಿಕೆಟಿಗನ​ ಬ್ಯಾಟ್​ ಮೇಲೆ ವಿರಾಟ್​ ಕೊಹ್ಲಿ ಹೆಸರು! - New Zealand opener

ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಫಿನ್ ಅಲೆನ್​ ತಮ್ಮ ಬ್ಯಾಟಿನ ತಳಭಾಗದಲ್ಲಿ ವಿರಾಟ್​ ಕೊಹ್ಲಿ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಇಂಟರ್​ನೆಟ್​ನಲ್ಲಿ ಭಾರಿ ಸದ್ದು ಮಾಡುತ್ತಿದೆ

Finn Allen use bat with Virat Kohli name
ಫಿನ್ ಅಲೆನ್ ವಿರಾಟ್​ ಕೊಹ್ಲಿ

By

Published : Jul 24, 2021, 7:58 PM IST

ಲಂಡನ್: ನ್ಯೂಜಿಲ್ಯಾಂಡ್​ ಕ್ರಿಕೆಟ್​ ತಂಡದ ಯುವ ಆಟಗಾರ ಫಿನ್ ಅಲೆನ್​ ಪ್ರಸ್ತುತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಹೊಸ ಮಾದರಿಯ ಕ್ರಿಕೆಟ್​ ದಿ ಹಂಡ್ರೆಡ್​ನಲ್ಲಿ ಆಡುತ್ತಿದ್ದಾರೆ. ನಿನ್ನೆ ಬರ್ಮಿಂಗ್​ಹ್ಯಾಮ್ ತಂಡದಲ್ಲಿ ಆಡಿದ್ದ ಅವರು, ಪಂದ್ಯಕ್ಕೂ ಮುನ್ನ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡ ಫೋಟೋ ಭಾರಿ ಕುತೂಹಲ ಕೆರಳಿಸಿದೆ.

ಹೌದು, ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಫಿನ್ ಅಲೆನ್​ ತಮ್ಮ ಬ್ಯಾಟಿನ ತಳಭಾಗದಲ್ಲಿ ವಿರಾಟ್​ ಕೊಹ್ಲಿ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಇಂಟರ್​ನೆಟ್​ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಆದರೆ, ಇದು ಕೊಹ್ಲಿ ಉಡುಗೊರೆಯಾಗಿ ಅಲೆನ್​ಗೆ ನೀಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು ಈತ ಕೊಹ್ಲಿಯ ಅಭಿಮಾನಿ ಆಗಿರಬಹುದು ಎಂದು ಎಂದು ಟ್ವಿಟರ್​ನಲ್ಲಿ ಬರೆದುಕೊಳ್ಳುತ್ತಿದ್ದಾರೆ.

ಇದನ್ನು ಓದಿ: ಬದಲೀ ಆಟಗಾರರಾಗಿ ಇಂಗ್ಲೆಂಡ್​ಗೆ ಪ್ರವಾಸ ಬೆಳೆಸಲಿದ್ದಾರೆ ಪೃಥ್ವಿ ಶಾ, ಸೂರ್ಯಕುಮಾರ್​ ಯಾದವ್​

ABOUT THE AUTHOR

...view details