ಕರ್ನಾಟಕ

karnataka

ETV Bharat / sports

ಕೊಹ್ಲಿ ಸರಿಯಾಗಿ ಆಡಲಿಲ್ಲ, ಅವರ ಬ್ಯಾಟಿಂಗ್ ವಿಧಾನ ದೋಷಪೂರಿತವಾಗಿತ್ತು: ಗವಾಸ್ಕರ್​ - ಭಾರತ vs ಇಂಗ್ಲೆಂಡ್​ 2ನೇ ಟೆಸ್ಟ್​

ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ವಿರಾಟ್​ ಕೊಹ್ಲಿ ಕೇವಲ 20 ರನ್​ಗಳಿಸಿ ಸ್ಟಂಪ್​​ನಿಂದ ಹೊರ ಹೋಗುತ್ತಿದ್ದ ಚೆಂಡನ್ನು ಕೆಣಕಿ ಸ್ಯಾಮ್​ ಕರನ್​ ಓವರ್​ನಲ್ಲಿ ಕೀಪರ್​ಗೆ ಕ್ಯಾಚ್​ ನೀಡಿ ಔಟಾದರು. ಕೊಹ್ಲಿ ಆಟದ ಕುರಿತು ಮಾಜಿ ಕ್ರಿಕೆಟರ್​ ಗವಾಸ್ಕರ್​ ಪ್ರತಿಕ್ರಿಯಿಸಿದ್ದಾರೆ.

Virat Kohli hasn't really played well,
ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ

By

Published : Aug 16, 2021, 3:21 PM IST

ನವದೆಹಲಿ:ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಖಂಡಿತ ಉತ್ತಮವಾಗಿ ಆಡಿಲ್ಲ. ಅವರ ಬ್ಯಾಟಿಂಗ್ ತಂತ್ರಗಾರಿಕೆಯಲ್ಲಿ ಬಹುದೊಡ್ಡ ದೋಷ ಕಂಡುಬಂದಿದೆ ಎಂದು ಭಾರತ ತಂಡದ ಮಾಜಿ ನಾಯಕ ಸುನೀಲ್​ ಗವಾಸ್ಕರ್​ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಬ್ಯಾಟಿಂಗ್​ನಲ್ಲಿ ನಿರಾಸೆ ಮೂಡಿಸಿದ್ದಾರೆ. ಕೇವಲ 20 ರನ್​ಗಳಿಸಿ ಸ್ಟಂಪ್​​ನಿಂದ ಹೊರ ಹೋಗುತ್ತಿದ್ದ ಚೆಂಡನ್ನು ಕೆಣಕಿ ಸ್ಯಾಮ್​ ಕರನ್​ ಓವರ್​ನಲ್ಲಿ ಕೀಪರ್​ಗೆ ಕ್ಯಾಚ್​ ನೀಡಿ ಔಟಾದರು. ಈ ರೀತಿ ಔಟಾಗಿರುವುದನ್ನು ಗವಾಸ್ಕರ್ ತಾಂತ್ರಿಕ ದೋಷ ಎಂದು ಪರಿಗಣಿಸಿದ್ದಾರೆ.

ಔಟ್​ ಸೈಡ್​ ಸ್ಟಂಪ್​ ಹೋಗುವ ಚೆಂಡನ್ನು ಆಡುವ ವಿಧಾನ ಅವರಿಗೆ ಯಶಸ್ಸು ತಂದಿದೆ. ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ ಅದೇ ವಿಧಾನಗಳಿಂದ 8000 ರನ್​ ಗಳಿಸಿದ್ದಾರೆ. ಆದರೆ ಈ ಇನ್ನಿಂಗ್ಸ್​ನಲ್ಲಿ ಅವರು ಸ್ಟಂಪ್​ನಿಂದ ಹೊರ ಹೋಗುವ ಚೆಂಡುಗಳನ್ನು ಸ್ವಲ್ಪ ಬೇಗ ಆಡಿದರು. ಈ ಸಂದರ್ಭದಲ್ಲಿ ಅವರ ಕಾಲು ಎಲ್ಲೋ ಇತ್ತು, ಅವರ ಬ್ಯಾಟ್​ ಮತ್ತೆಲ್ಲೋ ಇತ್ತು. ಇದರರ್ಥ ಅವರು ಸರಿಯಾಗಿ ಆಡಲಿಲ್ಲ ಎಂದು ಗವಾಸ್ಕರ್ ಕೊಹ್ಲಿ ವಿಕೆಟ್​ ಒಪ್ಪಿಸಿದ ರೀತಿಯನ್ನು ವಿವರಿಸಿದ್ದಾರೆ.

ಕೊಹ್ಲಿಯ ಬಗ್ಗೆ ಮಾತು ಮುಂದುವರಿಸಿ ಗವಾಸ್ಕರ್ " ನೀವು ಎದುರಾಳಿಯ ವಿಧಾನಕ್ಕೆ ತಕ್ಕಂತೆ ದಾಳಿ ಮಾಡಲು ಪ್ರಯತ್ನಿಸಿದಾಗ ಮತ್ತು ಅದೇ ನಿಮ್ಮ ಉದ್ದೇಶವಾಗಿದ್ದರೆ ಅದು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ನಾವು ಅದನ್ನು ಈ ಪಂದ್ಯದಲ್ಲಿ ನೋಡಿದ್ದೇವೆ. ಪ್ರತಿಯೊಬ್ಬ ಬ್ಯಾಟ್ಸ್‌ಮನ್ ತನ್ನದೇ ಆದ ದಾಳಿಯನ್ನು ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ. ಇದು ಟೆಸ್ಟ್ ಪಂದ್ಯವಾಗಿರುವುದರಿಂದ ತಮ್ಮದೇ ಆದ ವಿಧಾನ ಮುಖ್ಯ ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ.

ಇದನ್ನು ಓದಿ:ಮಂದ ಬೆಳಕಿನಲ್ಲೂ ಬ್ಯಾಟಿಂಗ್: ಸಹಆಟಗಾರರ ಮೇಲೆ ಕೊಹ್ಲಿ ರೋಹಿತ್​ ಅಸಮಾಧಾನ

ABOUT THE AUTHOR

...view details