ದುಬೈ: ಶುಕ್ರವಾರ ಐಸಿಸಿ ಟಿ20 ವಿಶ್ವಕಪ್ ಕ್ವಾಲಿಫೈಯರ್ ಶುಕ್ರವಾರ ಮುಗಿದಿದೆ. ಇಂದಿನಿಂದ ಅಸಲಿ ವಿಶ್ವಕಪ್ ಆರಂಭವಾಗಲಿದ್ದು, 12 ಶ್ರೇಷ್ಠ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ. ಅಗ್ರ 8 ತಂಡಗಳ ಜೊತೆಗೆ ಕ್ವಾಲಿಫೈಯರ್ನಲ್ಲಿ 4 ತಂಡಗಳು ಸೇರ್ಪಡೆಗೊಂಡಿವೆ.
ಇದೇ ಮೊದಲ ಬಾರಿಗೆ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದ್ದ ನಮೀಬಿಯಾ ಶುಕ್ರವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿ ಚೊಚ್ಚಲ ವಿಶ್ವಕಪ್ನಲ್ಲೇ ಸೂಪರ್ 12ಕ್ಕೆ ಪ್ರವೇಶಿಸಿದೆ. ನಮೀಬಿಯಾ ಭಾರತ ತಂಡವಿರುವ 2ನೇ ಗುಂಪುನಲ್ಲಿ ಅವಕಾಶ ಪಡೆದುಕೊಂಡಿದೆ. ಕ್ವಾಲಿಫೈಯರ್ನ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದ ಶ್ರೀಲಂಕಾ ಸೂಪರ್ 12ನಲ್ಲಿ ಒಂದನೇ ಗುಂಪಿನಲ್ಲಿ ಆಡಲಿದೆ.
ಕ್ವಾಲಿಫೈಯರ್ ಎ ಗುಂಪಿನಲ್ಲಿ 3ಕ್ಕೆ 3ಪಂದ್ಯಗಳನ್ನು ಗೆದ್ದಿರುವ ಸ್ಕಾಟ್ಲೆಂಡ್ ಸೂಪರ್ 12ರಲ್ಲಿ 2ನೇ ಗುಂಪಿನಲ್ಲಿ ಆಡಿದರೆ, 2ನೇ ಸ್ಥಾನ ಪಡೆದಿದ್ದ ಬಾಂಗ್ಲಾದೇಶ ಸೂಪರ್ 12ನ ಒಂದನೇ ಗುಂಪಿನಲ್ಲಿ ಆಡಲಿದೆ.
ಸೂಪರ್ 12 ಮೊದಲ ಗುಂಪಿನ ತಂಡಗಳು
ಬಾಂಗ್ಲಾದೇಶ
ಇಂಗ್ಲೆಂಡ್
ಶ್ರೀಲಂಕಾ
ಆಸ್ಟ್ರೇಲಿಯಾ
ದಕ್ಷಿಣ ಆಫ್ರಿಕಾ
ವೆಸ್ಟ್ ಇಂಡೀಸ್
ಸೂಪರ್ 12 ಎರಡನೇ ಗುಂಪಿನ ತಂಡಗಳು
ಸ್ಕಾಟ್ಲೆಂಡ್