ಕರ್ನಾಟಕ

karnataka

ETV Bharat / sports

T20 World Cup: ಬಾಂಗ್ಲಾದೇಶ ಬಗ್ಗುಬಡಿದು ಸೆಮಿಫೈನಲ್ಸ್ ಸನಿಹ ತಲುಪಿದ ದಕ್ಷಿಣ ಆಫ್ರಿಕಾ

ಅಬುಧಾಬಿಯ ಶೇಖ್ ಸೈಯದ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ಎದುರಾಳಿ ಬಾಂಗ್ಲಾದೇಶ ತಂಡವನ್ನು ಕೇವಲ 84 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಈ ಸಾಧಾರಣ ಗುರಿಯನ್ನು 13.3 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಚೇಸ್ ಮಾಡುವ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

South Africa beat Bangladesh by 6 wickets
ಬಾಂಗ್ಲಾದೇಶ ಬಗ್ಗುಬಡಿದು ಸೆಮಿಫೈನಲ್ಸ್​ಗೆ ಮತ್ತಷ್ಟು ಹತ್ತಿರವಾದ ದಕ್ಷಿಣ ಆಫ್ರಿಕಾ

By

Published : Nov 2, 2021, 6:57 PM IST

ಅಬುಧಾಬಿ: ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ತಂಡವನ್ನು 6 ವಿಕೆಟ್​ಗಳಿಂದ ಮಣಿಸುವ ಮೂಲಕ ಸೆಮಿಫೈನಲ್ಸ್​ಗೆ ಮತ್ತಷ್ಟು ಹತ್ತಿರವಾಗಿದೆ.

ಅಬುಧಾಬಿಯ ಶೇಖ್ ಸೈಯದ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ಎದುರಾಳಿ ಬಾಂಗ್ಲಾದೇಶ ತಂಡವನ್ನು ಕೇವಲ 84 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಈ ಸಾಧಾರಣ ಗುರಿಯನ್ನು 13.3 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಚೇಸ್ ಮಾಡುವ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ನಾಯಕ ಟೆಂಬ ಬವೂಮ 28 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ಸಹಿತ ಅಜೇಯ 31 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ವ್ಯಾನ್ ಡರ್ ಡಸೆನ್ 22, ಡಿಕಾಕ್​ 18 ರನ್​ಗಳಿಸಿದರು.

ಬಾಂಗ್ಲಾದೇಶದ ಪರ ತಸ್ಕಿನ್​ ಅಹ್ಮದ್​ 18ಕ್ಕೆ2, ಮೆಹದಿ ಹಸನ್​ 19ಕ್ಕೆ1 ಮತ್ತು ನಸುಮ್ ಸಹ್ಮದ್​ 22ಕ್ಕೆ1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ದಕ್ಷಿಣ ಆಫ್ರಿಕಾ ಬೌಲರ್​ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 18.2 ಓವರ್​ಗಳಲ್ಲಿ ಕೇವಲ 84 ರನ್​ಗಳಿಗೆ ಸರ್ವಪತನಗೊಂಡಿತ್ತು.

8ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಮೆಹೆದಿ ಹಸನ್​ 27 ರನ್ ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು. ಇವರನ್ನು ಹೊರತುಪಡಿಸಿದರೆ ಆರಂಭಿಕ ಬ್ಯಾಟರ್ ಲಿಟನ್ ದಾಸ್​ (24) ಮಾತ್ರ ಬಾಂಗ್ಲಾ ಪರ 20 ರನ್‌ಗಳ ಗಡಿ ದಾಟಿದರು.

ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ 20ಕ್ಕೆ 3, ತಬ್ರೈಜ್ ಶಮ್ಸಿ 21ಕ್ಕೆ 2,, ಎನ್ರಿಚ್ ನಾರ್ಕಿಯಾ 8ಕ್ಕೆ 3 ಹಾಗೂ ಪ್ರೆಟೋರಿಯಸ್​ 11ಕ್ಕೆ1 ವಿಕೆಟ್ ಪಡೆದು ಬಾಂಗ್ಲಾದೇಶವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದರು.

ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲಿ ವೈಫಲ್ಯ: ಕೊಹ್ಲಿ ODI ನಾಯಕತ್ವದಲ್ಲಿ ಮುಂದುವರಿಯುವುದು ಅನುಮಾನ!

ABOUT THE AUTHOR

...view details