ಕರ್ನಾಟಕ

karnataka

ETV Bharat / sports

T20 World Cup: ಡೇಲ್​ ಸ್ಟೇಯ್ನ್ ಪಟ್ಟಿ ಮಾಡಿದ 5 ಅತ್ಯುತ್ತಮ ಬೌಲರ್‌ಗಳು ಇವರೇ.. - ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್

ಕಾಂಗರೂ ನಾಡಿನಲ್ಲಿ ವೇಗಿಗಳಿಗೆ ನೆರವಾಗುವ ಪಿಚ್​ ಇದ್ದು, ಈ ಬಾರಿಯ ವಿಶ್ವಕಪ್​ನಲ್ಲಿ ಪ್ರಭಾವ ಬೀರುವ ಟಾಪ್​ 5 ಬೌಲರ್​ಗಳ ಹೆಸರನ್ನು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್​ ಸ್ಟೇಯ್ನ್​ ಪಟ್ಟಿ ಮಾಡಿದ್ದಾರೆ. ಇದರಲ್ಲಿ ಭಾರತದ ಯಾವೊಬ್ಬ ಬೌಲರ್​ ಕೂಡ ಸ್ಥಾನ ಪಡೆದಿಲ್ಲ.

t20-world-cup
ಡೇಲ್​ ಸ್ಟೇಯ್ನ್ ಪಟ್ಟಿ ಮಾಡಿದ 5 ಅತ್ಯುತ್ತಮ ಬೌಲರ್‌ಗಳು ಇವರೇ..

By

Published : Oct 29, 2022, 12:56 PM IST

ಹೈದರಾಬಾದ್:ಆಸ್ಟ್ರೇಲಿಯಾದಲ್ಲಿ ವೇಗಿಗಳಿಗೆ ಹೇಳಿ ಮಾಡಿಸಿದ ಪಿಚ್​ಗಳಿವೆ. ಇಲ್ಲಿ ವೇಗದ ಬೌಲಿಂಗ್​​ಗೆ ಹೆಚ್ಚು ಶಕ್ತಿಯಿದೆ. ಈ ವಿಶ್ವಕಪ್​ನಲ್ಲಿ ಪೇಸ್, ​​ಸ್ವಿಂಗ್, ಸೀಮ್ ಮೂಲಕ ಬ್ಯಾಟರ್​ಗಳನ್ನು ಬೆದರಿಸುವ ಐವರು ಬೌಲರ್​ಗಳನ್ನು ಮಾಜಿ ವೇಗಿ ದಕ್ಷಿಣ ಆಫ್ರಿಕಾದ ಡೇಲ್​ ಸ್ಟೇಯ್ನ್ ಹೆಸರಿಸಿದ್ದಾರೆ.

ಈ ಐವರು ವಿಶ್ವಕಪ್​ನಲ್ಲಿ ಹೆಚ್ಚು ಪ್ರಭಾವ ಬೀರಲಿದ್ದಾರೆ. ಎದುರಿಗಿರುವ ಬ್ಯಾಟರ್​ಗಳು ಎಂಥವರೇ ಇದ್ದರೂ ನಿರ್ಭೀತಿಯಿಂದ ಬೌಲಿಂಗ್​ ಮಾಡಬಲ್ಲರು ಎಂದು ಹೇಳಿದ್ದಾರೆ.

ಕಗಿಸೊ ರಬಾಡ

ಕಗಿಸೊ ರಬಾಡ ಮತ್ತು ಅನ್ರಿಚ್ ನೋಕಿಯಾ (ದಕ್ಷಿಣ ಆಫ್ರಿಕಾ):ವಿಶ್ವಕಪ್​ನಲ್ಲಿ ಡಾರ್ಕ್​ಹಾರ್ಸ್​ ಎಂದೇ ಕುಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾ ತಂಡದ ಇಬ್ಬರು ಬೌಲರ್​ಗಳಾದ ಕಗಿಸೊ ರಬಾಡ ಮತ್ತು ಅನ್ರಿಚ್ ನೋಕಿಯಾ ಬೌಲಿಂಗ್​ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಶಕ್ತಿ ಇದೆ. ಇಬ್ಬರ ಸಂಯೋಜಿತ ಬೌಲಿಂಗ್​ ತಂಡಕ್ಕೆ ನೆರವಾಗಲಿದೆ. ಅಲ್ಲದೇ ಇದು ವಿಶ್ವಕಪ್​ ಗೆಲ್ಲಲೂ ನೆರವಾಗಲಿದೆ ಎಂದು ಭಾವಿಸುತ್ತೇನೆ.

ಅನ್ರಿಚ್ ನೋಕಿಯಾ

ಆಸ್ಟ್ರೇಲಿಯಾದಂತಹ ವೇಗದ ನಾಡಿನಲ್ಲಿ ರಬಾಡ, ನೋಕಿಯಾ ಯಶಸ್ವಿಯಾಗಲಿದ್ದಾರೆ. ಅವರು ಉತ್ತಮ ಬೌಲಿಂಗ್​ ಕೌಶಲ್ಯವನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾಕ್ಕೆ ಬಂದಾಗಲೆಲ್ಲ ರಬಾಡ ಗುಣಮಟ್ಟದ ಪ್ರದರ್ಶನ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆಲ್ಲುವಲ್ಲಿ ಇವರ ಪಾತ್ರ ಮುಖ್ಯವಾಗಿರಲಿದೆ.

ಮಾರ್ಕ್ ವುಡ್

ಮಾರ್ಕ್ ವುಡ್ (ಇಂಗ್ಲೆಂಡ್):ಇಂಗ್ಲೆಂಡ್​ ಶರವೇಗದ ಬೌಲರ್​ ಮಾರ್ಕ್​ವುಡ್​​ ವಿಶ್ವಕಪ್​ನಲ್ಲಿ ನನ್ನ ಗಮನ ಸೆಳೆದ ವೇಗಿ. 4 ಓವರ್​ಗಳ ಸ್ಪೆಲ್​ನ 24 ಎಸೆತಗಳನ್ನೂ 140 ಕಿಮೀ ವೇಗದಲ್ಲಿ ಎಸೆಯುವ ಆಟಗಾರ. ಈ ವೇಗದಿಂದಲೇ ಬ್ಯಾಟರ್​ಗಳನ್ನು ದಂಗು ಬಡಿಸಿದ್ದಾರೆ. ಇದು ಆತನ ಶಕ್ತಿಯಾಗಿದೆ. ಯಾರ್ಕರ್​, ಬೌನ್ಸರ್​ಗಳಿಂದಲೇ ಬ್ಯಾಟರ್​ಗಳನ್ನು ಕಾಡುತ್ತಾರೆ. ಇದರಿಂದಾಗಿ ಮಾರ್ಕ್​ವುಡ್​ ವಿಶ್ವಕಪ್​ನಲ್ಲಿ ತನ್ನ ಛಾಪು ಮೂಡಿಸಲಿದ್ದಾರೆ.

ಮಿಚೆಲ್ ಸ್ಟಾರ್ಕ್

ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ):ಮಿಚೆಲ್​ ​ಅದ್ಭುತ ವೇಗದ ಬೌಲರ್. ತವರು ನೆಲದ ಸಂಪೂರ್ಣ ಲಾಭ ಪಡೆಯಲಿದ್ದಾರೆ. ಈ ಹಿಂದೆ ವಿಶ್ವಕಪ್​ ಗೆದ್ದ ತಂಡದಲ್ಲೂ ಅವರಿದ್ದರು. ಈ ಅನುಭವ ಅವರಿಗೆ ನೆರವಾಗಲಿದೆ. ಆಸೀಸ್​ನ ಅತಿದೊಡ್ಡ ವಿಕೆಟ್ ಟೇಕರ್, ಎಡಗೈ ಬೌಲರ್​ ಆಗಿದ್ದಾರೆ. ಅವರ ಅಸಾಧಾರಣ ಬೌಲಿಂಗ್​ ಶೈಲಿ ಬ್ಯಾಟರ್​ಗಳಿಗೆ ಸವಾಲಾಗಲಿದೆ.

ಶಾಹೀನ್ ಅಫ್ರಿದಿ

ಶಾಹೀನ್ ಅಫ್ರಿದಿ (ಪಾಕಿಸ್ತಾನ):ಪಾಕಿಸ್ತಾನದ ಖತರ್ನಾಕ್ ವೇಗಿ ಶಾಹೀನಾ ಶಾ ಅಫ್ರಿದಿ ವಿಶ್ವಕಪ್​ನ ಪ್ರಭಾವಿ ಬೌಲರ್​ಗಳಲ್ಲಿ ಒಬ್ಬರಾಗಲಿದ್ದಾರೆ. ಹಿಂದಿನ ಟಿ20 ವಿಶ್ವಕಪ್‌ನಲ್ಲೂ ಅವರ ಆಟವನ್ನು ಗಮನಿಸಿದ್ದೇನೆ. ವೇಗದ ಜೊತೆಗೆ ಉತ್ತಮ ಕೌಶಲ್ಯ ಹೊಂದಿದ್ದಾರೆ. ಬಲಗೈ ಬ್ಯಾಟರ್​ಗಳಿಗೆ ಇವರು ಸವಾಲಾಗುವುದು ಖಂಡಿತ. ನಿಧಾನಗತಿ, ಅತಿ ವೇಗದ ಬೌನ್ಸರ್ ಮತ್ತು ಯಾರ್ಕರ್​ಗಳಿಂದ ಬ್ಯಾಟರ್​ಗಳನ್ನು ಕಾಡಲಿದ್ದಾರೆ.

ಓದಿ:ಮಳೆಗೆ ವಿಶ್ವಕಪ್​ನ 4 ಪಂದ್ಯಗಳು ಡಮಾರ್.. ತಾಳ ತಪ್ಪುತ್ತಾ ತಂಡಗಳ ಸೆಮೀಸ್​​ ಲೆಕ್ಕಾಚಾರ?

ABOUT THE AUTHOR

...view details