ಕರ್ನಾಟಕ

karnataka

ETV Bharat / sports

ಮುಂದುವರಿದ ಪಂಜಾಬ್ ವೈಫಲ್ಯ: SRH ಗೆಲುವಿಗೆ 126ರನ್​ಗಳ ಸಾಧಾರಣ ಗುರಿ - ಜೇಸನ್ ಹೋಲ್ಡರ್ 3 ವಿಕೆಟ್

ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಿರುವ ಪಂಜಾಬ್ ಬ್ಯಾಟರ್​ಗಳು ರಾಹುಲ್ ಮತ್ತು ಮಯಾಂಕ್ ಅಗರ್​ವಾಲ್ ಅವರನ್ನೇ ಹೆಚ್ಚಾಗಿ ಅವಲಂಭಿಸಿದ್ದಾರೆ ಎಂದು ಹಿಂದಿನ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

Sunrisers Hyderabad restrict Punjab kings to 125/7
ಸನ್​ರೈಸರ್ಸ್ ಹೈದರಾಬಾದ್​

By

Published : Sep 25, 2021, 9:26 PM IST

ಶಾರ್ಜಾ:ಪಂಜಾಬ್​ ಕಿಂಗ್ಸ್​ ತಂಡದ ಬ್ಯಾಟಿಂಗ್ ವೈಫಲ್ಯ ಸನ್​ರೈಸರ್ಸ್ ತಂಡದ ವಿರುದ್ಧವೂ ಮುಂದುವರಿದಿದ್ದು ಶನಿವಾರ ನಡೆದ ಪಂದ್ಯದಲ್ಲಿ ಎದುರಾಳಿಗೆ ಕೇವಲ 126 ರನ್​ಗಳ ಗುರಿ ನೀಡಿದೆ.

ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಿರುವ ಪಂಜಾಬ್ ತಂಡ ರನ್​ಗಳಿಕೆಗಾಗಿ ರಾಹುಲ್ ಮತ್ತು ಮಯಾಂಕ್ ಅಗರ್​ವಾಲ್ ಅವರನ್ನೇ ಹೆಚ್ಚಾಗಿ ಅವಲಂಭಿಸಿದ್ದಾರೆ ಎಂದು ಇಂದಿನ ಪಂದ್ಯದಲ್ಲೂ ಮತ್ತೊಮ್ಮೆ ಸಾಬೀತಾಗಿದೆ.

ಟಾಸ್ ಕಳೆದುಕೊಂಡು ಬ್ಯಾಟಿಂಗ್ ಇಳಿದಿದ್ದ ಪಂಜಾಬ್ ಕಿಂಗ್ಸ್ 27 ರನ್​ಗಳಿಸುವಷ್ಟರಲ್ಲಿ ನಾಯಕ ಕೆಎಲ್ ರಾಹುಲ್(21)​ ಮತ್ತು ಮಯಾಂಕ್​ ಅಗರ್​ವಾಲ್​ (5) ಜೇಸನ್​ ಹೋಲ್ಡರ್​ ಎಸೆದ ಒಂದೇ ಓವರ್​ನಲ್ಲಿ ಔಟಾದರು. ಅದ್ಭುತ ಫಾರ್ಮ್​ನಲ್ಲಿದ್ದ ಇವರಿಬ್ಬರ ಪತನದ ನಂತರ ಪಂಜಾಬ್​ ಚೇತರಿಕೆ ಕಾಣಲಾಗಲಿಲ್ಲ.

ಅನುಭವಿ ಕ್ರಿಸ್​ ಗೇಲ್​(14) ಮತ್ತು ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಮ್​(27) 3ನೇ ವಿಕೆಟ್​ಗೆ 30 ರನ್​ಗಳ ಜೊತೆಯಾಟ ನೀಡಿದರಾದರೂ ಇದಕ್ಕಾಗಿ 35 ಎಸೆತ ತೆಗೆದುಕೊಂಡರು. ಮಾರ್ಕ್ರಮ್ 32 ಎಸೆತಗಳಲ್ಲಿ 27 ರನ್​ಗಳಿಸಿ ಅಬ್ದುಲ್ ಸಮದ್​ಗೆ. ಗೇಲ್ ರಶೀದ್​ ಖಾನ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

ನಂತರ ಪಂಜಾಬ್ ಬ್ಯಾಟರ್​ಗಳು ಪೆವಿಲಿಯನ್​ ಪರೇಡ್ ನಡೆಸಿದರು. ಪೂರನ್​ 8, ದೀಪಕ್ ಹೂಡ 13, ನೇಥನ್ ಎಲ್ಲಿಸ್​ 12, ರನ್​ಗಳಿಸಿದರು. ಹರ್​ಪ್ರೀತ್​ ಬ್ರಾರ್​ ಅಜೇಯ1 8 ರನ್​ಗಳಿಸಿ ತಂಡದ ಮೊತ್ತವನ್ನು 100 ಗಡಿ ದಾಟುವುದಕ್ಕೆ ಅಲ್ಪ ಕಾಣಿಕೆ ನೀಡಿದರು.

ಸನ್​ರೈಸರ್ಸ್ ಹೈದರಾಬಾದ್​​ ಪರ ಜೇಸನ್ ಹೋಲ್ಡರ್​ 13ಕ್ಕೆ 3, ರಶೀದ್​ ಖಾನ್ 17ಕ್ಕೆ1, ಅಬ್ದುಲ್ 9ಕ್ಕೆ1, ಭುವನೇಶ್ವರ್​ ಕುಮಾರ್​ 34ಕ್ಕೆ1, ಸಂದೀಪ್ ಶರ್ಮಾ 20ಕ್ಕೆ1 ವಿಕೆಟ್​ ಪಡೆದರು.

ABOUT THE AUTHOR

...view details