ಹೋಬರ್ಟ್(ಆಸ್ಟ್ರೇಲಿಯಾ):ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನ ಸೂಪರ್ 12 ಹಂತದ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವಿನ ಪಂದ್ಯವನ್ನು ವರುಣದೇವ ಆಪೋಷನ ಪಡೆದಿದ್ದಾನೆ. ಭಾರಿ ಮಳೆಯಿಂದಾಗಿ ಪಂದ್ಯವನ್ನು ಫಲಿತಾಂಶವಿಲ್ಲದೇ ರದ್ದುಪಡಿಸಲಾಗಿದೆ. ಇತ್ತಂಡಗಳಿಗೂ ಒಂದೊಂದು ಅಂಕಗಳು ದೊರೆತಿವೆ.
ಪಂದ್ಯಾರಂಭಕ್ಕೂ ಮುನ್ನವೇ ಮಳೆ ಆರಂಭವಾದ ಕಾರಣ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. 2 ಗಂಟೆಗೂ ಅಧಿಕ ಕಾಲ ಮಳೆ ಸುರಿದು ಪಿಚ್ ಒದ್ದೆಯಾಗಿತ್ತು. ನಿಂತ ಬಳಿಕ ಪಿಚ್ ಒಣಗಿಸಿ ಆಟಕ್ಕೆ ಮೈದಾನವನ್ನು ಸಿದ್ಧಪಡಿಸಲಾಗಿತ್ತು. ಸಮಯದ ಆಭಾವದ ಕಾರಣ ಪಂದ್ಯವನ್ನು ತಲಾ 9 ಓವರ್ಗಳಿಗೆ ಕಡಿತಗೊಳಿಸಲಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 9 ಓವರ್ಗಳಲ್ಲಿ 5 ವಿಕೆಟ್ಗೆ 79 ರನ್ ಗಳಿಸಿತು. ವೆಸ್ಲೇ ಮಧೆವೆರೆ ಬಿರುಸಿನ ಬ್ಯಾಟ್ ಮಾಡಿ 35 ರನ್ ಬಾರಿಸಿದರು. ಇದರಲ್ಲಿ 4 ಬೌಂಡರಿ 1 ಸಿಕ್ಸರ್ ಸೇರಿದ್ದವು. ಮಿಲ್ಟನ್ ಶುಂಬಾ 18 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರವಾಗಿ ಲುಂಗಿ ಎನ್‌ಗಿಡಿ 2 ಮತ್ತು ವೇಯ್ನ್ ಪಾರ್ನೆಲ್, ಆನ್ರಿಚ್ ನೋಕಿಯಾ ತಲಾ 1 ವಿಕೆಟ್ ಪಡೆದರು.